ಬೆಂಗಳೂರು, (ಫೆ.08): ಸಿಎಂ ಹೇಳಿದಂತೆ ಇಂದು (ಶನಿವಾರ) ಸಂಜೆಯೊಳಗೆ ನೂತನ ಸಚಿವರುಗಳಿಗೆ ಖಾತೆ ಹಂಚಿಕೆಯಾಗಬೇಕಿತ್ತು. ಆದ್ರೆ, ಇದೀಗ ಅದು ಸೋಮವಾರಕ್ಕೆ ಮುಂದೂಡಲಾಗಿದೆ.

"

ನೂತನ 10 ಸಚಿವರುಗಳಿಗೆ ಖಾತೆ ಹಂಚಿಕೆ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು (ಶನಿವಾರ) ಬೆಳಗ್ಗೆ ಪ್ರತಿಕ್ರಿಯಿಸಿದ್ದು, ಖಾತೆಯ ಲಿಸ್ಟ್ ರೆಡಿಯಾಗಿದೆ ಎಂದು ಸ್ಪಷ್ಟಪಡಿಸಿದರು.

ಖಾತೆ ಹಂಚಿಕೆ: ಉಸ್ತುವಾರಿ ವಿಜಯೇಂದ್ರ ಹೆಗಲಿಗೆ

ದೆಹಲಿಗೆ ಹೋಗುವುದಿಲ್ಲ. ಇವತ್ತು ರಜೆ ಇರುವುದರಿಂದ ಸೋಮವಾರ ಖಾತೆ ಹಂಚಿಕೆ ಮಾಡುತ್ತೇನೆ ಎಂದು ಹೇಳಿದರು.  ಶನಿವಾರ ಖಾತೆ ಹಂಚಿಕೆ ಮಾಡುತ್ತೇನೆ ಎಂದು ಯಡಿಯೂರಪ್ಪ ಅವರು ನೂತನ ಸಚಿವರುಗಳ ಗುರುವಾರ ಪ್ರಮಾಣವಚನ ಸ್ವೀಕರಿಸಿದ ಬಳಿಕ ಹೇಳಿದ್ದರು.

 ಅಷ್ಟೇ ಅಲ್ಲದೇ ಅಗತ್ಯಬಿದ್ದರೆ ದೆಹಲಿಗೆ ಹೋಗಿ ಬರುತ್ತೇನೆ ಎಂದು ಹೇಳಿದ್ದಾರೆ. ಆದ್ರೆ, ಇದೀಗ ದೆಹಲಿಗೆ ತೆರಳುವುದಿಲ್ಲ. ಸೋಮವಾರವೇ ಖಾತೆ ಹಂಚಿಕೆ ಮಾಡುತ್ತೇನೆ ಎಂದು ತಿಳಿಸಿದರು.

ನೂತನ ಸಚಿವರಿಗೆ ಖಾತೆ ಹಂಚಿಕೆ ಕುತೂಹಲ

ಮತ್ತೊಂದೆಡೆ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಸಚಿವರ ನಡುವೆ ಖಾತೆಗಾಗಿ ಕ್ಯಾತೆ ಶುರುವಾಗಿದ್ದು, ಕೆಲ ನೂತನ ಶಾಸಕರಂತೂ ನಮಗೆ ಇಂಥದ್ದೇ ಖಾತೆ ಬೇಕೆಂದು ಪಟ್ಟು ಹಿಡಿದು ಕೂತಿದ್ರೆ, ಮತ್ತೆ ಕೆಲವರು ಪ್ರಬಲ ಖಾತೆಗಳ ಮೇಲೆ ಕಣ್ಣಿಟ್ಟಿದ್ದಾರೆ.

ಕೆಲವರು ಹಾಲಿ ಸಚಿವರ ಕುರ್ಚಿಗಳತ್ತ ಚಿತ್ತ ಹರಿಸಿದ್ದಾರೆ. ಇನ್ನು ಸೋಮವಾರ ಯಾರಿಗೆ ಯಾವ ಖಾತೆ ಸಿಗಲಿದೆ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ. ಅದರಲ್ಲೂ ರಮೇಶ್ ಜಾರಕಿಹೊಳಿ ಪ್ರಮುಖ ಜಲಸಂಪನ್ಮೂಲ ಖಾತೆ ಬೇಕೆಂದು ಹಠ ಹಿಡಿದಿದ್ರೆ, ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಗೋಪಾಲಯ್ಯ, ಬೈರತಿ ಬಸವರಾಜ್, ಎಸ್‌.ಟಿ.ಸೋಮಶೇಖರ್ ನಡುವೆ ಪೈಪೋಟಿ ನಡೆದಿದೆ.

ಬಿಎಸ್‌ವೈ ಸಂಪುಟಕ್ಕೆ ಸೇರ್ಪಡೆಯಾದ 10 ನೂತನ ಸಚಿವರ ಒಂದಿಷ್ಟು ಮಾಹಿತಿ ನಿಮಗಾಗಿ 

ಬಿ.ಸಿ.ಪಾಟೀಲ್ ಗೃಹ ಖಾತೆ ಕೊಟ್ಟರೆ ಚೆನ್ನಾಗಿರುತ್ತೆ ಎಂದು ಹೇಳಿಕೊಂಡಿದ್ದು, ಅಂತಿಮವಾಗಿ  ಯಾರಿಗೆ ಯಾವ ಖಾತೆ ಸಿಗುತ್ತೆ ಎನ್ನುವುದು ಸೋಮವಾರದವರೆಗೆ ಕಾದುನೋಡಬೇಕಿದೆ.

ಫೆಬ್ರವರಿ 8ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