ಪ್ರಧಾನಿ ಮೋದಿ ಸರ್ಕಾರ ಯಾವುದೇ ಗ್ಯಾರಂಟಿ ಜನತೆಗೆ ನೀಡಿಲ್ಲ: ಶಾಸಕ ನಾರಾಯಣಸ್ವಾಮಿ
ಪ್ರಧಾನಿ ಮೋದಿ ಸರ್ಕಾರ ಒಂದೇ ಒಂದು ಗ್ಯಾರಂಟಿ ಯೋಜನೆಯನ್ನು ಜನರಿಗೆ ನೀಡಿಲ್ಲ. ಬರೀ ವಂಚನೆ ಮಾಡಿಕೊಂಡೇ ಹತ್ತು ವರ್ಷ ಪೂರೈಸಿದೆ. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಐದು ಗ್ಯಾರಂಟಿಗಳನ್ನು ಜಾರಿ ಮಾಡುವ ಮೂಲಕ ನುಡಿದಂತೆ ನಡೆದಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.
ಬಂಗಾರಪೇಟೆ (ಮಾ.02): ಪ್ರಧಾನಿ ಮೋದಿ ಸರ್ಕಾರ ಒಂದೇ ಒಂದು ಗ್ಯಾರಂಟಿ ಯೋಜನೆಯನ್ನು ಜನರಿಗೆ ನೀಡಿಲ್ಲ. ಬರೀ ವಂಚನೆ ಮಾಡಿಕೊಂಡೇ ಹತ್ತು ವರ್ಷ ಪೂರೈಸಿದೆ. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಐದು ಗ್ಯಾರಂಟಿಗಳನ್ನು ಜಾರಿ ಮಾಡುವ ಮೂಲಕ ನುಡಿದಂತೆ ನಡೆದಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು. ತಾಲೂಕಿನ ಕಾಮಸಮುದ್ರ ಗ್ರಾಮದಲ್ಲಿ ೫ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗೂ ಸಾಧಕ ಬಾಧಕಗಳ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಶಾಸಕರು ಮಾತನಾಡಿದರು.
ಮನೆ ನೀಡಿರುವುದಾಗಿ ಸುಳ್ಳು ಪ್ರಚಾರ: ಕೇಂದ್ರ ಸರ್ಕಾರ ಕಳೆದ ಐದು ವರ್ಷದಲ್ಲಿ ಒಂದೇ ಒದು ಮನೆ ಸಹ ಬಡವರಿಗೆ ನೀಡಿಲ್ಲ ಆದರೆ ಹತ್ತು ಕೋಟಿ ಮನೆ ಹಂಚಲಾಗಿದೆ ಎಂದು ಪ್ರಚಾರ ಪಡೆಯುತ್ತಿದ್ದಾರೆಂದು ಟೀಕಿಸಿದರು. ಆದರೆ ನಮ್ಮ ಕಾಂಗ್ರೆಸ್ ಸರ್ಕಾರ ಈ ವರ್ಷ ೨ಸಾವಿರ ಮನೆಗಳನ್ನು ಹಂಚಲಾಗುವುದು ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಎಂದರು.ಕೇಂದ್ರ ಸರ್ಕಾರದ ಹತ್ತು ವರ್ಷಗಳಲ್ಲಿ ಮಾಡಿರುವ ಸಾಧನೆ ಏನಪ್ಪ ಎಂದರೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದೇ ದೊಡ್ಡ ಸಾಧನೆ ಎಂದರು.
ಬಿಜೆಪಿ ಪಾರ್ಟಿಯೇ ಗಿಮಿಕ್ ಪಾರ್ಟಿ, ಅಲ್ಲಿರುವವರೆಲ್ಲರು ಗಿಮಿಕ್ ಲೀಡರ್‌ಗಳು: ಸಚಿವ ರಾಮಲಿಂಗಾರೆಡ್ಡಿ
ಅಯೋಧ್ಯಯಲ್ಲಿ ಶ್ರೀರಾಮ ಇದ್ದರೆ ಕರ್ನಾಟದಲ್ಲಿ ಸಿದ್ದರಾಮಯ್ಯ ಇದ್ದಾರೆ, ಐದು ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಪ್ರತಿ ನಿತ್ಯ ಜನರು ನೆನೆಯಬೇಕು. ಕಾಂಗ್ರೆಸ್ ಸರ್ಕಾರ ಹೇಳಿದಂತೆ ನಡೆಯುತ್ತಿದೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬರೀ ಸುಳ್ಳಿನ ಕಂತೆಯಲ್ಲಿ ನಡೆಯುತ್ತಿದೆ ಎಂದು ಟೀಕಿಸಿದರು.
