ಬಿ ಎಸ್ ಯಡಿಯೂರಪ್ಪ ಅಧಿಕಾರಕ್ಕೆ ಏರಲು ಸಹಕಾರ ನೀಡಿದ ಅವರು ಮುಖ್ಯಮಂತ್ರಿಯಾಗಲು ತ್ಯಾಗ ಮಾಡಿದ ಈ ಮುಖಂಡರ ಗೆಲುವು ನಿಶ್ಚಿತ. ಹೆಚ್ಚಿನ ಅಂತರದಲ್ಲಿಯೇ ಅವರು ಗೆಲ್ಲಲಿದ್ದಾರೆ ಎಂದ ಸಿಎಂ ಪುತ್ರ ಬಿ ವೈ ವಿಜಯೇಂದ್ರ ಹೇಳಿದರು. 

 ಕೊಪ್ಪಳ (ಮಾ.21):  ಪ್ರತಾಪಗೌಡ ಅವರಂತಹವರು ತಮ್ಮ ಶಾಸಕ ಸ್ಥಾನವನ್ನು ತ್ಯಾಗ ಮಾಡಿದ್ದರಿಂದಲೇ ಇಂದು ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

"

ಮಸ್ಕಿಗೆ ತೆರಳುವ ಮುನ್ನ ಕನಕಗಿರಿಯಲ್ಲಿ ಶನಿವಾರ ಕನಕಾಚಲ ಲಕ್ಷ್ಮೀ ನರಸಿಂಹ ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತ್ಯಾಗ ಮಾಡಿದವರನ್ನು ಸ್ಮರಿಸಬೇಕು ಮತ್ತು ಅವರ ಗೆಲುವಿಗಾಗಿ ಶ್ರಮಿಸಬೇಕು. 

ಕೆ.ಆರ್.ಪೇಟೆ, ಶಿರಾ ಆಯ್ತು ಈಗ ವಿಜಯೇಂದ್ರನ ಮಸ್ಕಿ ದಂಡಯಾತ್ರೆ ...

ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬರಲು ಮೊದಲ ಹೆಜ್ಜೆಯನ್ನು ಇಟ್ಟಿದ್ದೇ ಪ್ರತಾಪಗೌಡ. ಯಡಿಯೂರಪ್ಪ ಸರ್ಕಾರವನ್ನು ಮತ್ತಷ್ಟುಬಲಗೊಳಿಸಲು ಪ್ರತಾಪಗೌಡರನ್ನು ಭರ್ಜರಿಯಾಗಿಯೇ ಜನ ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು. ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಅವರನ್ನು ನಾನು ಒಂದು ಸಮುದಾಯದ ನಾಯಕ ಎಂದು ಹೇಳುವುದಿಲ್ಲ. ಅವರು ಎಲ್ಲ ಸಮುದಾಯದ ನಾಯಕರಾಗಿದ್ದಾರೆ. ಹೀಗಾಗಿ, ಅವರು ಪಕ್ಷಕ್ಕೆ ಬಂದಿದ್ದು ಆನೆ ಬಲಬಂದಂತಾಗಿದೆ. ಇದು ಪ್ರತಾಪಗೌಡ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಸಿ.ಡಿ. ವಿಚಾರ ಮಾತನಾಡುವುದು ಬೇಡ. ನಾವು ಚುನಾವಣೆ ಎಂಬ ಯುದ್ಧಕ್ಕೆ ತೆರಳುತ್ತಿದ್ದೇವೆ. ಹೀಗಾಗಿ, ಆ ವಿಷಯದ ಮಾತುಕತೆ ಬೇಡ ಎಂದರು. ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಅವರ ಕುರಿತು ಕೇಳಿದ ಪ್ರಶ್ನೆಗೂ ಉತ್ತರಿಸದೆ ಮುಂದೆ ಸಾಗಿದರು.

ಈಗಾಗಲೇ ಈ ಹಿಂದೆ ನಡೆದ 12 ಉಪ ಚುನಾವಣೆಯಲ್ಲಿಯೂ ಬಿಜೆಪಿ ಜಯ ಸಾಧಿಸಿದೆ. ಹೀಗಾಗಿ, ಈ ಬಾರಿಯೂ ಉಪ ಚುನಾವಣೆಯಲ್ಲಿ ಗೆಲವು ನಿಶ್ಚಿತ ಎಂದರು.