ಕರ್ನಾಟಕದಲ್ಲಿ ಕಾಂಗ್ರೆಸ್ ಸುಳ್ಳು ಹೇಳಿ ಅಧಿಕಾರಕ್ಕೇರಿದೆ. ಕೊಟ್ಟ ಭರವಸೆಗಳನ್ನು ಈಗ ಈಡೇರಿಸಲಾಗದೆ ರಾಜ್ಯವನ್ನು ಸುಲಿಗೆಮಾಡುತ್ತಿದೆ ಎಂದು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡಿದ ಪ್ರಧಾನಿ ನರೇಂದ್ರ ಮೋದಿ 

ಪುಣೆ(ನ.13): ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ಮುಂದುವರೆಸಿರುವ ಪ್ರಧಾನಿ ನರೇಂದ್ರ ಮೋದಿ, 'ಕರ್ನಾಟಕ ಸರ್ಕಾರ ಹಾಡಹಗಲೇ ಲೂಟಿಯಲ್ಲಿ ಮುಳುಗಿದೆ. ಅಲ್ಲಿ ದಿನಕ್ಕೊಂದು ಹಗರಣ ಬರುತ್ತಿವೆ' ಎಂದು ಕಿಡಿಕಾರಿದ್ದಾರೆ. 

ಮಂಗಳವಾರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಭಾಗವಾಗಿ ಪ್ರಚಾರ ಭಾಷಣ ಮಾಡಿದ ಪ್ರಧಾನಿ ಮೋದಿ, 'ಕರ್ನಾಟಕದಲ್ಲಿ ಕಾಂಗ್ರೆಸ್ ಸುಳ್ಳು ಹೇಳಿ ಅಧಿಕಾರಕ್ಕೇರಿದೆ ಎಂದು ಟೀಕಿಸಿದ್ದಾರೆ. 

ಮದುವೆ ಪತ್ರಿಕೆಯಲ್ಲಿ ಮೋದಿ ಪರ ಮತಯಾಚನೆ ಕೇಸ್‌ಗೆ ತಡೆ

ಕೊಟ್ಟ ಭರವಸೆಗಳನ್ನು ಈಗ ಈಡೇರಿಸಲಾಗದೆ ರಾಜ್ಯವನ್ನು ಸುಲಿಗೆಮಾಡುತ್ತಿದೆ' ಎಂದು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡಿದರು.