ಪ್ರದೀಪ್ ಈಶ್ವರ್ ಸವಾಲು: ಕೋವಿಡ್ ವೇಳೆ ಭ್ರಷ್ಟಾಚಾರ ಮಾಡಿಲ್ಲ ಅಂತ ಸುಧಾಕರ್ ದೀಪ ಹಚ್ಚಲಿ
ಮಾಜಿ ಸಚಿವ ಡಾ.ಕೆ. ಸುಧಾಕರ್ ಕೋವಿಡ್ ವೇಳೆ ಭ್ರಷ್ಟಾಚಾರ ಮಾಡಿಲ್ಲವೆಂದು ಭೋಗನಂಧೀಶ್ವರ ದೇವಸ್ಥಾನಲ್ಲಿ ದೀಪ ಹಚ್ಚಲಿ ಎಂದು ಪ್ರದೀಪ್ ಈಶ್ವರ್ ಸವಾಲು ಹಾಕಿದರು.
ಚಿಕ್ಕಬಳ್ಳಾಪುರ (ಜು.08): ರಾಜ್ಯದಲ್ಲಿ ಕೋವಿಡ್ ವೇಳೆ ಮಾಜಿ ಸಚಿವ ಡಾ.ಕೆ. ಸುಧಾಕರ್ ಭ್ರಷ್ಟಾಚಾರ ಮಾಡಿಲ್ಲವೆಂದು ಭೋಗನಂಧೀಶ್ವರ ದೇವಸ್ಥಾನಕ್ಕೆ ಬಂದು ದೀಪ ಹಚ್ಚಲಿ. ನಾನು ಕೂಡ ಬಂದು ದೀಪವನ್ನು ಹಚ್ಚುತ್ತೇನೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಸವಾಲು ಹಾಕಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ ಅವರು, ಮಾಜಿ ಸಚಿವ ಡಾ. ಕೆ. ಸುಧಾಕರ್ ಗೆ ತಿರುಗೇಟು ನೀಡಿದ್ದಾರೆ. ನಾನು ಸುಧಾಕರ್ ಅವರ ಸವಾಲನ್ನು ಸ್ವೀಕರಿಸುತ್ತೇನೆ. ಕೋವಿಡ್ ನಲ್ಲಿ ಭ್ರಷ್ಟಾಚಾರ ಮಾಡಿಲ್ಲ ಎಂದು ಸುಧಾಕರ್ ದೀಪ ಹಚ್ಚಲಿ. ಭೋಗನಂಧೀಶ್ಚರ್ ದೇವಸ್ಥಾನಕ್ಕೆ ಬಂದು ದೀಪ ಹಚ್ಚಲಿ, ನಾನು ಹಚ್ಚುತ್ತೇನೆ. ಅವರು ಸವಾಲನ್ನು ನಾನು ಸ್ವೀಕಾರ ಮಾಡುತ್ತೇನೆ. ನಿವೇಶನಗಳ ಬಗ್ಗೆ ಎಸ್ ಐಟಿ ತನಿಖೆಗೆ ಒಪ್ಪಿಸುತ್ತೇವೆ. ಅವರು ಬಂದು ನಮ್ಮ ಜೊತೆಯೇ ನಿಂತುಕೊಳ್ಳಲಿ. ದೀಪದಿಂದ ದೀಪವಾ ಹಚ್ಚಬೇಕು ಮಾನವ ಎಂದು ಹಾಡು ಹಾಕಿಕೊಂಡೇ ಹಚ್ಚೋಣ. ಸುಧಾಕರ್ ಪ್ರಾಮಾಣಿಕರಾದರೇ ನನ್ನ ಸವಾಲನ್ನು ಸ್ವೀಕರಿಸಲಿ ನೋಡೊಣ ಎಂದು ತಿರುಗೇಟು ನೀಡಿದರು.
ಚಿಮುಲ್ ರದ್ದುಗೊಳಿಸಿ ಸಿದ್ದು ದ್ವೇಷ ಸಾಧನೆ: ಸುಧಾಕರ್
ಸುಧಾಕರ್ ಸವಾಲು ಏನು? : ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಮಾಜಿ ಸಚಿವ ಡಾ.ಕೆ. ಸುಧಾಕರ್ ಅವರು, ಚಿಕ್ಕಬಳ್ಳಾಪುರ ವಸತಿ ಯೋಜನೆ ಗಳ ಬಗ್ಗೆ ಶಾಸಕ ಪ್ರದೀಪ್ ಈಶ್ವರ್ ಸುಳ್ಳಿನ ಅಭಿಯಾನ ನಡೆಸಿದ್ದಾರೆ ಎಂದು ಆರೋಪ ಮಾಡಿದ್ದರು. ಸುಳ್ಳು ಶಾಸಕರ ಮನೆ ದೇವರು ಅನ್ನೋ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಈಗಷ್ಟೇ ವಿಧಾನಸಭೆ ಪ್ರವೇಶ ಮಾಡಿದ್ದಾರೆ. ಅಲ್ಲಿ ತಿಳಿದುಕೊಳ್ಳಲಿ. ಯಾರಾದ್ರು 20 ಸಾವಿರ ನಿವೇಶನ ತಂದಿದ್ದಾರಾ ನೋಡಲಿ. ಸಿನೆಮಾ ಡೈಲಾಗ್‌ಗಳನ್ನು ಹೇಳಿಕೊಂಡು ಓಡಾಡಿದ್ರೆ ರಾಜಕೀಯ ತುಂಬಾ ದಿನ ನಡೆಯಲ್ಲ. ಚಿಕ್ಕಬಳ್ಳಾಪುರ ನಿವೇಶನಗಳಿಗೆ ಜಮೀನು ಮಂಜೂರು ಮಾಡಿದ್ದೀನಿ ಅಂತಾ ನಂದಿ ದೇವಸ್ಥಾನದಲ್ಲಿ ದೀಪ ಹಚ್ಚುತ್ತೇನೆ. ಇದೆಲ್ಲಾ ಬೋಗಸ್ ಅಂತಾ ನೀವು ಬಂದು ಹಚ್ಚಿ ನೋಡೊಣ ಎಂದು ಪ್ರದೀಪ್ ಈಶ್ವರ್‌ಗೆ ಸವಾಲು ಹಾಕಿದರು. ನೀವು ಹಾಗೇ ದೀಪ ಹಚ್ಚುವಂತ ಗಿರಾಕಿಯೇ ಎಂದು ಕಿಡಿಕಾರಿದ್ದರು.
ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ರದ್ದತಿ ವಾಪಸ್ ಪಡೆಯಿರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾವು ಗೆದ್ದೀದ್ದಿವಿ ಎಂಬ ಭ್ರಮಲೋಕದಲ್ಲಿ ನೀವು ತೇಲುತ್ತಿದ್ದಾರೆ. ಆ ನಿದ್ದೆಯಿಂದ ಸ್ವಲ್ಪ ಎದ್ದೇಳಿ. ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ವಿಭಜನೆ ರದ್ದುಪಡಿಸಿದ್ದು ಸರಿಯಲ್ಲ. ಸಿಎಂ ಸಿದ್ದರಾಮಯ್ಯನವರೇ ದ್ವೇಷದ ರಾಜಕಾರಣ ಮಾಡಲ್ಲ ಅಂದ್ರಿ, ಈಗ ನೀವು ಮಾಡುತ್ತಿರುವುದಾದರು ಏನು? ಈ ಭಾಗದ ರೈತರ ಮೇಲೆ ನಿಮಗೆ ಕಾಳಜಿಯಿದ್ದರೇ ನಿರ್ಧಾರ ಬದಲಿಸಿ. ಈ ಹಿಂದೆ ಚಾಮರಾಜನಗರ ಹಾಲು ಒಕ್ಕೂಟ ಮಾಡಿದ್ರಿ. ಅಲ್ಲೂ ಹಾಲು ಉತ್ಪಾದನೆ ಕಡಿಮೆ ಇತ್ತು ಅಲ್ಲವೇ. ಸಿದ್ದರಾಮಯ್ಯರಿಗೆ ಕೆಲವರು ತಪ್ಪು ಮಾಹಿತಿ ನೀಡಿದ್ದಾರೆ. ಈ ಭಾಗದ ಜನರು ನಿಮಗೆ ಅಧಿಕಾರ ಕೊಟ್ಟಿದ್ದಾರೆ. ಈಗಲಾದ್ರು ಎಚ್ಚೆತ್ತುಕೊಂಡು ಆದೇಶ ಹಿಂಪಡಿಯಲಿ ಎಂದು ಸುಧಾಕರ್ ಆಗ್ರಹ ಮಾಡಿದರು.
'ಸಾವಾಗ್ಲಿಲ್ಲ ಮರ್ರೆ ಪ್ರದೀಪ್, ಕೂತ್ಕೊ ಪ್ರದೀಪ್..' ಶಾಸಕ ಪ್ರದೀಪ್ ಈಶ್ವರ್‌ಗೆ ಸ್ಪೀಕರ್ ಬುದ್ದಿವಾದ!
ಸಾವಾಗಿಲ್ಲ ಮಾರಾಯ, ಕೂತ್ಕೋ ಪ್ರದೀಪ್: ಬೆಂಗಳೂರು (ಜು.06): ಮಂಡ್ಯ ಜಿಲ್ಲೆಯ ನಾಗಮಂಗಲ ಬಸ್ ಡಿಪೋದ ಚಾಕ ಕಂ ಕಂಡಕ್ಟರ್ ಜಿಲ್ಲಾ ಉಸ್ತುವಾರಿ ಸಚಿವರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಡೆತ್‌ನೋಟ್ ಆಧರಿಸಿ ಸರ್ಕಾರದಿಂದ ತನಿಖೆ ಕೈಗೊಳ್ಳುವಂತೆ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳಿಂದ ವಿಧಾನಸಭಾ ಅಧಿವೇಶನದಲ್ಲಿ ಪ್ರತಿಭಟನೆ ಮಾಡಲಾಯಿತು. ಈ ವೇಳೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ಬಿಜೆಪಿ ಹಾಗೂ ಜೆಡಿಎಸ್ ನವರು ಒಂದು ಸಾವಿಗೆ ಇಷ್ಟೆಲ್ಲಾ ಧರಣಿ ಮಾಡ್ತಿದಾರಲ್ಲಾ, ಕೋವಿಡ್ ವೇಳೆ ಇಷ್ಟೆಲ್ಲಾ ಸಾವಾದಾಗ ನ್ಯಾಯ ಕೊಡಿ ಎಂದು ಕೇಳೋಕೆ ಆಗಲಿಲ್ಲವಾ ಎಂದು ಕೇಳಿದರು. ಈ ವೇಳೆ ಮಾತನಾಡಿದ ಸಭಾಧ್ಯಕ್ಷ ಯು.ಟಿ. ಖಾದರ್ ಅವರು 'ಸಾವಾಗ್ಲಿಲ್ಲ ಮಾರೆ ಪ್ರದೀಪ್, ಕೂತ್ಕೊ ಪ್ರದೀಪ್...' ಎಂದು ಶಾಸಕ ಪ್ರದೀಪ್ ಈಶ್ವರ್‌ಗೆ ಸ್ಪೀಕರ್ ಬುದ್ದಿವಾದ ಹೇಳಿದರು.