ಮೋದಿ ದೇಶಕ್ಕೆ ಹಿಡಿದಿರುವ ಶನಿ; ಜೂ.4ರ ಬಳಿಕ ಬಿಟ್ಟು ಹೋಗಲಿದೆ; ಪ್ರಧಾನಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಿಂದನೆ!
ಈ ದೇಶಕ್ಕೆ ಹಿಡಿದಿರುವ ಶನಿ ಅಂದರೆ ಅದು ಮೋದಿ. ಜೂನ್.4 ಕ್ಕೆ ನಾವು ಕಾಯುತ್ತಿದ್ದೇವೆ, ಈ ದೇಶಕ್ಕೆ ಹಿಡಿದಿರುವ ಶನಿ ಬಿಟ್ಟು ಹೋಗಲಿ ಎಂದು. ದೇವರಲ್ಲಿ ಕೈ ಮುಗಿದು ಬೇಡಿಕೊಂಡಿದ್ದೇವೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಿಂದನೆ ಮಾಡಿದ್ದಾರೆ.
ಕೋಲಾರ (ಏ.21): ಈ ದೇಶಕ್ಕೆ ಹಿಡಿದಿರುವ ಶನಿ ಅಂದರೆ ಅದು ಮೋದಿ. ಜೂನ್.4 ಕ್ಕೆ ನಾವು ಕಾಯುತ್ತಿದ್ದೇವೆ, ಈ ದೇಶಕ್ಕೆ ಹಿಡಿದಿರುವ ಶನಿ ಬಿಟ್ಟು ಹೋಗಲಿ ಎಂದು. ದೇವರಲ್ಲಿ ಕೈ ಮುಗಿದು ಬೇಡಿಕೊಂಡಿದ್ದೇವೆ ಎಂದು ಮಾಜಿ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನಿಂದನೆ ಮಾಡಿದ್ದಾರೆ.
ಕೋಲಾರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ ದೇಶಕ್ಕೆ ಹಿಡಿದಿರುವ ಶನಿ. ಜೂನ್ 4ರ ಫಲಿತಾಂಶದ ಬಳಿಕ ಈ ದೇಶಕ್ಕೆ ಹಿಡಿದಿರುವ ಶನಿ ಬಿಟ್ಟು ಹೋಗಲಿ ಎಂದು ದೇವರಲ್ಲಿ ಕೈ ಮುಗಿದು ಬೇಡಿಕೊಂಡಿದ್ದೇವೆ. ಇಂದಿರಾಗಾಂಧಿ ಕೂತಿದ್ದ ಸೀಟಲ್ಲಿ ಬಂದು ಕೂತುಬಿಟ್ಟ. ಇಂದಿರಾ ಗಾಂಧಿ ಎಲ್ಲಾ ಜಾತಿ ಜನಾಂಗದವರಿಗೆ ಆತ್ಮಸ್ಥೈರ್ಯ ತುಂಬಿದ್ದರು. ಎಂತಹವರ ಜಾಗಕ್ಕೆ ಎಂತಹವನು ಬಂದು ಕೂತಿದ್ದಾನೆ. ಸಂತೆಯಲ್ಲಿ ಹಾವಾಡಿಗ ಸುಳ್ಳು ಹೇಳೊದು ಕೇಳಿದ್ದೆವೆ. ಆದರೆ, ಒಬ್ಬ ಪ್ರಧಾನಿ ಸುಳ್ಳು ಹೇಳೊದು ಈ ಪ್ರಪಂಚದಲ್ಲಿಯೇ ಕೇಳಿರಲಿಲ್ಲ ಎಂದು ಟೀಕೆ ಮಾಡಿದರು.
ಮಂಡ್ಯದಲ್ಲಿ ಕುಮಾರಸ್ವಾಮಿ ಸೋಲಿಸಿ ಚನ್ನಪಟ್ಟಣಕ್ಕೆ ವಾಪಸ್ ಕಳಿಸಿ: ಸಿಎಂ ಸಿದ್ದರಾಮಯ್ಯ
ಮಾಜಿ ಪ್ರಧಾನಿ ದೇವೇಗೌಡ ಅವರ ನೆರಳಿಗೆ ಹೋಗಿ ಬದುಕಿ ಚೆನ್ನಾಗಿ ಆದವರು ಯಾರೂ ಇಲ್ಲ. ಚೆನ್ನಾಗಿ ಬದುಕಿದವರಿಗೇನು ಈ ಗತಿ ಬಂತು ಎಂದು ನನಗೆ ದುಃಖವಾಗಿದೆ. ಇರಲಿ ರೈತನ ಮಗ ಎಂದು ಪ್ರಧಾನಿ ಮಾಡಿದ್ದೆವು. ಆತನ ಮಗ ಮುಖ್ಯಮಂತ್ರಿಯಾಗಿದ್ದರು. ಇವರು ಸೇರಿದ್ದು ಬಿಜೆಪಿ ಜೊತೆಗೆ. ಒಬ್ಬ ಪ್ರಧಾನ ಮಂತ್ರಿ, ಒಬ್ಬ ಮುಖ್ಯಮಂತ್ರಿ ಸೇರಿ ಕೇವಲ 3 ಸೀಟುಗಳನ್ನ ತೆಗೆದುಕೊಂಡಿದ್ದಾರೆ. ಅದರಲ್ಲೂ ಒಂದು ಮಗನಿಗೆ, ಇನ್ನೊಂದು ಮೊಮ್ಮಗನಿಗೆ ಸೀಟು ತೆಗೆದುಕೊಂಡಿದ್ದಾರೆ. ಜೊತೆಗೆ, ಅಳಿಯನನ್ನ ನಿಮ್ಮ ಲೆಕ್ಕದಲ್ಲಿ ಕೊಡಿ ಎಂದು ಅಲ್ಲಿಗೆ ಕಳಿಸಿದ್ದಾರೆ. ಇವರ ಹಣೆಬರಹಕ್ಕೆ ಅವರತ್ರ ಹೋಗಿ ಸಲಾಂ ಹೊಡೆಯುತ್ತಿದ್ದಾರೆ ಎಂದು ಕಟುವಾಗಿ ಟೀಕಿಸಿದರು.
ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರ ಬಗ್ಗೆ ಮಾತನಾಡಿ, ಅವನ್ಯಾರೋ ಒಬ್ಬ ದೊಡ್ಡಮನುಷ್ಯ ಆಗಿದ್ದ. ಅವನು ಬಿಟ್ಟರೆ ಬೆಳಕು ಆಗೋದಿಲ್ಲ, ಬ್ಯಾಂಕು ಇರೋದಿಲ್ಲ, ಸಾಲನೂ ಸಿಗೋದಿಲ್ಲ ಎನ್ನುತ್ತಿದ್ದ. ಎಲ್ಲಪ್ಪ, ಎಲ್ಲಿದ್ದಿಯೋ, ಬದುಕಿದ್ದಿಯೇನಪ್ಪಾ? ನೀನು ಶ್ರೀಕೃಷ್ಣನ ತರಹ, ನೂರಾರು ಕಡೆ ಜೀವನ ಮಾಡೋನು. ಎಲ್ಲಿದ್ಯಪ್ಪ, ಇವತ್ತು ಹಾಲ್ಟ್ ಎಲ್ಲಪ್ಪ ಮಗನೆ. ಶೆಡ್ಯೂಲ್ಡ್ ಕ್ಯಾಸ್ಟ್ ಅವರಿಗೆ ಒಂದು ರೂಪಾಯಿ ಸಾಲ ಕೊಡ್ತಿರ್ಲಿಲ್ಲ. ಬಡವರಿಗೆ ಮಹಿಳೆಯರಿಗೆ ಸಾಲ ಕೊಡಿತ್ತಿರಲಿಲ್ಲ. ಸಾಲ ಕೊಟ್ಟದ್ದು ರಮೇಶ್ ಕುಮಾರ್ ಕಣ್ಣು ಬಿಟ್ಟ ಮೇಲೆ ಎಂದು ವಾಗ್ದಾಳಿ ಮಾಡಿದರು.
ಎಚ್.ಡಿ.ಕುಮಾರಸ್ವಾಮಿ ಪರ ಪ್ರಚಾರಕ್ಕೆ ಬಿಜೆಪಿ ನನ್ನ ಕರೆದಿಲ್ಲ: ಸುಮಲತಾ ಅಂಬರೀಶ್
ಈ ಚುನಾವಣೆಯಲ್ಲಿ ರಮೇಶ್ ಕುಮಾರ್ ನ ಕೆಳಗೆ ಇಳಿಸಿದ್ದೀರ. ಈಗ ನಿಮಗೆ ಒಂದು ರೂಪಾಯಿ ಕೊಟ್ಟಿದ್ದೀರಾ? ಏನು ಹೇಳ್ತಿರಾ? ನನ್ನ ಮೇಲೆ ಕಳ್ಳತನ ಮಾಡಿದಾರೆ ಅಂತ ಹೇಳ್ತಿರಾ. ಅಸೆಂಬ್ಲಿಯಲ್ಲಿ ಮಾತನಾಡಿಲ್ಲ ಅಂತ ಹೇಳ್ತಿರ. ಲಂಚ ತೆಗೆದುಕೊಂಡಿದ್ದಾನೆ ಅಂತ ಹೇಳ್ತಿರಾ? ಏನಿದೆ ನನ್ನ ಮೇಲೆ ನೀವು ಹೇಳುವುದಕ್ಕೆ? ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಾಗ್ದಾಳಿ ನಡೆಸಿದರು.