ನರೇಂದ್ರ ಮೋದಿ ಅವರಿಗೆ ಕೊಡಲೆಂದೇ ಕಿರಣ್ ಅವರು 20/24 ಫ್ರೇಮ್‌ನ ಮೋದಿ ಅವರ ಆಯಿಲ್ ಪೈಂಟ್ ಚಿತ್ರ ರಚನೆ ಮಾಡಿದ್ದರು. ರೋಡ್‌ಶೋ ವೇಳೆ ತಾನು ಬಿಡಿಸಿದ ಚಿತ್ರವನ್ನು ಮೋದಿ ಎದುರು ಪ್ರದರ್ಶಿಸಿದರು.

ಮಂಗಳೂರು(ಏ.16): ಮಂಗಳೂರಿನಲ್ಲಿ ಭಾನುವಾರ ರೋಡ್ ಶೋ ವೇಳೆ ತೊಕ್ಕೊಟ್ಟು ನಿವಾಸಿ ಚಿತ್ರ ಕಲಾವಿದ ಕಿರಣ್‌ ರಚನೆ ಮಾಡಿದ ಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿ ಸ್ವೀಕರಿಸಿ ಗಮನ ಸೆಳೆದರು.

ನರೇಂದ್ರ ಮೋದಿ ಅವರಿಗೆ ಕೊಡಲೆಂದೇ ಕಿರಣ್ ಅವರು 20/24 ಫ್ರೇಮ್‌ನ ಮೋದಿ ಅವರ ಆಯಿಲ್ ಪೈಂಟ್ ಚಿತ್ರ ರಚನೆ ಮಾಡಿದ್ದರು. ರೋಡ್‌ಶೋ ವೇಳೆ ತಾನು ಬಿಡಿಸಿದ ಚಿತ್ರವನ್ನು ಮೋದಿ ಎದುರು ಪ್ರದರ್ಶಿಸಿದರು.

NARENDRA MODI: ಮೋದಿ ‘ಗುರು’ ಮಂತ್ರ ಲೆಕ್ಕಾಚಾರ: ಅಂತಿಮ ಹಂತದಲ್ಲಿ ಯಾರ ಕೈ ಹಿಡಿಯಲಿದ್ದಾರೆ ಬಿಲ್ಲವರು ?

ರೋಡ್‌ ಶೋ ನಡುವೆಯೂ ಚಿತ್ರವನ್ನು ಗಮನಿಸಿದ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿ, ಫೋಟೊ ನೀಡುವಂತೆ ಎಸ್.ಪಿ.ಜಿ. ಅಧಿಕಾರಿಗಳಿಗೆ ಸೂಚಿಸಿದರು. ಎಸ್‌ಪಿಜಿಯವರು ಚಿತ್ರವನ್ನು ಪಡೆದು ಮೋದಿ ಅವರಿಗೆ ಹಸ್ತಾಂತರಿಸಿದರು. ತಾನು ರಚನೆ ಮಾಡಿದ ಚಿತ್ರವನ್ನು ಮೋದಿ ಸ್ವೀಕರಿಸಿರುವುದಕ್ಕೆ ಕಿರಣ್ ಸಂತಸ ವ್ಯಕ್ತಪಡಿಸಿದ್ದಾರೆ.