ನವದೆಹಲಿ (ನ.08):  ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಪ್ರಕ್ರಿಯೆ ನ.11ಕ್ಕೆ ಶುರುವಾಗಲಿದ್ದು, ಇದಕ್ಕೂ ಮುನ್ನ ಅನರ್ಹ ಶಾಸಕರ ಬಗ್ಗೆ ತೀರ್ಪು ಹೊರಬೀಳಬಹುದೆನ್ನುವ ನಿರೀಕ್ಷೆ ಈಗ ಕ್ಷೀಣಿಸಿದೆ. 

"

ಸುಪ್ರೀಂಕೋರ್ಟಿನ ಶುಕ್ರವಾರದ ಕಲಾಪದ ಪಟ್ಟಿಯಲ್ಲಿ ಈ ಪ್ರಕರಣ ನಮೂದಾಗದಿರುವುದೇ ಇದಕ್ಕೆ ಕಾರಣ. ಶನಿವಾರದಿಂದ ನ.12ರವರೆಗೆ ಕೋರ್ಟಿಗೆ ರಜೆ ಇರುವ ಕಾರಣ ಅನರ್ಹ ಶಾಸಕರು ಉಪ ಚುನಾವಣೆ ಮುಂದೂಡುವಂತೆ ಮತ್ತೊಮ್ಮೆ ಸುಪ್ರೀಂಕೋರ್ಟಿಗೆ ಮನವಿ ಮಾಡಿದ್ದಾರೆ

ಅನರ್ಹ ಶಾಸಕರ ಪ್ರಕರಣದ ವಿಚಾರಣೆ ಬಾಕಿಯಾಗುವ ಹಿನ್ನೆಲೆಯಲ್ಲಿ ಉಪ ಚುನಾವಣೆ ಮುಂದೂಡುವಂತೆ ಅನರ್ಹ ಶಾಸಕರ ಪರ ಹಿರಿಯ ಮುಕುಲ್ ರೋಹಟ್ಗಿ ಸುಪ್ರೀಂ ಕೋರ್ಟಿಗೆ ಮನವಿ ಮಾಡಿದ್ದಾರೆ. 

ನ್ಯಾ. ಎನ್ ವಿ ರಮಣ ಅವರಿಗೆ ಮನವಿ ಮಾಡಿದ್ದು , ಆದರೆ ಈ ಬಗ್ಗೆ ಯಾವುದೇ ನಿರ್ದೇಶನ ಅಥವಾ ಸೂಚನೆಯನ್ನು ಚುನಾವಣೆ ಆಯೋಗಕ್ಕೆ ನೀಡಲು ನ್ಯಾ.ಎನ್ ವಿ ರಮಣ‌ ಅವರಿದ್ದ ಪೀಠ ನಿರಾಕರಿಸಿದೆ.  

ಅನರ್ಹರ ಸ್ಪರ್ಧೆಗೆ ಆಯೋಗ ಸಮ್ಮತಿ...

ನಾವು ಚುನಾವಣೆ ಮುಂದೂಡುವಂತೆ ಅರ್ಜಿ ಸಲ್ಲಿಸುತ್ತೇವೆ. ಈ ಸಂಬಂಧ ಬುಧವಾರ ವಿಚಾರಣೆ ನಡೆಸಿ ಎಂದು ಮನವಿ ಮಾಡಿದ್ದು, ಇದಕ್ಕೆ ಸುಪ್ರೀಂಕೋರ್ಟ್ ಸಮ್ಮತಿ ಸೂಚಿಸಿದೆ. ಈ ಹಿಂದೆಯೂ ಇದೇ ಪ್ರಕರಣದಲ್ಲಿ ನವೆಂಬರ್ ನಲ್ಲಿ ನಡೆಯಬೇಕಿದ್ದ ಉಪ ಚುನಾವಣೆಯನ್ನು ಚುನಾವಣಾ ಆಯೋಗ ಮುಂದೂಡಿಕೆ ಮಾಡಿತ್ತು. ಆದರೆ ಇದೀಗ ಮತ್ತೆ  ಒಂದು ವಾರಗಳ ಕಾಲವಾದರೂ ಚುನಾವಣೆ ಮುಂದೂಡಿಕೆ ಮಾಡಿದಲ್ಲಿ ಚುನಾವಣಾ ತಯಾರಿಗೆ ಅನನೂಕೂಲವಾಗುತ್ತದೆ ಎಂದು ಎಂದು ಅನರ್ಹ ಶಾಸಕರ ಪರ ವಕೀಲ ಮುಕುಲ್ ರೋಹಟ್ಗಿ ಮನವಿ ಮಾಡಿದ್ದಾರೆ. 

ಹೊಸಕೋಟೆಯಲ್ಲಿ ಬಂಡಾಯ ಅಭ್ಯರ್ಥಿ: ಅನರ್ಹ ಶಾಸಕ ಎಂಟಿಬಿಗೆ ಆತಂಕ...

ಈ ವಾದಕ್ಕೆ ಕಾಂಗ್ರೆಸ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಆಕ್ಷೇ‌ಪ ವ್ಯಕ್ತಪಡಿಸಿದ್ದು. ಚುನಾವಣೆ ನಡೆಯುವುದು ಅನರ್ಹ ಶಾಸಕರಿಗಾಗಿ ಮಾತ್ರವಲ್ಲ ಎಂದಿದ್ದಾರೆ. 

ಡಿಸೆಂಬರ್ 5ರಂದು ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆ ನಿಗದಿಯಾಗಿದ್ದು, ಡಿಸೆಂಬರ್ 9ಕ್ಕೆ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದೆ.