ವಿಧಾನಪರಿಷತ್ ಸಭಾಪತಿ ರಾಜೀನಾಮೆ: ಬಿಜೆಪಿ ಬಯಸಿದ್ದು ಇದನ್ನೇ
ತಮ್ಮನ್ನು ಕೆಳಗಿಳಿಸಲು ಬಿಜೆಪಿ ಮಾಡಿತ್ತಿದ್ದ ಪ್ಲಾನ್ ತಿಳಿದು ವಿಧಾನಪರಿಷತ್ ]ಸಭಾಪತಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿಜೆಪಿಯ ಹಾದಿ ಸುಗಮವಾಗಿದೆ.
ಬೆಂಗಳೂರು,(ಫೆ.04): ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನ ಪ್ರತಾಪ್ ಚಂದ್ರ ಶೆಟ್ಟಿ ಇಂದು ರಾಜೀನಾಮೆ ನೀಡಿದ್ದಾರೆ.
ವಿಧಾನಪರಿಷತ್ತಿನ ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನ ಪ್ರತಾಪಚಂದ್ರಶೆಟ್ಟಿ ಅವರು ಗುರುವಾರ ಸಂಜೆ ಸದನದಲ್ಲಿಯೇ ರಾಜೀನಾಮೆ ಪ್ರಕಟಿಸಿದ್ದು, ರಾಜೀನಾಮೆ ಪತ್ರವನ್ನು ಉಪಸಭಾಪತಿಗೆ ನೀಡಿದ್ದಾರೆ.
ಈ ಶುಕ್ರವಾರ ಉಪಸಭಾಪತಿಯು ಸದನ ಸಮಿತಿ ಸಭೆ ಕರೆದು ಸದನವನ್ನು ಎರಡು ದಿನ ಮುಂದುವರೆಸುವ ಅವಕಾಶ ಕೇಳುವ ಸಾಧ್ಯತೆ ಇದೆ. ಇನ್ನೊಂದೆಡೆ ಸಭಾಪತಿ ಹುದ್ದೆಯನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟು, ಉಪಸಭಾಪತಿ ಹುದ್ದೆಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸುವ ಸಾಧ್ಯತೆಗಳಿವೆ.
ಇದು ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಆಂತರಿಕ ಒಪ್ಪಂದ ಎಂದು ಹೇಳಲಾಗಿದೆ. ಸಭಾಪತಿ ಹುದ್ದೆಗೆ ಜೆಡಿಎಸ್‌ನಿಂದ ಬಸವರಾಜ್ ಹೊರಟ್ಟಿ ಹೆಸರು ಕೇಳಿಬರುತ್ತಿದೆ.
ವಿಧಾನಪರಿಷತ್ತಿನ ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನ ಪ್ರತಾಪಚಂದ್ರಶೆಟ್ಟಿ ಅವರು ಗುರುವಾರ ಸಂಜೆ ಸದನದಲ್ಲಿಯೇ ರಾಜೀನಾಮೆ ಪ್ರಕಟಿಸಿದರು. ಸಂಖ್ಯಾಬಲದ ಆಧಾರದ ಮೇಲೆ ಮುಂದಿನ ಬಜೆಟ್ ಅಧಿವೇಶನದವರೆಗೂ ಈ ಸ್ಥಾನದಲ್ಲಿ ಮುಂದುವರಿಯಲು ಅವಕಾಶವಿದ್ದರೂ, ಬೇರೆಯವರ ಇಚ್ಛೆ ಬೇರೆಯೇ ಇರುವುದರಿಂದ ನಾನು ಸ್ಥಾನ ತ್ಯಾಗ ಮಾಡುತ್ತಿದ್ದೇನೆ' ಎಂದು ಪ್ರತಾಪಚಂದ್ರಶೆಟ್ಟಿ ಸೂಚ್ಯವಾಗಿ ತಮ್ಮ ವಿದಾಯ ಭಾಷಣದಲ್ಲಿ ಹೇಳಿದರು.
ನನ್ನ ಅವಧಿಯಲ್ಲಿ ಒಂದು ಅಹಿತಕರ ಘಟನೆ ಕೂಡ ನಡೆದಿದೆ. ಮೇಲ್ಮನೆಯ 113 ವರ್ಷಗಳ ಇತಿಹಾಸದಲ್ಲಿ ಇಂತಹ ಘಟನೆ ಎಂದೂ ನಡೆದಿರಲಿಲ್ಲ. ಅದರ ಬಗ್ಗೆ ನನಗೆ ವಿಷಾದವಿದೆ. ನನ್ನ 37 ವರ್ಷಗಳ ರಾಜಕೀಯ ಜೀವನದಲ್ಲಿ ನಾನು ನಡೆನುಡಿಯಲ್ಲಿ ಯಾವುದೇ ವ್ಯತ್ಯಾಸವಾಗದಂತೆ ವರ್ತಿಸಿದ್ದೇನೆ'' ಎಂದು ಭಾವುಕರಾಗಿ ಹೇಳಿದರು.
ಕಳೆದ ಬಾರಿ ಪ್ರತಾಪ್ ಚಂದ್ರ ಶೆಟ್ಟಿಯವರನ್ನು ಪದಚ್ಯುತಿಗೊಳಿಸಲೆಂದೇ ವಿಶೇಷ ಅಧಿವೇಶನವನ್ನು ಕರೆಯಲಾಗಿತ್ತು. ಆದರೆ ಪರಿಷತ್‌ನಲ್ಲಿ ಹಿಂದೆದೂ ನೋಡಿರದ ರೀತಿಯ ಅಹಿತಕರ ಘಟನೆಗಳು ನಡೆದಿದ್ದವು.