Asianet Suvarna News Asianet Suvarna News

ವಾಜಪೇಯಿ ಆಶಯಕ್ಕೆ ತಕ್ಕಂತೆ ಮೋದಿ ಆಡಳಿತ: ವಿಜಯೇಂದ್ರ

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, 2047ರ ವೇಳೆಗೆ ಸಂಪೂರ್ಣವಾಗಿ ಬದಲಾವಣೆಯಾಗಲಿದೆ. ವಿಶ್ವವೇ ಭಾರತದತ್ತ ನೋಡುವಂತಾಗಲಿದೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ 

PM Narendra Modi Administration as per AB Vajpayee's Wish Says BY Vijayendra grg
Author
First Published Dec 26, 2023, 10:43 AM IST

ಬೆಂಗಳೂರು(ಡಿ.26):  ರಾಷ್ಟ್ರದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತವಿರಬೇಕು ಎಂಬುದು ಮಾಜಿ ಪ್ರಧಾನಿ ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಅವರದ್ದಾಗಿತ್ತು. ಇದೀಗ ಅವರ ಕನಸನ್ನು ಕನಸು ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತ ಕಾರ್ಯನಿರತವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಸೋಮವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ವಾಜಪೇಯಿ ಜನ್ಮದಿನ ಪ್ರಯುಕ್ತ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ ಉತ್ತಮ ಆಡಳಿತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದಲ್ಲಿ ಉತ್ತಮ ಆಡಳಿತದ ಕುರಿತು ಚರ್ಚೆಗಳು ನಡೆದಿರಲಿಲ್ಲ ಮತ್ತು ಅಂತಹ ಪದವನ್ನೂ ಸಹ ಕೇಳಿರಲಿಲ್ಲ. ಆದರೆ, ವಾಜಪೇಯಿ ಅವರ ಆಡಳಿತದ ನಂತರ ಉತ್ತಮ ಆಡಳಿತ ಎಂಬುದನ್ನು ಕಾಣಬಹುದಾಗಿದೆ. ಅವರ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದಲ್ಲಿ ಉತ್ತಮ ಆಡಳಿತ ಮತ್ತು ಅಭಿವೃದ್ಧಿಯನ್ನು ದೇಶದಲ್ಲಿ ಕಾಣಲಾಗುತ್ತಿದೆ. ದೇಶದ ಜನರಿಗೆ ಉತ್ತಮ ಆಡಳಿತ ಅಗತ್ಯವಿದೆ ಎನ್ನಿಸಿದರೂ ನಮ್ಮ ರಾಷ್ಟ್ರದಲ್ಲಿ ಇದು ಸಾಧ್ಯವೇ ಎಂಬ ಪ್ರಶ್ನೆ ಇತ್ತು. ಅದನ್ನು ಎ.ಬಿ.ವಾಜಪೇಯಿ ಆಡಳಿತದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ಇತ್ತು. ವಾಜಪೇಯಿ ಆಡಳಿತದಲ್ಲಿ 25ಕ್ಕೂ ಹೆಚ್ಚು ದೇಶಗಳೊಂದಿಗೆ ಉತ್ತಮ ಭಾಂದವ್ಯ ಇಟ್ಟುಕೊಳ್ಳಲಾಗಿತ್ತು ಎಂದರು.

ಮುಂದಿನ ಪ್ರಧಾನಿ ಯಾರಾಗಬೇಕು? ಕರ್ನಾಟಕದಲ್ಲಿ ಮೋದಿಗೆ ಶೇ.65ರಷ್ಟು ಮತ!

ಕೆಲ ವರ್ಷಗಳ ಹಿಂದೆ ವಿದೇಶದಲ್ಲಿ ಭಾರತೀಯರು ಎಂದರೆ ಯಾರೂ ತಲೆ ಎತ್ತಿ ನೋಡುತ್ತಿರಲಿಲ್ಲ. ಕಳೆದ ಒಂಭತ್ತು ವರ್ಷದಲ್ಲಿ ದೇಶದಲ್ಲಿನ ಆಡಳಿತ ಮತ್ತು ಅಭಿವೃದ್ಧಿಯಲ್ಲಿನ ಬದಲಾವಣೆಗಳನ್ನು ಗಮನಿಸಿ ಭಾರತೀಯರು ವಿಶ್ವದ ಎಲ್ಲೆಡೆಯೂ ಹೆಮ್ಮೆಯಿಂದ ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, 2047ರ ವೇಳೆಗೆ ಸಂಪೂರ್ಣವಾಗಿ ಬದಲಾವಣೆಯಾಗಲಿದೆ. ವಿಶ್ವವೇ ಭಾರತದತ್ತ ನೋಡುವಂತಾಗಲಿದೆ. ರಾಜಕಾರಣಿಗಳು ಸಾಮಾನ್ಯವಾಗಿ ಚುನಾವಣೆ ಕುರಿತು ಚಿಂತನೆ ನಡೆಸಿದರೆ, ಪ್ರಧಾನಿ ನರೇಂದ್ರ ಮೋದಿ ಮಾತ್ರ ದೇಶದ ಏಳ್ಗೆಯನ್ನು ನಿರೀಕ್ಷಿಸುತ್ತಾರೆ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಾ। ಸಿ.ಎನ್‌.ಅಶ್ವತ್ಥನಾರಾಯಣ ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios