ರಾಜ್ಯ ಕಾಂಗ್ರೆಸ್‌ನ ಮಹಿಳಾ ಘಟಕದಲ್ಲಿ ರಾಜಕೀಯ ತಲ್ಲಣ ಶುರುವಾಗಿದೆ. ಹಾಲಿ ಅಧ್ಯಕ್ಷೆಯಾಗಿರುವ ಪುಷ್ಪಾ ಅಮರ್‌ನಾಥ್‌ ಅವರನ್ನು ಬದಲಿಸುವಂತೆ ಪಟ್ಟು ಹಿಡಿಯಲಾಗಿದೆ.

ಬೆಂಗಳೂರು (ಜು.29): ಒಂದೆಡೆ ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಕಾಂಗ್ರೆಸ್‌ ಸರ್ಕಾರದ ಮೇಲೆ ಮುಡಾ ಹಾಗೂ ವಾಲ್ಮೀಕಿ ಹಗರಣದ ಸಂಕಷ್ಟ ಎದುರಾಗಿರುವಾಗಲೇ, ಕಾಂಗ್ರೆಸ್‌ ಪಕ್ಷದ ಮಹಿಳಾ ಘಟಕದಲ್ಲಿ ಬೇಗುದಿ ಶುರುವಾಗಿದೆ. ಅದರೊಂದಿಗೆ ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೊಂದು ರಾಜಕೀಯ ತಲ್ಲಣದ ಸುದ್ದಿ ಹೊರಬಿದ್ದಿದೆ. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯ ಬದಲಾವಣೆಗೆ ಚಟುವಟಿಕೆ ಆರಂಭಗೊಂಡಿದೆ. ಹೊಸ ಅಧ್ಯಕ್ಷೆಯನ್ನು ಆಯ್ಕೆ ಮಾಡುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಲಾಗಿದೆ. ರಾಜ್ಯ ಮತ್ತು ಕೇಂದ್ರ ನಾಯಕರ ಮೇಲೆ ಈ ಕುರಿತಾಗಿ ಆಕಾಂಕ್ಷಿಗಳು ಒತ್ತಡ ಹೇರಿದ್ದಾರೆ. ಇಲ್ಲಿಯವರೆಗೂ ಬೆಂಗಳೂರಿನಲ್ಲಿ ಆಗುತ್ತಿದ್ದ ಲಾಬಿ, ಈಗ ದೆಹಲಿಗೆ ಶಿಫ್ಟ್‌ ಆಗಿದೆ. ದೆಹಲಿಯಲ್ಲಿ ಕುಳಿತು ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಸ್ಥಾನಕ್ಕೆ ಆಕಾಂಕ್ಷಿಗಳು ಲಾಬಿ ಶುರು ಮಾಡಿದ್ದಾರೆ. ರಾಜ್ಯ ಮಹಿಳಾ ಕಾಂಗ್ರೆಸ್‌ಗೆ ಈಗ ಪುಷ್ಪಾ ಅಮರ್‌ನಾಥ್‌ ಅಧ್ಯಕ್ಷೆಯಾಗಿದ್ದು ಅವರನ್ನು ಬದಲಾವಣೆ ಮಾಡುತ್ತಂತೆ ಆಕಾಂಕ್ಷಿಗಳು ಒತ್ತಡ ಹೇರಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಮತ್ತು ಸಿಎಂ ಸಿದ್ಧರಾಮಯ್ಯ ಮೇಲೆ ಈಗಾಗಲೇ ಆಕಾಂಕ್ಷಿಗಳು ಒತ್ತಡ ಹೇಳಿದ್ದಾರೆ. ಮತ್ತೊಂದು ಬಾರಿ ಪುಷ್ಪಾ ಅಮರನಾಥ್ ಗೆ ವಿಸ್ತರಣೆ ಮಾಡದಂತೆ ಒತ್ತಾಯ ಮಾಡಿದ್ದಾರೆ. ದೆಹಲಿ ಮಟ್ಟದಲ್ಲೂ ನೂತನ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯ ಬದಲಾವಣೆ ಪಟ್ಟು ಹಿಡಿಯಲಾಗಿದೆ. ಹಾಲಿ ಅಧ್ಯಕ್ಷೆಯ ಅವಧಿ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಲಾಬಿ ಕೂಡ ಜೋರಾಗಿ ನಡೆಯುತ್ತಿದೆ. ಹೊಸ ಅಧ್ಯಕ್ಷೆಯ ಆಯ್ಕೆ ಮೂಲಕ ಸಂಘಟನೆಗೆ ಒತ್ತು ನೀಡಲು ಆಗ್ರಹ ಪಡಿಸಲಾಗಿದೆ.

