ತೆಲಂಗಾಣಕ್ಕೆ ಕರ್ನಾಟಕದಿಂದ 1,500 ಕೋಟಿ ಹಣ ತರಲು ಸಂಚು: ಕೆ.ಟಿ. ರಾಮರಾವ್
ಆದಾಯ ತೆರಿಗೆ ದಾಳಿಯಲ್ಲಿ ಬೆಂಗಳೂರಿನಲ್ಲಿ ಸಿಕ್ಕಿರುವ 40 ಕೋಟಿ ರು. ಹಾಗೂ ಸಿಸಿಟಿವಿ ದೃಶ್ಯಾವಳಿಯನ್ನು ಲಗತ್ತಿಸಿ ಟ್ವೀಟ್ ಮಾಡಿ ‘ಸ್ಯ್ಕಾಂಗ್ರೆಸ್ ನಮಗೆ ಬೇಡ’ ಎಂದ ರಾಮರಾವ್

ಹೈದರಾಬಾದ್(ಅ.14): ತೆಲಂಗಾಣ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ ಕರ್ನಾಟಕದಿಂದ 1500 ಕೋಟಿ ಹಣ ತರಲು ಯತ್ನಿಸುತ್ತಿದ್ದು, ಅದನ್ನು ರಾಜ್ಯದ ಜನತೆಗೆ ಹಂಚಲು ಯೋಜನೆ ರೂಪಿಸಿದೆ ಎಂದು ತೆಲಂಗಾಣ ಆಡಳಿತಾರೂಢ ಬಿಆರ್‌ಎಸ್ ನಾಯಕರಾದ ಕೆ.ಟಿ. ರಾಮರಾವ್ ಹಾಗೂ ಹರೀಶ್ ರಾವ್ ಆರೋಪಿಸಿದ್ದಾರೆ.
ಆದಾಯ ತೆರಿಗೆ ದಾಳಿಯಲ್ಲಿ ಬೆಂಗಳೂರಿನಲ್ಲಿ ಸಿಕ್ಕಿರುವ 40 ಕೋಟಿ ರು. ಹಾಗೂ ಸಿಸಿಟಿವಿ ದೃಶ್ಯಾವಳಿಯನ್ನು ಲಗತ್ತಿಸಿ ಟ್ವೀಟ್ ಮಾಡಿರುವ ರಾಮರಾವ್, ‘ಸ್ಯ್ಕಾಂಗ್ರೆಸ್ ನಮಗೆ ಬೇಡ’ ಎಂದಿದ್ದಾರೆ.
ಪಂಚರಾಜ್ಯ ಚುನಾವಣೆ: ಮಧ್ಯ ಪ್ರದೇಶ, ಛತ್ತೀಸ್‌ಗಢ ಕೈ ಪಾಲು, ರಾಜಸ್ಥಾನ ಬಿಜೆಪಿಗೆ: ಸಮೀಕ್ಷೆ
ಇನ್ನೊಬ್ಬ ನಾಯಕ ಹರೀಶ್ ರಾವ್ ಟ್ವೀಟ್ ಮಾಡಿ, ’ಕಾಂಗ್ರೆಸ್ ನೋಟು ತಂದು ರಾಜ್ಯದ ಜನತೆಗೆ ಹಂಚಿ ವೋಟು ಗಿಟ್ಟಿಸುವ ಯತ್ನದಲ್ಲಿ ತೊಡಗಿದೆ. ಕರ್ನಾಟಕದ ಗುತ್ತಿಗೆದಾರರು ಹಾಗೂ ಉದ್ಯಮಿಗಳಿಂದ ಸುಮಾರು 1500 ಕೋಟಿ ರು. ಹಣವನ್ನು ಕಾಂಗ್ರೆಸ್ ಸಂಗ್ರಹಿಸಿದ್ದು, ಚೆನ್ನೈ ಮೂಲಕ ಹೈದರಾಬಾದ್‌ಗೆ ತರುವ ಯೋಜನೆ ರೂಪಿಸಿದೆ. ರಾಜ್ಯದ ಜನತೆ ಅವರು ಕೊಡುವ ಹಣವನ್ನು ತಿರಸ್ಕರಿಸಬೇಕು’ ಎಂದಿದ್ದಾರೆ.