ಕಲಬುರಗಿ: ಏ.27ರಂದು ಮೋದಿ ಆನ್ಲೈನ್‌ನಲ್ಲಿ ಪ್ರಚಾರ, ಎನ್‌.ರವಿ ಕುಮಾರ್‌

ಏ.27ರಂದು ಬೆ.11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾರ್ಯಕರ್ತರೊಂದಿಗೆ ಆನ್ಲೈನ್‌ ಮೂಲಕ ಮಾತನಾಡುವರು. ಅಂದು ಬೆಳಿಗ್ಗೆ 11 ಗಂಟೆಗೆ ವಿಧಾನಸಾ ಮತಕ್ಷೇತ್ರಗಳ ಕೇಂದ್ರ ಸ್ಥಾನದಲ್ಲಿ, ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಕೇಂದ್ರಗಳಲ್ಲಿ ಹಾಗೂ ಬೂತ್‌ ಮಟ್ಟದ ಕೇಂದ್ರಗಳಲ್ಲಿ, ಮತದಾನ ಕೇಂದ್ರಗಳಲ್ಲಿ ದೊಡ್ಡ ಸ್ಕ್ರೀನ್‌ ಮೂಲಕ ಮೋದಿ ಅವರ ಮಾತುಗಳನ್ನು ಕೇಳಲು ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದ ಎನ್‌.ರವಿ ಕುಮಾರ್‌. 

PM Narendra Modi Will Be Campaign Online on April 27th Says N Ravikumar grg

ಕಲಬುರಗಿ(ಏ.23):  ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಏ.27ರಂದು ಬೆ.11ಕ್ಕೆ ಕಾರ್ಯಕರ್ತರೊಂದಿಗೆ ಮಾತನಾಡಲಿದ್ದಾರೆ. ಕಲಬುರಗಿಯ ಎಲ್ಲ 9 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಪ್ರಚಾರ ಮಾಡುವರು ಎಂದು ರಾಜ್ಯ ವಿಧಾನ ಪರಿಷತ್‌ ಸದಸ್ಯ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.27ರಂದು ಬೆ.11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾರ್ಯಕರ್ತರೊಂದಿಗೆ ಆನ್ಲೈನ್‌ ಮೂಲಕ ಮಾತನಾಡುವರು. ಅಂದು ಬೆಳಿಗ್ಗೆ 11 ಗಂಟೆಗೆ ವಿಧಾನಸಾ ಮತಕ್ಷೇತ್ರಗಳ ಕೇಂದ್ರ ಸ್ಥಾನದಲ್ಲಿ, ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಕೇಂದ್ರಗಳಲ್ಲಿ ಹಾಗೂ ಬೂತ್‌ ಮಟ್ಟದ ಕೇಂದ್ರಗಳಲ್ಲಿ, ಮತದಾನ ಕೇಂದ್ರಗಳಲ್ಲಿ ದೊಡ್ಡ ಸ್ಕ್ರೀನ್‌ ಮೂಲಕ ಮೋದಿ ಅವರ ಮಾತುಗಳನ್ನು ಕೇಳಲು ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.

ಕರ್ನಾಟಕದಲ್ಲಿ ಮೋದಿ 20 ರ‍್ಯಾಲಿ ಆಯೋಜಿಸಲು ಸಿದ್ಧತೆ: ಸಿಎಂ ಬೊಮ್ಮಾಯಿ

ಏ.30ರಂದು ಎಲ್ಲ 1835 ಬೂತ್‌ಗಳಲ್ಲಿ ಸುಮಾರು 30,000 ಮನೆ, ಮನೆಗೆ ಭೇಟಿ ಕಾರ್ಯಕ್ರಮವನ್ನು ಬೆ.8ರಿಂದ ರಾತ್ರಿ 8 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಕರಪತ್ರಗಳನ್ನು ಪ್ರತಿ ಮನೆ, ಮನೆಗೆ ತಲುಪಿಸಲಾಗುತ್ತದೆ. ಅಂತಹ ಕರಪತ್ರಗಳನ್ನು ಏ.27ರೊಳಗೆ ಬೂತ್‌ಗಳಿಗೆ ಪೂರೈಕೆಯಾಗಲಿದೆ. ಅಂದು ಯಾರೂ ಸಹ ಮನೆಯಲ್ಲಿ ಕಾರ್ಯಕರ್ತರು ಇರದೇ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದರು.

ಚಿತ್ತಾಪುರದಲ್ಲಿ ಮೋದಿ ಪ್ರಚಾರ:

ಜಿಲ್ಲೆಯ ಎಲ್ಲ 9 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸ ಇದೆ. ಈ ಸಂಬಂಧ ಚಿತ್ತಾಪುರ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಆಳಂದ್‌ ಮತ್ತು ಕಲಬುರ್ಗಿ ಉತ್ತರ ಕ್ಷೇತ್ರದಲ್ಲಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌, ಜೇವರ್ಗಿ ಕ್ಷೇತ್ರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ನಾಯಕರು ಪ್ರಚಾರ ಮಾಡಲಿದ್ದು, ಶೀಘ್ರವೇ ದಿನಾಂಕ ನಿಗದಿಪಡಿಸಲಾಗುತ್ತದೆ ಎಂದರು.

ಬೀದರ್‌, ಕಲಬುರ್ಗಿ, ಯಾದಗಿರಿ ಜಿಲ್ಲೆಗಳ ಸುಮಾರು 19 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲು ಮೋದಿ, ಯೋಗಿ ಆದಿತ್ಯನಾಥ್‌, ಅಮಿತ್‌ ಶಾ, ಜೆ.ಪಿ. ನಡ್ಡಾ ಮುಂತಾದ ನಾಯಕರು ಪ್ರಚಾರ ಮಾಡುವರು.
ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್‌ ಅವರ ವಿರುದ್ಧದ ಪ್ರಕರಣಗಳು ಇನ್ನೂ ಸಾಬೀತಾಗಿಲ್ಲ. ಹೀಗಾಗಿ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಹೊಂದಿದ್ದಾರೆ. ಕಾಂಗ್ರೆಸ್ಸಿಗರು ಅಪಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕ್‌ ಖರ್ಗೆಯವರ ವಿರುದ್ಧವೂ ಪ್ರಕರಣಗಳಿವೆ. ಅಲ್ಲದೇ ಚಿತ್ತಾಪುರ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಓಡಾಡಲು ಬಿಡುವುದಿಲ್ಲ ಎಂದು ಹೆದರಿಕೆ ಹಾಕಿದ್ದರು. ಈಗಲೂ ನಾವು ಹೇಳುತ್ತೇವೆ. ಅವರು ಎಲ್ಲಿ ಕರೆಯುತ್ತಾರೋ ಅಲ್ಲಿಗೆ ನಾವು ಬರುತ್ತೇವೆ ಎಂದು ಎನ್‌. ರವಿಕುಮಾರ್‌ ಹೇಳಿದರು.

ಜೇನು ಹುಳು ಕಚ್ಚಿದರೂ ಸರಿ, ಅದರ ಸಿಹಿ ನಿಮಗೆ ಸಿಗಲೆಂದು ಒಳಮೀಸಲಾತಿ ತಂದೆ: ಸಿಎಂ ಬೊಮ್ಮಾಯಿ

ಜೇವರ್ಗಿ ಮತಕ್ಷೇತ್ರದ ಕಾಂಗ್ರೆಸ್‌ ಮುಖಂಡರಾದ ಹಣಮಂತ್‌ ಹೂಗಾರ್‌, ಬಸವರಾಜ್‌ ಬೂದಿಹಾಳ್‌, ಪ್ರಕಾಶ್‌ ಪಾಟೀಲ್‌ ಯತ್ನಾಳ್‌, ಈಶ್ವರಗೌಡ ಮಾಲಿಪಾಟೀಲ್‌, ಸಿದ್ದು ಬಳೂಂಡಗಿ, ದಸ್ತಗೀರಸಾಬ್‌ ನದಾಫ್‌, ರಮೇಶ್‌ ಕಲಗುರ್ತಿ ಅವರು ಬಿಜೆಪಿ ಪಕ್ಷವನ್ನು ಸೇರಿದರು. ಅವರಿಗೆ ಪಕ್ಷದ ಧ್ವಜ ಹಾಗೂ ಶಾಲು ಹೊದಿಸಿ ಎನ್‌. ರವಿಕುಮಾರ್‌ ಬಿಜೆಪಿ ಪಕ್ಷಕ್ಕೆ ಸ್ವಾಗತಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಅಶೋಕ್‌ ಬಗಲಿ, ಎಂ.ಬಿ. ಪಾಟೀಲ್‌ ಹರವಾಳ್‌, ಮುಕುಂದ್‌ ದೇಶಪಾಂಡೆ ಉಪಸ್ಥಿತರಿದ್ದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios