Pradeep Eshwar Slams BJP ಶಾಸಕ ಪ್ರದೀಪ್ ಈಶ್ವರ್, ಪ್ರಿಯಾಂಕ್ ಖರ್ಗೆಯವರನ್ನು ಸಮರ್ಥಿಸಿಕೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಸಂಸದ ಪ್ರತಾಪ್ ಸಿಂಹರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಅವರು, ಜಿಬಿಎ ಚುನಾವಣೆಯನ್ನು ಬಹಿಷ್ಕರಿಸುವಂತೆ ಬಿಜೆಪಿಗೆ ಸವಾಲು ಹಾಕಿದ್ದಾರೆ.

ಬೆಂಗಳೂರು (ಅ.11): ಬೆಂಗಳೂರಿನ ಟ್ರಾಫಿಕ್‌ ಕುರಿತಾಗಿ ಪ್ರಿಯಾಂಕ್‌ ಖರ್ಗೆ ಆಡಿರುವ ಮಾತನ್ನು ಲೇವಡಿ ಮಾಡಿರುವ ಬಿಜೆಪಿ ವಿರುದ್ಧ ಶಾಸಕ ಪ್ರದೀಪ್‌ ಈಶ್ವರ್‌ ತಿರುಗಿಬಿದ್ದಿದ್ದಾರೆ. ವೆಹಿಕಲ್‌ ಜಾಸ್ತಿ ಆದ್ರೆ ಟ್ರಾಫಿಕ್‌ ಜಾಮ್‌ ಆಗೋದು ಸಹಜ. ಪ್ರಿಯಾಂಕ್‌ ಖರ್ಗೆ ಅಂದ್ರೆ ಆರ್‌.ಅಶೋಕ್‌ ಅವರಿಗೆ ಯಾಕಿಷ್ಟು ಭಯ ಅನ್ನೋದು ಅರ್ಥವಾಗ್ತಿಲ್ಲ. ಪ್ರಿಯಾಂಕ್ ಸಾಹೇಬ್ರು ಈ ರಾಜ್ಯದ ಫ್ಯೂಚರ್. ಅದನ್ನು ಯಾವುದೇ ಕಾರಣಕ್ಕೂ ಅಶೋಕ್‌ ಮರೆಯಬಾರದು ಎಂದುಸ ಪ್ರದೀಪ್‌ ಈಶ್ವರ್‌ ಹೇಳಿದ್ದಾರೆ.

ಇದೇ ವೇಳೆ ಮಾಜಿ ಸಂಸದ ಪ್ರತಾಪ್‌ ಸಿಂಹ ವಿರುದ್ಧವೂ ವಾಗ್ದಾಳಿ ಮಾಡಿದ ಪ್ರದೀಪ್‌ ಈಶ್ವರ್‌, 'ಮಾಜಿ ಸಂಸದ ಮಿಸ್ಟರ್ ಅವಿವೇಕಿ ಮುಟ್ಟಾಳ ಪ್ರತಾಪ್ ಸಿಂಹ ನಿನ್ನೆ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರ ಕಾಲಿನ ದೂಳಿಗೆ ಸಮ ನೀನು. ಅವರ ಬಗ್ಗೆ ಮಾತನಾಡುವ ಮುಂಚೆ ವಿಜಯೇಂದ್ರ, ಆರ್.ಅಶೋಕ್, ಯತ್ನಾಳ , ಬಿಜೆಪಿ, ಮೋದಿ, ಅಮಿತ್ ಶಾ, ಬಿ.ಎಲ್ ಸಂತೋಷ್ ಟ್ಯಾಕ್ಸ್ ಸ್ಲ್ಯಾಬ್ ಬಗ್ಗೆ ಮರೆತು ಹೋಗಿದ್ದೀರಾ? ಅದರ ಬಗ್ಗೆ ಮಾತನಾಡಿ ಎಂದಿದ್ದಾರೆ.

ಯತೀಂದ್ರ ಸಾಹೇಬ್ರು ಎಂಎಲ್‌ಸಿ ಆಗಿದ್ದಾರೆ. ಅವರ ಪರಿಮಿತಿಯಲ್ಲಿ ಶಿಫಾರಸ್ಸು ಮಾಡುತ್ತಾರೆ. ಅವರನ್ನ ಎಂಎಲ್ಸಿ ಮಾಡಿರೋದು ಸಿದ್ದರಾಮಯ್ಯ ಮಗ ಅಂತ ಅಲ್ಲ. ಕಾಂಗ್ರೆಸ್ ಪಕ್ಷಕ್ಕೆ ಅವರ ಕೊಡುಗೆ ಇದೆ ಅಂತ ಎಂಎಲ್ಸಿ ಮಾಡಿದ್ದಾರೆ. ಟ್ಯಾಕ್ಸ್ ಬಗ್ಗೆ ಮಾತನಾಡಿದ್ದೀರಾ, ಹಾಗಿದ್ರೆ ಯತ್ನಾಳ್ ಬಿಜಾಪುರದಲ್ಲಿ ತೆಗೆದುಕೊಳ್ಳುವ ಟ್ಯಾಕ್ಸ್ ಬಗ್ಗೆ ಮಾತನಾಡಿ. ಸುಮ್ನೆ ಬಾಯಿಗೆ ಬಂದಾ ಹಾಗೆ ಬಡಿದುಕೊಳ್ತಿದ್ದೀರಾ ಎಂದು ಹೇಳಿದ್ದಾರೆ.

ಗ್ರೇಟರ್ ಬೆಂಗಳೂರನ್ನ ಬಿಜೆಪಿ ಅವರು ಬಾಯ್ಕಟ್ ಮಾಡಿದ್ದಾರೆ. ಅಶೋಕಣ್ಣ ನಿಮಗೆ ಧಮ್‌ ಇದ್ರೆ ಎಲೆಕ್ಷನ್ ಬಾಯ್ಕಟ್ ಮಾಡಿ. ಎಲೆಕ್ಷನ್ ಗೆ ನೀವು ಅಭ್ಯರ್ಥಿಯನ್ನೇ ಹಾಕಬೇಡಿ. 15- 20 ವರ್ಷಕ್ಕೆ ಅಧಿಕಾರಕ್ಕೆ ಬರ್ತಿರಾ ಅಲ್ವ ಆಗ ಜಿಬಿಎ ಅನ್ನು ಏನು ಬೇಕಾದ್ರೂ ಮಾಡಿಕೊಳ್ಳಿ. ಬಿಜೆಪಿ ಅವರಿಗೆ ಮಾನ ಮರ್ಯಾದೆ ಇಲ್ಲ. ಸಿದ್ದರಾಮಯ್ಯ ಕುಟುಂಬದ ಬಗ್ಗೆ ಪದೇ ಪದೇ ಟಾರ್ಗೆಟ್ ಮಾಡುತ್ತಿದ್ದಾರೆ. ಮುಡಾ ವಿಚಾರವಾಗಿ ಸಿದ್ದರಾಮಯ್ಯ ಅವರ ಕುಟುಂಬವನ್ನ ತಂದರು. ಈಗ ಯತೀಂದ್ರ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಬಾಯಿಯನ್ನ ಕಂಟ್ರೋಲ್ ನಲ್ಲಿ ಇಟ್ಕೋ ಬ್ರದರ್. ನೀನು ಎಷ್ಟೇ ಬಾಯಿ ಬಡೆದುಕೊಂಡ್ರು ಬಿಜೆಪಿ ಅವರು ನಿನ್ನನ್ನು ಹತ್ತಿರಕ್ಕೆ ಬಿಟ್ಟುಕೊಳ್ಳಲ್ಲ ಎಂದು ಲೇವಡಿ ಮಾಡಿದ್ದಾರೆ.

ವಿಜಯೇಂದ್ರಗೆ ಪ್ರತಾಪ್‌ ಸಿಂಹ ಕಂಡರೆ ಆಗಲ್ಲ

ವಿಜಯೇಂದ್ರಗೆ ನಿನ್ನ ಕಂಡ್ರೆ ಆಗಲ್ಲ. ಆರ್.ಅಶೋಕ್ ನಿನ್ನನ್ನು ಹತ್ತಿರಕ್ಕೆ ಬಿಟ್ಟುಕೊಳ್ಳಲ್ಲ. ಯತ್ನಾಳ ನಿನ್ನನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿಲ್ಲ. ಸುಮ್ನೆ ಪ್ರತಾಪ್ ಸಿಂಹ ಬಾಯಿ ಬಡೆದುಕೊಳ್ಳುತ್ತಾರೆ. ಮುಂದಿನ 20 ವರ್ಷದ ನಂತರ ಅವರು ಅಧಿಕಾರಕ್ಕೆ ಬರ್ತಾರೆ. ಅಲ್ಲಿಯವರೆಗೆ ನಾವು ಜಿಬಿಎ ಅನ್ನು ಅಸ್ತಿತ್ವದಲ್ಲಿಟ್ಟುಕೊಳ್ಳುತ್ತೇವೆ. 20 ವರ್ಷದ ಬಳಿಕ ಅವರು ಅಧಿಕಾರಕ್ಕೆ ಬಂದು ಜಿಬಿಎ ಅನ್ನು ಏನು ಬೇಕಿದ್ರು ಮಾಡಿಕೊಳ್ಳಿ. ಬಿಜೆಪಿ ಅವರಿಗೆ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲ. ಕಾಳಜಿ ಇದ್ದಿದ್ರೆ ಸಭೆಗೆ ಹೋಗಿ ಮಾತನಾಡಬೇಕಿತ್ತು. ಅಲ್ಲಿ ಹೋಗಿ ಅಭಿವೃದ್ಧಿ ಬಗ್ಗೆ ಅವರು ಮಾತನಾಡಲ್ಲ ಎಂದಿದ್ದಾರೆ.