Asianet Suvarna News Asianet Suvarna News

Karnataka Politics: ಈಗಿರುವ ಕಾಂಗ್ರೆಸ್‌ ತಾಯಿ-ಮಕ್ಕಳ ಪಕ್ಷ: ಗೋವಿಂದ ಕಾರಜೋಳ ವ್ಯಂಗ್ಯ

ಈಗಿರುವುದು ಕಾಂಗ್ರೆಸ್‌ ಪಕ್ಷವೇ ಅಲ್ಲ, ಅದು ತಾಯಿ-ಮಕ್ಕಳ ಪಕ್ಷ. ಅವರಿಗೆ ಸ್ವಾಮಿನಿಷ್ಠೆ ತೋರಿದವರಿಗೆ ಮಾತ್ರ ಸ್ಥಾನಮಾನ ಸಿಗುತ್ತವೆ ಎಂದು ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು.

Present Congress mother-son party says  Govinda Karajola at hubballi rav
Author
First Published Mar 17, 2023, 12:40 PM IST

ಹುಬ್ಬಳ್ಳಿ (ಮಾ.17) : ಈಗಿರುವುದು ಕಾಂಗ್ರೆಸ್‌ ಪಕ್ಷವೇ ಅಲ್ಲ, ಅದು ತಾಯಿ-ಮಕ್ಕಳ ಪಕ್ಷ. ಅವರಿಗೆ ಸ್ವಾಮಿನಿಷ್ಠೆ ತೋರಿದವರಿಗೆ ಮಾತ್ರ ಸ್ಥಾನಮಾನ ಸಿಗುತ್ತವೆ ಎಂದು ಸಚಿವ ಗೋವಿಂದ ಕಾರಜೋಳ(Govind karjol) ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 60 ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್‌(Congress) ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಅನೇಕ ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್‌ ಸಂಪರ್ಕ, ಕುಡಿಯುವ ನೀರು ಇರಲಿಲ್ಲ. ಆದರೆ ದೇಶದ ಅಭಿವೃದ್ಧಿ ಬಗ್ಗೆ ಕನಸು ಕಂಡಿದ್ದ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ರೋಗ ಮುಕ್ತಗೊಳಿಸಲು ಜಲಜೀವನ್‌ ಮಿಷನ್‌ ಯೋಜನೆ ಮೂಲಕ ಶುದ್ಧ ನೀರು ಕೊಟ್ಟಿದ್ದಾರೆ. 18 ಸಾವಿರ ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕ ನೀಡಲಾಗಿದೆ. ಬಡವರಿಗೆ ಬ್ಯಾಂಕ್‌ನ ಮುಖವನ್ನು ತೋರಿಸುವ ಕಾರ್ಯ ಕಾಂಗ್ರೆಸ್‌ ಮಾಡಲಿಲ್ಲ. 49 ಕೋಟಿ ಕಡುಬಡವರು ಇದೀಗ ಬ್ಯಾಂಕ್‌ ಖಾತೆ ಹೊಂದುವಂತೆ ಮಾಡಿರುವುದು ಮೋದಿ ಅವರು ಎಂದರು.

ಕೆಂಪಣ್ಣನ ಆರೋಪದ ಹಿಂದೆ ‘ಕೈ’ ವಾಡ ಇದೆ: ಸಚಿವ ಸಿ.ಸಿ. ಪಾಟೀಲ

ಕೆಂಪಣ್ಣ ಕೇವಲ ಆರೋಪ ಮಾಡಿದ್ದಾರೆ. ಅವರ ಬಳಿ ಯಾವುದೇ ದಾಖಲೆ ಇಲ್ಲ. ಕಾಂಗ್ರೆಸ್‌ನವರು ಬಿಳಿ ಹಾಳೆ ಇಟ್ಟುಕೊಂಡು ಓಡಾಡುತ್ತಿದ್ದಾರೆ. ಸಿದ್ದರಾಮಯ್ಯ ಸುಳ್ಳು ಆರೋಪ ಮಾಡಿ ಮತ ಕೇಳುತ್ತಿದ್ದಾರೆ. ದೇಶ ಅಷ್ಟೆಅಲ್ಲದೆ, ರಾಜ್ಯದೆಲ್ಲೆಡೆ ಜೈಲಿಗೆ ಹೋಗಿ ಬಂದ ಕಾಂಗ್ರೆಸ್‌ನವರು ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಅವಸಾನದ ಅಂಚಿನಲ್ಲಿದೆ. ವಿಧಾನಸಭೆ ಚುನಾವಣೆ ನಂತರ ಅದು ರಾಜ್ಯದಲ್ಲಿ ಸಮಾಪ್ತಿಗೊಳ್ಳಲಿದೆ. ಮುಂದೆ ಕಾಂಗ್ರೆಸ್‌ ಕಚೇರಿಯಲ್ಲಿ ದೀಪ ಹಚ್ಚಲೂ ಯಾರು ಸಿಗಲ್ಲ ಎಂದು ಟೀಕಿಸಿದರು.

ಅಧಿಕಾರ ಖಚಿತ:

ರಾಜ್ಯದಲ್ಲಿ ಪೌರಕಾರ್ಮಿಕರನ್ನು ಸರ್ಕಾರಿ ನೌಕರರನ್ನಾಗಿ ನೇಮಕ ಮಾಡಲಾಗಿದೆ. ರೈತ ವಿದ್ಯಾನಿಧಿ ಮೂಲಕ ರೈತರ ಮಕ್ಕಳಿಗೆ ನೆರವಾಗಿದ್ದೇವೆ. 2.87 ಲಕ್ಷ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣಕ್ಕೆ ನೆರವು ನೀಡಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿವೃದ್ಧಿ, ಸಾಮಾಜಿಕ ನ್ಯಾಯ ಹಾಗೂ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. ಮುಂಬರುವ ಚುನಾವಣೆ ಗಮನದಲ್ಲಿಟ್ಟುಕೊಂಡು ಸರ್ಕಾರ ಸಾಧನೆ, ಅಭಿವೃದ್ಧಿ ಸಾರಲು ವಿಜಯ ಸಂಕಲ್ಪ ಯಾತ್ರೆ ನಡೆಸುತ್ತಿದ್ದೇವೆ. ಖಂಡಿತವಾಗಿಯೂ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಅದರಲ್ಲಿ ಯಾವುದೇ ಸಂಶಯ ಬೇಡ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

ದಾವಣಗೆರೆ ಉತ್ತರ: ವಯೋಮಿತಿ ಪೊರೆ ಕಳಚಿದ ರವೀಂದ್ರನಾಥ್‌ಗೆ ಎಸ್ಸೆಸ್ಸೆಂ ಸವಾಲು

ತುಪ್ಪರಿಹಳ್ಳ ಯೋಜನೆಗೆ .312 ಕೋಟಿ ಮಂಜೂರಾಗಿದೆ. ಟೆಂಡರ್‌ ಪ್ರಕ್ರಿಯೆ ಪೂರ್ಣವಾಗಿದೆ. ಶೀಘ್ರದಲ್ಲಿ ಕಾಮಗಾರಿ ನಡೆಯಲಿದೆ. ನೀರಾವರಿ ಯೋಜನೆಗೆ ಜಾರಿಗೆ ಉತ್ತರ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಅನುದಾನ ನೀಡಲಾಗಿದೆ. ಬಿ.ಎಸ್‌. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ .75 ಸಾವಿರ ಕೋಟಿ ನೀಡಿದ್ದಾರೆ. 1.95 ಕೋಟಿ ಹೆಕ್ಟೇರ್‌ ಪ್ರದೇಶದಲ್ಲಿ ನೀರಾವರಿ ಯೋಜನೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಈ ವೇಳೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಸಿ.ಸಿ.ಪಾಟೀಲ ಸೇರಿದಂತೆ ಹಲವರಿದ್ದರು.

Follow Us:
Download App:
  • android
  • ios