ದೇಶದ ನಾಗರಿಕರು ಸಂಸತ್ತಿಗೆ ಅರ್ಜಿ ಸಲ್ಲಿಸಿ ತಿಳಿಸುವ ವಿಷಯಗಳ ಕುರಿತು ಅಲ್ಲಿ ಚರ್ಚೆಯಾಗುವಂತೆ ಮಾಡಲು ಸೂಕ್ತ ವ್ಯವಸ್ಥೆ ಸೃಷ್ಟಿಸುವ ಸಂಬಂಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಕೆಯಾಗಿದೆ.

ನವದೆಹಲಿ: ದೇಶದ ನಾಗರಿಕರು ಸಂಸತ್ತಿಗೆ ಅರ್ಜಿ ಸಲ್ಲಿಸಿ ತಿಳಿಸುವ ವಿಷಯಗಳ ಕುರಿತು ಅಲ್ಲಿ ಚರ್ಚೆಯಾಗುವಂತೆ ಮಾಡಲು ಸೂಕ್ತ ವ್ಯವಸ್ಥೆ ಸೃಷ್ಟಿಸುವ ಸಂಬಂಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಕೆಯಾಗಿದೆ. ಕರಣ್‌ ಗಗ್‌ರ್‍ ಎಂಬುವರು ಈ ಅರ್ಜಿ ಸಲ್ಲಿಸಿದ್ದು, ಅದರ ಪ್ರತಿಯನ್ನು ಕೇಂದ್ರ ಸರ್ಕಾರಿ ವಕೀಲರಿಗೆ ಸಲ್ಲಿಸಲು ಸುಪ್ರೀಂಕೋರ್ಟ್‌ ಸೂಚಿಸಿದೆ. ವಿಚಾರಣೆಯನ್ನು ಫೆಬ್ರವರಿಗೆ ಮುಂದೂಡಿದೆ.

ಬ್ರಿಟನ್‌ ಮಾದರಿ ವ್ಯವಸ್ಥೆ ಬೇಕು:

ಸಂಸತ್ತಿಗೆ (Parliament) ಅರ್ಜಿ ಸಲ್ಲಿಸಿ ನಾಗರಿಕ ಪ್ರಸ್ತಾಪಿಸುವ ವಿಚಾರಗಳ ಕುರಿತಂತೆ ಅಲ್ಲಿ ಚರ್ಚೆ, ಸಂವಾದ ನಡೆಯಬೇಕು. ಇದೊಂದು ಮೂಲಭೂತ ಹಕ್ಕು ಎಂದು ಸುಪ್ರೀಂಕೋರ್ಟ್‌ (Supreme Court) ಘೋಷಿಸಬೇಕು. ತನ್ಮೂಲಕ ಯಾವುದೇ ಅಡೆ ತಡೆ ಇಲ್ಲದೆ ನಾಗರಿಕರ ದನಿ ಸಂಸತ್ತಿನಲ್ಲಿ ಕೇಳುವಂತಾಗಬೇಕು. ಇದಕ್ಕಾಗಿ ಸರ್ಕಾರ ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕು ಎಂಬುದು ಅರ್ಜಿದಾರರ ವಾದ.

ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಜನರನ್ನು ದುರ್ಬಲಗೊಳಿಸಲಾಗಿದೆ. ಜನರು ಮತದಾನ ಮಾಡಿ, ಪ್ರತಿನಿಧಿಗಳನ್ನು ಚುನಾಯಿತರನ್ನಾಗಿಸಿದ ಮೇಲೆ ಅವರಿಗೆ ಅದರಲ್ಲಿ ಭಾಗಿಯಾಗುವ ಅವಕಾಶವೇ ಇಲ್ಲ. ಸಂಸತ್ತಿಗೆ ನೇರವಾಗಿ ಜನರು ಅರ್ಜಿ ಸಲ್ಲಿಸುವ ವ್ಯವಸ್ಥೆ ಬ್ರಿಟನ್‌ನಲ್ಲಿದ್ದು, ಅಲ್ಲಿ ಚೆನ್ನಾಗಿಯೇ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ವಿವರಿಸಿದ್ದಾರೆ.

ಜಗತ್ತಿನ ಅತ್ಯಂತ ಪ್ರಬಲ ನಾಯಕ ಮೋದಿ, ಬ್ರಿಟನ್ ಸಚಿವನ ಮಾತಿಗೆ ತಲೆದೂಗಿದ ಯುಕೆ ಸಂಸತ್ತು!

ಬ್ರಿಟನ್‌ ಸಂಸತ್ತಲ್ಲಿ ಪ್ರಧಾನಿ ಮೋದಿ ಸಮರ್ಥಿಸಿದ ಪ್ರಧಾನಿ ರಿಷಿ ಸುನಕ್‌