Asianet Suvarna News Asianet Suvarna News

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಯಲ್ಲಿ ಜೋಶಿ ಸೇರಿ ಅಚ್ಚರಿ ನಾಯಕರಿಗೆ ಸ್ಥಾನ

* ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಅಂತಿಮ ಗೊಳಿಸಿದ ಜೆಪಿ ನಡ್ಡಾ

* ಜೆಪಿ ನಡ್ಡಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

* ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿ 80 ಜನರಿಗೆ ಸ್ಥಾನ

* ಕರ್ನಾಟಕದ ಇಬ್ಬರು ಸಚಿವರಿಗೆ ಅವಕಾಶ

Pralhad joshi and Nirmala sitharaman in BJP  National Executive committee  mah
Author
Bengaluru, First Published Oct 7, 2021, 5:22 PM IST
  • Facebook
  • Twitter
  • Whatsapp

ನವದೆಹಲಿ(ಅ. 07) ಬಿಜೆಪಿ(BJP) ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ಸದಸ್ಯರನ್ನು ಅಧ್ಯಕ್ಷ  ಜೆಪಿ ನಡ್ಡಾ(JP Nadda) ಅಂತಿಮಗೊಳಿಸಿದ್ದಾರೆ. ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿ 80 ಜನರಿಗೆ ಸ್ಥಾನ ಸಿಕ್ಕಿದೆ.  ಕರ್ನಾಟಕದ ಇಬ್ಬರು ಕೇಂದ್ರ ಸಚಿವರಿಗೆ ಅವಕಾಶ ಸಿಕ್ಕಿದೆ.

ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ (Pralhad Joshi) ಮತ್ತು ನಿರ್ಮಲಾ ಸೀತಾರಾಮನ್ (Nirmala Sitharaman)ಗೆ ಅವಕಾಶ ದೊರೆತಿದೆ. 50 ಜನ ವಿಶೇಷ ಆಹ್ವಾನಿತರ ನೇಮಕ ಮಾಡಲಾಗಿದೆ. ವಿಶೇಷ ಆಹ್ವಾನಿತರಾಗಿ ಕರ್ನಾಟಕದ ಸಂಸದ ಉಮೇಶ್ ಜಾಧವ್ ಗೆ ಅವಕಾಶ ಸಿಕ್ಕಿದೆ.

ಕರ್ನಾಟಕದಲ್ಲಿ ರಂಗೇರಿದ ಉಪಚುನಾವಣಾ ಕಣ

179 ಜನ ಅಜೀವ ಸಮಿತಿ ಸದಸ್ಯರಾಗಿ ನೇಮಕ ಮಾಡಲಾಗಿದೆ. ಸಂಸದ ಡಿವಿ ಸದಾನಂದ ಗೌಡ, ಸಿಎಂ ಬಸವರಾಜ ಬೊಮ್ಮಾಯಿ, (Basavaraj Bommai) ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ(BS Yediyurappa), ಸಚಿವರಾದ  ಆರ್, ಅಶೋಕ್, ಕೆಎಸ್. ಈಶ್ವರಪ್ಪ, ಜಗದೀಶ್ ಶೆಟ್ಟರ್, ನಳಿನ್ ಕುಮಾರ್ ಕಟೀಲ್, ಗೋವಿಂದ್ ಕಾರಜೋಳ, ಲಕ್ಷ್ಮಣ ಸವದಿ, ಅಶ್ವಥ್ ನಾರಾಯಣ, ಬಿಪಿ, ಅರುಣ್ ಕುಮಾರ್ ಗೆ ಸಮಿತಿಯಲ್ಲಿ ಸ್ಥಾನ ಸಿಕ್ಕಿದೆ.

ಕರ್ನಾಟಕದಲ್ಲಿ ಎರಡು ಉಪಚುನಾವಣೆ(Karnataka By Eledtion) ಅಖಾಡವೂ ಸಿದ್ಧವಾಗಿದೆ. ಸಿಂಧಗಿ ಮತ್ತು ಹಾನಗಲ್ ಕ್ಷೇತ್ರದ ಉಪಚುನಾವಣೆ ನಡೆಯಲಿದೆ.  ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದು ಮುಂದಿನ ವಿಧಾನಸಭೆ ಚುನಾವಣೆಗೂ ತಳಮಟ್ಟದಿಂದ ಸಿದ್ಧತೆ  ಮಾಡಿಕೊಂಡು ಬಂದಿದೆ.  ಇನ್ನೊಂದು ಕಡೆ ಜೆಡಿಎಸ್ ಸಹ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಅಭ್ಯರ್ಥಿಗಳನ್ನು ಫೈನಲ್ ಮಾಡಿ ಕ್ಷೇತ್ರಕ್ಕೆ ಕಳುಹಿಸಿದೆ. 

ವರುಣ್ ಗಾಂಧಿಗೆ ಕೊಕ್:  ಲಖೀಂಪುರ ಹಿಂಸಾಚಾರ ಪ್ರಕರಣವನ್ನು  ಸಿಬಿಐ ತನಿಖೆ ಒತ್ತಾಯಿಸಿದ್ದಕ್ಕೆ ವರುಣ್ ಗಾಂಧಿ ಸ್ಥಾನ ಕಳೆದುಕೊಂಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ವರುಣ್ ಗಾಂಧಿ ಜತೆಗೆ ತಾಯಿ ಮೆನಕಾ ಗಾಂಧಿಗೂ ಸ್ಥಾನವಿಲ್ಲ.  ಮುಂದಿನ ವರ್ಷ ನಡೆಯುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲೇ ಪಕ್ಷ ಶಾಕ್ ನೀಡಿದೆ. 

Follow Us:
Download App:
  • android
  • ios