ಶ್ರೀಮಂತರ ಪರ ಸರ್ಕಾರ: ನಾ ಕಾವುಂಗಾ ನಾ ಕಾನೆದೇವುಂಗಾ ಎನ್ನುವ ಪ್ರಧಾನಿ ಮೋದಿ ಅವರೂ ತಿನ್ನಲ್ಲ ಬಡವರೂ ತಿನ್ನಲು ಬಿಡುತಿಲ್ಲ. ಕೇಂದ್ರ ಸರ್ಕಾರ ಶ್ರೀತಂತರ ಪರವಾಗಿದೆ ಅವರ ಹತ್ತು ವರ್ಷದ ಆಡಳಿತದಲ್ಲಿ ಬಡವರ ಸಾಲ, ಬಡ್ಡಿ ಮನ್ನಾ ಮಾಡಿಲ್ಲ. ಆದರೆ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿ ಬಡವರ ಪರ ಸರ್ಕಾರ ಎಂಬುದನ್ನು ಸಾಭೀತು ಮಾಡಿದೆ ಎಂದರು.
ಅನ್ನಭಾಗ್ಯ ಯೋಜನೆಯಲ್ಲಿ ಹತ್ತು ಕೆಜಿ ಅಕ್ಕಿ ಕೊಟ್ಟರೆ ಕಾಂಗ್ರೆಸ್ ಸರ್ಕಾರಕ್ಕೆ ಒಳ್ಳೆ ಹೆಸರು ಬರುವುದೆಂದು ಕೇಂದ್ರ ಅಕ್ಕಿ ನೀಡಲಿಲ್ಲ. ನಾವು ಹಣ ಕೊಡುತ್ತೇವೆ ಅಕ್ಕಿ ಕೊಡಿ ಎಂದರೂ ಕೊಡಲಿಲ್ಲ. ಈಗ ಜನರು ಬೇಡವೆಂದರೂ ರಸ್ತೆಯಲ್ಲಿ ನಿಂತುಕೊಂಡು ೨೯ ರು.ಗೆ ಅಕ್ಕಿ ಮಾರಾಟ ಮಾಡುತ್ತಿದೆ. ಇಂತಹ ಸರ್ಕಾರ ಬೇಕಾ ಎಂದು ನೀವೆ ನಿರ್ಧಾರ ಮಾಡಿ. ಬಡವರ ಪರ ಧ್ವನಿಯಾಗಿರುವ ಕಾಂಗ್ರೆಸ್ ಸರ್ಕಾರವನ್ನು ಜನರು ಕೈ ಬಿಡದೆ ಲೋಕಸಭೆ ಚುನಾವಣೆಯಲ್ಲಿ ಬೆಂಬಲಿಸಿದರೆ ಮತ್ತಷ್ಟು ಯೋಜನೆಗಳನ್ನು ನೀಡಲು ಸರ್ಕಾರಕ್ಕೆ ಶಕ್ತಿ ಬರಲಿದೆ ಎಂದರು.
ಜಾತಿ ಜಾತಿಗಳ ನಡುವೆ ಎತ್ತಿ ಕಟ್ಟಲು ಜಾತಿಗಣತಿ ವರದಿ ಸಿದ್ಧಪಡಿಸಲಾಗಿದೆ: ಸಿ.ಟಿ.ರವಿ ಆರೋಪ
ಸಮಾವೇಶದಲ್ಲಿ ತಹಸೀಲ್ದಾರ್ ರಶ್ಮಿ,ಗ್ರಾಪಂ ಅಧ್ಯಕ್ಷ ಆದಿನಾರಾಯಣ, ಡಿಸಿಸಿ ಬ್ಯಾಂಕಿನ ನಿರ್ದೇಶಕ ಗೋವಿಂದರಾಜು, ಮುಖಂಡರಾದ ಕೆ.ಟಿ.ರಂಗನಾಥನಾಯ್ಡು,ಶ್ರೀನಿವಾಸ್,ಮುನಿರಾಜು,ಜೆಸಿಬಿ ನಾರಾಯಣಪ್ಪ,ದೋಣಿಮಡಗು ಪಂಃಅಧ್ಯಕ್ಷೆ ಮಂಜುಳಾ ಜಯಣ್ಣ,ತೊಪ್ಪನಹಳ್ಳಿ ಪಂಃಅಧ್ಯಕ್ಷ ಪ್ರಭಾಕರರೆಡ್ಡಿ,ಲಕ್ಷ್ಮೀನಾರಾಯಣಪ್ರಸಾದ್,ರಂನಾಥಚಾರಿ ಮತ್ತಿತರರು ಇದ್ದರು.