Assembly election: ಜೆಡಿಎಸ್ ಮುಸ್ಲಿಂ ಕಾರ್ಯಕರ್ತರ ಪ್ರತಿಜ್ಞೆ: ನಿಖಿಲ್ ಗೆಲ್ಲಿಸುವುದಾಗಿ 'ಅಲ್ಲಾ' ಮೇಲೆ ಪ್ರಮಾಣ
ಅಲ್ಪಸಂಖ್ಯಾತ ಮತಗಳನ್ನು ಪಡೆಯಲು ಜೆಡಿಎಸ್ ತಂತ್ರಗಾರಿಕೆ
ರಾಮನಗರದ ಅಲ್ಪಸಂಖ್ಯಾತರಿಂದ ಅಲ್ಲಾ ಮೇಲೆ ಪ್ರತಿಜ್ಞೆ ಸ್ವೀಕಾರ
ಕುಮಾರಸ್ವಾಮಿ ಸಿಎಂ, ನಿಖಿಲ್ ಶಾಸಕರನ್ನಾಗಿ ಮಾಡುವುದಕ್ಕೆ ಪ್ರತಿಜ್ಞೆ
ರಾಮನಗರ (ಜ.12): ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರ ಓಲೈಕೆಗೆ ರಾಜಕೀಯ ಪಕ್ಷಗಳು ಮುಂದಾಗಿವೆ. ಅದರಲ್ಲೂ ರಾಮನಗರದಲ್ಲಿ ಜೆಡಿಎಸ್ ಪಕ್ಷ ಒಂದು ಹೆಚ್ಚೆ ಮುಂದೆ ಹೋಗಿ ಅಲ್ಪಸಂಖ್ಯಾತ ಮತಗಳು ಕೈತಪ್ಪದಂತೆ ಮತದಾರರಿಗೆ ಪ್ರತಿಜ್ಞಾವಿಧಿ ಬೋಧಿಸುವ ಮೂಲಕ ಮತಚದುರದಂತೆ ಅಲ್ಲಾ ಮೇಲೆ ಪ್ರಮಾಣ ಮಾಡಿ ಕಾರ್ಯಕರ್ತರಿಗೆ ಪ್ರತಿಜ್ಞೆ ಭೋದಿಸಲಾಗಿದೆ.
ಬೆಂಗಳೂರಿನ ಕೂಗಳತೆ ದೂರದಲ್ಲಿರುವ ರೇಷ್ಮೆನಾಡು ರಾಮನಗರದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ರಾಮನಗರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ರಾಮನಗರದಲ್ಲಿ ಅಭ್ಯರ್ಥಿ ಘೋಷಣೆ ಆಗುತ್ತಿದ್ದಂತೆ ಕ್ಷೇತ್ರದೆಲ್ಲೆಡೆ ಕಾಲಿಗೆ ಚಕ್ರ ಕಟ್ಟಿಕೊಂಡು ಸಂಚಾರ ಮಾಡಿ ಮತಭೇಟೆಗೆ ಮುಂದಾಗಿದ್ದಾರೆ. ಅಲ್ಲದೇ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತಗಳು ಕೈತಪ್ಪುವ ಭೀತಿ ಕೂಡಾ ಜೆಡಿಎಸ್ ಗೆ ಎದುರಾಗಿದೆ. ಕಳೆದ ಬಾರಿ ಜೆಡಿಎಸ್ ಗೆ ಅಲ್ಪಸಂಖ್ಯಾತ ಮತಗಳು ಕೇವಲ ಬೆರಳೆಣಿಕೆ ಮತಗಳಷ್ಟೇ ಬಂದಿತ್ತು.
Ramanagara: ಬಿಜೆಪಿಯ ನಿಜವಾದ ಬಿ ಟೀಮ್ ಕಾಂಗ್ರೆಸ್: ನಿಖಿಲ್ ಕುಮಾರಸ್ವಾಮಿ
ಅಲ್ಪಸಂಖ್ಯಾತ ಮತಗಳೇ ನಿರ್ಣಾಯಕ: ಇದನ್ನು ಗಮನಿಸಿದ್ದ ನಿಖಿಲ್ ಕುಮಾರಸ್ವಾಮಿ ಅಲ್ಪಸಂಖ್ಯಾತ ಮತಗಳನ್ನು ಬೇಟೆಗೆ ಮುಂದಾಗಿದ್ದಾರೆ. ರಾಮನಗರದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಅಲ್ಪಸಂಖ್ಯಾತ ಮತಗಳ ಓಲೈಕೆಗೆ ಜೆಡಿಎಸ್ ಹೊಸ ತಂತ್ರ ಅನುಸರಿಸುತ್ತಿದೆ. ರಾಮನಗರದಲ್ಲಿ ಈ ಬಾರಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯಲಿದ್ದು ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಹಾಗೂ ಜೆಡಿಎಸ್ ಅಭ್ಯರ್ಥಿ ನಿಖಿಲ್ ನಡುವೆ ಜಿದ್ದಾಜಿದ್ದಿ ಏರ್ಪಡಲಿದೆ. ಕಾಂಗ್ರೆಸ್ ನಿಂದ ಅಲ್ಪಸಂಖ್ಯಾತ ಮುಖಂಡ ಇಕ್ಬಾಲ್ ಹುಸೇನ್ ಸ್ಪರ್ಧೆ ಜೆಡಿಎಸ್ ಗೆ ಬಿಸಿ ತುಪ್ಪವಾಗಿದ್ದು, ಅಲ್ಪಸಂಖ್ಯಾತ ಮತಗಳು ಕೈತಪ್ಪುವ ಭೀತಿ ಎದುರಾಗಿದೆ.
ಮುಸ್ಲಿಂ ಕಾರ್ಯಕರ್ತರ ಪ್ರತಿಜ್ಞೆ ಸ್ವೀಕಾರ: ಆದ್ದರಿಂದ ಅಲ್ಪಸಂಖ್ಯಾತ ಮತಗಳು ಕೈತಪ್ಪದಂತೆ ಸಮುದಾಯದ ಕಾರ್ಯಕರ್ತರಿಂದ ಪ್ರತಿಜ್ಞಾವಿಧಿ ಸ್ವೀಕರಿಸಲಾಗ್ತಿದೆ. ಇಂದು ರಾಮನಗರದಲ್ಲಿ ನಡೆದ ಅಲ್ಪಸಂಖ್ಯಾತರ ಸಭೆಯಲ್ಲಿ ಕುಮಾರಸ್ವಾಮಿಯನ್ನ ಸಿಎಂ ಮಾಡಲು ಹಾಗೂ ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲ್ಲಿಸುವಂತೆ ಮುಸ್ಲಿಂ ಮುಖಂಡರು ಪ್ರತಿಜ್ಞಾ ಬೋಧಿಸಿದ್ದಾರೆ. ಪ್ರತಿಜ್ಞೆ ಸ್ವೀಕಾರ ಮಾಡಿದ ಕಾರ್ಯಕರ್ತರು ಅಲ್ಲಾ ಮೇಲೆ ಪ್ರಮಾಣ ಮಾಡಿ ಬೆಂಬಲ ನೀಡುವುದಾಗಿ ಹೇಳಿದ್ದಾರೆ.
ಯಾರೇ ಬಂದ್ರು ಹಳೆಮೈಸೂರು ಭಾಗದಲ್ಲಿ ಜೆಡಿಎಸ್ ಅಲ್ಲಾಡಿಸಲು ಆಗಲ್ಲ: ನಿಖಿಲ್ ಕುಮಾರಸ್ವಾಮಿ
ಒಟ್ಟಾರೆ ರಾಮನಗರದಲ್ಲಿ ಚುನಾವಣಾ ಕಾವು ಹೆಚ್ಚಾಗುತ್ತಿದ್ದು ಜೆಡಿಎಸ್ ಅಭ್ಯರ್ಥಿ ನಿಖಿಲ್ ನಿರಂತರ ಕ್ಷೇತ್ರ ಪ್ರವಾಸ ಮಾಡ್ತಿದ್ರೆ, ಅತ್ತ ಕಾಂಗ್ರೆಸ್ ಹಾಗೂ ಬಿಜೆಪಿ ಸದ್ದಿಲ್ಲದೆ ತೆರೆಮರೆಯ ಕಸರತ್ತು ನಡೆಸುತ್ತಿವೆ.