ಜಿ ಟಿ ದೇವೇಗೌಡ ಭೇಟಿ ವೇಳೆ ಕಣ್ಣೀರಿಟ್ಟ ರೇವಣ್ಣ, ಜೈಲಿನಲ್ಲಿದ್ರೂ ಹಾಸನ ಅಭಿವೃದ್ದಿಯದ್ದೇ ಚಿಂತೆ!

ಪರಪ್ಪನ ಅಗ್ರಹಾರದಲ್ಲಿರುವ ಮಾಜಿ ಸಚಿವ ಹೆಚ್‌ ಡಿ ರೇವಣ್ಣ ಅವರನ್ನು  ಮಾಜಿ ಸಚಿವ  ಜಿ ಟಿ ದೇವೇಗೌಡ  ಇಂದು ಭೇಟಿ ಮಾಡಿದ್ದು, ಈ ವೇಳೆ  ರೇವಣ್ಣ ಕಣ್ಣೀರು ಹಾಕಿದ್ದಾರೆ.

prajwal revanna obsece video case GT Devegowda Meet HD Revanna at Parappana Agrahara Jail gow

ಬೆಂಗಳೂರು (ಮೇ.13): ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಹರಣ ಪ್ರಕರಣದಲ್ಲಿ  ಪರಪ್ಪನ ಅಗ್ರಹಾರದಲ್ಲಿರುವ ಮಾಜಿ ಸಚಿವ ಹೆಚ್‌ ಡಿ ರೇವಣ್ಣ ಅವರನ್ನು  ಮಾಜಿ ಸಚಿವ  ಜಿ ಟಿ ದೇವೇಗೌಡ  ಇಂದು ಭೇಟಿ ಮಾಡಿದ್ದಾರೆ. ಭೇಟಿ ವೇಳೆ ಜಿ.ಟಿ.ದೇವೇಗೌಡ ಮುಂದೆ ರೇವಣ್ಣ ಕಣ್ಣೀರು ಹಾಕಿದ್ದಾರಂತೆ.

ಜೈಲಿನಲ್ಲಿರುವ ರೇವಣ್ಣ ಅವರನ್ನು ಭೇಟಿ ಮಾಡಿ ಬಂದ ಬಳಿಕ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಬಳಿ ಹೇಳಿಕೆ ನೀಡಿರುವ ಜಿ.ಟಿ.ದೇವೇಗೌಡ,   ತಪ್ಪು ಮಾಡದೆ ಇರೋ ವಿಚಾರಕ್ಕೆ ಸಿಲುಕಿಸಿದ್ರು ಅಂತ  ರೇವಣ್ಣ ಕಣ್ಣೀರು ಹಾಕಿದರು ಎಂದಿದ್ದಾರೆ.

'ನನ್ನ ಯಾರೂ ಕಿಡ್ನಾಪ್ ಮಾಡಿಲ್ಲ, ನಾಲ್ಕು ದಿನ ನೆಂಟರ ಮನೆಗೆ ಬಂದಿದ್ದೇನೆ' ಸಂತ್ರಸ್ತೆ ಮಹಿಳೆ ವಿಡಿಯೋ ವೈರಲ್!

ರೇವಣ್ಣ ಜೈಲಿಗೆ ಹೋದ ದಿನದಿಂದ ಬಂದಿರಲಿಲ್ಲ. ಅವರ ಆರೋಗ್ಯ ಉಭಯ ಕುಶಲೋಪರಿ ವಿಚಾರಿಸಲು ಬರಬೇಕೆಂದು ಮೂರು ದಿನದಿಂದ ಮನಸ್ಸಲ್ಲಿತ್ತು. ಭಾನುವಾರ ರಜೆ,  ಬಿಡೋದಿಲ್ಲ ಅಂತಾ ಹೇಳಿದ್ರು. ಅದಕ್ಕೆ ಇಂದು ಮಾತನಾಡಲು ಬಂದಿದ್ದೇನೆ.