ದೆಹಲಿಯಲ್ಲಿ ರಾಷ್ಟ್ರೀಯ ಅಧ್ಯಕ್ಷೆ ಅಲ್ಕಾ ಲಾಂಬಾ ಅವರನ್ನು ಆಕಾಂಕ್ಷಿಗಳು ಭೇಟಿ ಮಾಡಿದ್ದಾರೆ. ಭಾನುವಾರ ದೆಹಲಿಯಲ್ಲಿ ಅಲ್ಕಾ ಲಾಂಬಾಗೆ ಮಹಿಳಾ ಮಣಿಗಳು ವಿವರಣೆ ನೀಡಿದ್ದಾರೆ. ಹೊಸಬರಿಗೆ ಅವಕಾಶ ಕೊಡಬೇಕು ಅಂತ ಪಟ್ಟು ಹಿಡಿದಿದ್ದಾರೆ.

ಈ ಬಾರಿ ಮಹಿಳಾ ಅಧ್ಯಕ್ಷಗಿರಿ ಪಡೆಯಲು ಪ್ರಮುಖ ನಾಯಕಿಯರಿಂದ ಲಾಬಿ ನಡೆಯುತ್ತಿದೆ. ಮೂಲಗಳ ಪ್ರಕಾರ, ಮಾಜಿ ಶಾಸಕಿ ಸೌಮ್ಯ ರೆಡ್ಡಿ, ಕಮಲಾಕ್ಷಿ, ಕವಿತಾ ರೆಡ್ಡಿ ಹಾಗೂ ಮಥಿಲ್ಡಾ ಡಿಸೋಜಾ ಅಧ್ಯಕ್ಷಗಿರಿ ರೇಸ್‌ನಲ್ಲಿದ್ದಾರೆ.

ಮೊಬೈಲ್ ಆ್ಯಪ್‌ ಮೂಲಕ ಯುವ ಕಾಂಗ್ರೆಸ್‌ ಅಧ್ಯಕ್ಷ, ಪದಾಧಿಕಾರಿಗಳ ಆಯ್ಕೆ: ಡಿಕೆ ಶಿವಕುಮಾರ

ಅಧ್ಯಕ್ಷಗಿರಿ ಪಡೆಯಲು ಬಯಸಿರುವ ನಾಯಕಿರು, ಪರಿಷತ್, ಎಂ.ಪಿ. ಟಿಕೆಟ್ ಕೊಡುವಾಗ ಅನುಸರಿಸಿದ ಮಾನದಂಡ ತಿರಸ್ಕರಿಸುವಂತೆ ಹೇಳಿದ್ದಾರೆ. ಸಂಘಟನೆಗೆ ಒತ್ತು ನೀಡಿರುವ, ಹಾಲಿ ಸಂಘಟನೆಯಲ್ಲಿರುವರಿಗೆ ಅವಕಾಶ ಕೊಡಿ ಎಂದು ಒತ್ತಾಯ ಮಾಡಿದ್ದಾರೆ. ಪಕ್ಷದ ಪ್ರಭಾವಿಗಳ ಕುಟುಂಬ ಸದಸ್ಯರಿಗೆ ಅವಕಾಶ ಕೊಡಬೇಡಿ ಎಂದು ಹೇಳಿದ್ದಾರೆ.

ಮುಡಾದಿಂದ ಎಚ್.ಡಿ.ಕುಮಾರಸ್ವಾಮಿಗೆ 32,800 ಚದರಡಿ ಬದಲಿ ನಿವೇಶನ: ಕಾಂಗ್ರೆಸ್‌ ಆರೋಪ