ಅಧಿಕಾರ ಹಂಚಿಕೆ ಒಪ್ಪಂದ ನಿಜ: ಮುನಿಯಪ್ಪ ಬಾಂಬ್
ರಾಜ್ಯದಲ್ಲಿ ಅಧಿಕಾರ ಹಂಚಿಕೆ ಕುರಿತು ಒಪ್ಪಂದ ಆಗಿದೆ ಎಂಬ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಡಿಕೆಶಿ ಹೇಳಿದ್ದು ಸರಿಯಾಗಿದೆ. ಈ ಬಗ್ಗೆ ಬೇರೆ ಏನನ್ನೂ ಕೇಳಬೇಡಿ ಎಂದ ಸಚಿವ ಕೆ.ಎಚ್.ಮುನಿಯಪ್ಪ
ಕೋಲಾರ(ಡಿ.07): ರಾಜ್ಯದಲ್ಲಿ ಅಧಿಕಾರ ಹಂಚಿಕೆ ಒಪ್ಪಂದ ಆಗಿರುವುದು ನಿಜ ಎಂದು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ. ಮುಳಬಾಗಿಲಿನಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ರಾಜ್ಯದಲ್ಲಿ ಅಧಿಕಾರ ಹಂಚಿಕೆ ಕುರಿತು ಒಪ್ಪಂದ ಆಗಿದೆ ಎಂಬ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಡಿಕೆಶಿ ಹೇಳಿದ್ದು ಸರಿಯಾಗಿದೆ. ಈ ಬಗ್ಗೆ ಬೇರೆ ಏನನ್ನೂ ಕೇಳಬೇಡಿ ಎಂದರು.
ಇದೇ ವೇಳೆ, ವಕ್ಫ್ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ನಡೆಸುತ್ತಿರುವ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿ ಹೋರಾಟ ಮಾಡಿದಂತೆಲ್ಲಾ ಅದು ಕಾಂಗ್ರೆಸ್ ಗೆ ಹೆಚ್ಚು ಅನುಕೂಲವಾಗಲಿದೆ. ಬಿಜೆಪಿಯವರು ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ, ಕಾಣಲಿ ಬಿಡಿ ಎಂದರು.
ಸಿದ್ದು ಬೆನ್ನಿಗೆ ನಿಲ್ಲುವೆ ಎನ್ನುವ ಡಿಕೆಶಿಯೇ ಒಪ್ಪಂದ ಬಗ್ಗೆ ಹೇಳಿದ್ದಾರೆ: ಪ್ರಹ್ಲಾದ್ ಜೋಶಿ
ಪರಂಗೂ ಸಿಎಂ ಆಗುವೆ ಆಸೆ: ಶಾಸಕ ಸುರೇಶ ಗೌಡ
ತುಮಕೂರು: ರಕ್ತಕೊಡುತ್ತೇವೆ ಆದರೆ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರುದ್ದ ಯಾ ವುದೇ ಕಾರಣಕ್ಕೂ ಹೋರಾಟ ನಿಲ್ಲುವು ದಿಲ್ಲ. ನಮ್ಮ ಹಕ್ಕನ್ನು ರಾಜಕೀಯಕ್ಕೆ ತೆಗೆದು ಕೊಂಡು ಹೋಗಲು ಬಿಡುವುದಿಲ್ಲ ಎಂದು ಶಾಸಕ ಸುರೇಶ ಗೌಡ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂ ದಿಗೆ ಮಾತನಾಡಿ, ಕೆನಾಲ್ ಯೋಜನೆ ವಾಪಸ್ ತೆಗೆದು ಕೊಳ್ಳದಿದ್ದರೆ ಹೋರಾಟ ನಿಲ್ಲುವುದಿಲ್ಲ. ಸದನದಲ್ಲೂ ಕೆನಾಲ್ ಯೋಜನೆ ಬಗ್ಗೆ ಜಿಲ್ಲೆಯ ಬಿಜೆಪಿ-ಜೆಡಿಎಸ್ ಶಾಸಕರು ಹೋರಾಟ ಮಾಡುತ್ತೇವೆ. ಅಧಿ ಕಾರ ಇದೆ ಅಂತ ಪೊಲೀಸ್ ಬಲ ಪ್ರಯೋಗ ನಡೆಸಿದರೆ ರೈತರು ಸುಮ್ಮನೆ ಇರುವುದಿಲ್ಲ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಳಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಾರಣ ಆಗುತ್ತಾರೆಯೇ ಎಂದರು.
ಕ್ಷೇತ್ರದ ಜನರನ್ನು ಬಿಟ್ಟು ಬೇರೆ ಯಾರಿಗೂ ಹೆದರುವುದಿಲ್ಲ. ವಿದ್ಯಾರ್ಥಿ ಯಾದಾಗಿನಿಂದ ನಾನು ಹೋರಾಟ ಮಾಡಿ ಕೊಂಡು ಬಂದವನು. 16 ವರ್ಷ ಇದ್ದಾಗಲೇ ಬೆಂಗಳೂರಿನಲ್ಲಿ ಗೋವಾ ಬಸ್‌ಗೆ ಕಲ್ಲು ಹೊಡೆದು ಜೈಲಿಗೆ ಹೋಗಿ ದ್ದೇ. ಹೆದರುವುದು, ಜಗ್ಗು ವುದು, ಬಗ್ಗುವುದು ಸುರೇಶ್ ಗೌಡ ಜಾಯ ಮಾನದಲ್ಲೇ ಇಲ್ಲ ಎಂದರು.
ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮುಖ್ಯಮಂತ್ರಿ ಯಾಗಬೇಕು ಅಂತಾ ತುಂಬಾ ಆಸೆ ಇಟ್ಟು ಕೊಂಡಿದ್ದಾರೆ. ವೈಯಕ್ತಿಕವಾಗಿ ಪರಮೇಶ್ ಜೊತೆ ಮಾತನಾಡುವಾಗ ಮುಖ್ಯಮಂತ್ರಿ ಆಸೆ ಬಗ್ಗೆ ಅವರು ಹೇಳಿಕೊಂಡಿದ್ದರು. ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡರನ್ನು ಸೋಲಿಸಿದರೂ ಜಿ.ಎಸ್.ಬಸವರಾಜು ಸಚಿವರಾಗಲಿಲ್ಲ. ಆದರೆ ತುಮಕೂರಿಗೆ ಬಂದು ಗೆದ್ದ ವಿ. ಸೋಮಣ್ಣ ಅವರಿಗೆ ಸಚಿವ ಸ್ಥಾನದ ಅದೃಷ್ಟ ಒಲಿದಿದೆ ಎಂದರು.
ಪರಮೇಶ್ವರ್ ಅವರಿಗೂ ಅದೃಷ್ಟ ಒಲಿಯಬಹುದು. ಕ್ಷೇತ್ರದ ಅನುದಾನ ವಿಚಾರದಲ್ಲಿ ಕಪ್ಪುಪಟ್ಟಿ, ಘೋಷಣೆ ಕೂಗೋ ವಿಚಾರದ ಬಗ್ಗೆ ಹೆದರಿ ಪ್ರತಿಭಟನೆಯಿಂದ ಹಿಂದೆ ಸರಿದಿಲ್ಲ. ಅನುದಾನ ಕೊಡುವ ಭರವಸೆಯಿಂದ ಹಿಂದೆ ಸರಿದಿದ್ದಾಗಿ ತಿಳಿಸಿದರು.
ಅಧಿಕಾರ ಹಂಚಿಕೆ: ಏನೋ ಮಾತಾಡಿದ್ದೇವೆ, ಅದನ್ನು ಬಹಿರಂಗವಾಗಿ ಹೇಳಲಾಗುತ್ತಾ?, ಡಿಕೆಶಿ
ಬೆಂಗಳೂರು: 'ಅಧಿಕಾರ ಹಂಚಿಕೆ ಬಗ್ಗೆ ನಾವು ಕುಳಿತು ಏನೋ ಮಾತನಾಡಿದ್ದೇವೆ ಎಂದು ವಾಹಿನಿ ಯೊಂದಕ್ಕೆ ಹೇಳಿದ್ದೇನೆ. ಆದರೆ ಏನು ಮಾತನಾಡಿದ್ದೇವೆ ಎಂಬುದನ್ನು ಬಹಿರಂಗವಾಗಿ ಹೇಳಲು ಆಗುತ್ತದೆಯೇ?' ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದರು.
ಡಿಕೆಶಿ ಮುಖ್ಯಮಂತ್ರಿ ಆಗೋದಕ್ಕೆ ಸಿದ್ದರಾಮಯ್ಯ ಬಿಡಲ್ಲ: ಛಲವಾದಿ ಬಾಂಬ್
ಈ ಮೂಲಕ ಅಧಿಕಾರ ಹಂಚಿಕೆ ಕುರಿತ ಚರ್ಚೆಯನ್ನು ಜೀವಂತವಾಗಿ ಉಳಿಸುವ ಪ್ರಯತ್ನ ಮಾಡಿದ್ದಾರೆ. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಗುರುವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, 'ಅವರಿಬ್ಬರೇ ಒಪ್ಪಂದ ಮಾಡಿ ಕೊಳ್ಳುವುದಾದರೆ ನಾವೇಕೆ ಇರಬೇಕು? ಅವರೇ ರಾಜಕಾರಣ ಮಾಡಿಕೊಳ್ಳಲಿ' ಎಂಬ ಡಾ.ಜಿ.ಪರಮೇಶ್ವರ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ್ದರು.
ಅಧಿಕಾರ ಹಂಚಿಕೆ ಸಂಬಂಧ ನಾನು ಯಾರೊಂದಿಗೂ ಮಾತನಾಡಿಲ್ಲ. ನಿಮ್ಮೊಂದಿಗೆ ಆಗಲಿ, ಪರಮೇಶ್ವರ್ ಅವರೊಂದಿಗೆ ಆಗಲಿ ಮಾತನಾಡಿಲ್ಲ. ವಾಹಿನಿಯೊಂದರಲ್ಲಿ ನನ್ನದೇ ಆದ ವಿಚಾರ ಪ್ರಸ್ತಾಪ ಮಾಡಿದ್ದೆ. ಅಧಿಕಾರ ಹಂಚಿಕೆ ಬಗ್ಗೆ ನಾವು ಕುಳಿತು ಏನೋ ಮಾತನಾಡಿದ್ದೇವೆ ಎಂದು ಹೇಳಿದ್ದೇನೆ. ಆದರೆ ಅದನ್ನು ಬಹಿರಂಗವಾಗಿ ಹೇಳಲು ಆಗುತ್ತದೆಯೇ? ಎಂದು ಪ್ರಶ್ನಿಸಿದ್ದರು.