ಅವರು ಆರಾಮವಾಗಿ ಕುಳಿತಿದ್ದು, ಜೊತೆಯಲ್ಲಿ ಚಹಾ ಕುಡಿದ್ವಿ. ಹಳೆ ವಿಚಾರಗಳನ್ನೆಲ್ಲ ಮೆಲುಕು ಹಾಕಿದ್ರು. ಅವ್ರಿಗೆ ಈಗಲೂ ಕೂಡ ಅಭಿವೃದ್ಧಿ ಕಾರ್ಯಕ್ರಮಗಳದ್ದೇ ಚಿಂತೆ. ಅವ್ರಿಗೆ ಒಂದೇ ಯೋಚನೆ, ನಾನೇನೂ ತಪ್ಪು ಮಾಡಿದ್ದೀನಿ ಎಂದು. ಸಂತ್ರಸ್ತ ಮಹಿಳೆ ಜೊತೆ ಮಾತನಾಡಿ ಆರು ವರ್ಷವಾಗಿದೆ. ನನ್ನನ್ನ ಈ ಪ್ರಕರಣದಲ್ಲಿ ಸೇರಿಸಿ ಹೀಗೆ ಮಾಡಿದ್ದಾರೆ. ನಾನು ತಪ್ಪು ಮಾಡಿದ್ರೆ  ಶಿಕ್ಷೆ ಕೊಡ್ಲಿ ಅನುಭವಿಸಬಹುದಿತ್ತು. ಏನೂ ತಪ್ಪು ಮಾಡದೇ ಜೈಲಿಗೆ ಹಾಕಿದ್ರಲ್ಲಾ ಎಂಬ ಕೊರಗು ರೇವಣ್ಣನಿಗೆ ಕಾಡುತ್ತಿದೆ. ಅದನ್ನು ನೆನಸಿಕೊಂಡಾಗ ದುಃಖ ಪಡ್ತಾರೆ.

ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಮತ್ತೊಂದು ತಿರುವು! ಶಾಸಕ ಎ ಮಂಜು ಕೈವಾಡ?

ಏನೂ ತಪ್ಪು ಮಾಡದೆ ಶಿಕ್ಷೆ ಕೊಟ್ರಲ್ಲಾ ಎಂದು ರೇವಣ್ಣ ಕಣ್ಣೀರು ಹಾಕಿದ್ರು. ಒಂದು ಹತ್ತು ನಿಮಿಷಗಳ ಕಾಲ ಕಣ್ಣೀರು ಹಾಕಿದ್ರು. ಈಗಲೂ ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸಗಳ ಬಗ್ಗೆ ನೆನೆದರು. ರಾಜಕೀಯ ಹೇಗೆ ನಡೆಯುತ್ತಿದೆ ಎಂಬುದರ ಬಗ್ಗೆ ಮಾತುಕತೆ ನಡೆಸಿದೆವು. ರಾಜಕೀಯವಾಗಿ ಎಲ್ಲೆಲ್ಲಿ ಎಡವಿದ್ದೇವೆ. ನಮ್ಮ ಸರ್ಕಾರದ ಇದ್ದಾಗ ಕಾರ್ಯಕರ್ತರಿಗೆ ಏನೂ ಮಾಡ್ಲಿಕ್ಕೆ ಆಗ್ಲಿಲ್ಲ. ಶಾರ್ಟ್ ಟೈಮ್ ಅಧಿಕಾರ ಬಂತು. ಅಧಿಕಾರ ಅನುಭವಿಸಿದವರು ಹೊರಟು ಹೋದ್ರು. ಯಾರ್ಯಾರು ಮಂತ್ರಿಗಳು ಮಾಡಿದ್ರಿ ಅವರೆಲ್ಲರೂ ಹೋದರು. ನೀವು ಗೌಡರಿಗೋಸ್ಕರ ಪಕ್ಷದಲ್ಲಿ ಉಳಿದು ಗೌಡರಿಗೆ ನೆಮ್ಮದಿ ಕೊಟ್ರಿ ಎಂದರು.

ಪ್ರಜ್ವಲ್ ರೇವಣ್ಣ ಬಗ್ಗೆ ಚರ್ಚೆ ವಿಚಾರದ ಬಗ್ಗೆ ಕೇಳಿದ್ದಕ್ಕೆ, ಆ ಬಗ್ಗೆ ಯಾವುದೇ ಚರ್ಚೆ ಮಾಡಲಿಲ್ಲ. ರೇವಣ್ಣ ಕೂಡ ಪ್ರಜ್ವಲ್ ಬಗ್ಗೆ ಏನೂ ಹೇಳಲಿಲ್ಲ ಎಂದು ಜಿಟಿಡಿ ಹೇಳಿದರು.

ನವೀನ್ ಗೌಡ ಮತ್ತು ಕಾರ್ತಿಕ ಗೌಡ ಇನ್ನೂ ಬಂಧನ ಆಗದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಎಸ್ಐಟಿ ಅಧಿಕಾರಿಗಳು ತನಿಖೆ ಮಾಡ್ತಾರೆ. ನಮಗೆ ಅವರ ಮೇಲೆ ನಂಬಿಕೆ ಇದೆ. ಸಿಬಿಐಗೆ ಕೊಡುವ ಅಗತ್ಯವಿಲ್ಲ ಅಂತಾ ಸಿಎಂ ಹೇಳಿದ್ದಾರೆ. ನಮ್ಮ ಪೊಲೀಸರ ಬಗ್ಗೆ ನಂಬಿಕೆ ಇದೆ ಅಂತಾರೇ. ನ್ಯಾಯಯುತವಾಗಿ ತನಿಖೆ ಮಾಡ್ತಾರೆ ಅಂತಾ ಪದೇ ಪದೇ ಸಿಎಂ ಹೇಳ್ತಿದ್ದಾರೆ. ಎಸ್ಐಟಿಯವರು ನೋಟೀಸ್ ಕೊಟ್ಟು ತನಿಖೆ ಮಾಡ್ತಿದ್ದಾರೆ. ಪೆನ್ ಡ್ರೈವ್ ಯಾರು ರಿಲೀಸ್ ಮಾಡಿದ್ರು, ಯಾರೂ ತಪ್ಪು ಮಾಡಿದ್ದಾರೆ. ಎಸ್ಐಟಿ ತನಿಖೆ ಮಾಡಿ ಎಲ್ಲವನ್ನೂ ಕಂಡು ಹಿಡಿದು ಸಿಎಂ ಹಿಸ್ಟರಿ ಕ್ರಿಯೇಟ್ ಮಾಡ್ಲಿ ಎಂದರು.

ಅರಕಲಗೂಡು ಶಾಸಕ ಎ ಮಂಜುಗೆ ಸುತ್ತಿಕೊಂಡ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ, ಎಲ್ಲವೂ ಕೂಡ ತನಿಖೆ ಮೂಲಕ ಎಸ್ಐಟಿ ಪತ್ತೆ ಮಾಡುತ್ತಾರೆಂದು ಸಿಎಂ ಬೆನ್ನು ತಟ್ಟಿಕೊಂಡಿದ್ದಾರೆ. ಸಿಎಂ ಹೇಳಿದ್ದಾರೆ, ನಮಗೂ ಕೂಡ ನಂಬಿಕೆ ಬಂದಿದೆ. ಪೆನ್ ಡ್ರೈವ್ ರಿಲೀಸ್ ಮಾಡಿದವರ ಬಗ್ಗೆ ತನಿಖೆ ಪ್ರಾರಂಭ ಮಾಡಿದ್ದಾರೆ. ಎಲ್ಲರದೂ ಹೊರಗಡೆ ಬರುತ್ತೆ ಸ್ವಲ್ಪ ದಿನ ಕಾಯಬೇಕು. ಇಂದು ರೇವಣ್ಣ ಜಾಮೀನು ಮಂಜೂರು ವಿಚಾರ. ಕೋರ್ಟ್‌ ನಲ್ಲಿ ವಾದ ಪ್ರತಿವಾದ ನಡೆಯುತ್ತಿದೆ. ಇಂದು ಜಾಮೀನು ಸಿಗುವ ವಿಶ್ವಾಸ ಇದೆ ಎಂದು  ಪರಪ್ಪನ ಅಗ್ರಹಾದ ಬಳಿ ಜಿ.ಡಿ.ದೇವೇಗೌಡ ಹೇಳಿದ್ದಾರೆ.

 

Latest Videos
Follow Us:
Download App:
  • android
  • ios