ಪೆನ್‌ಡ್ರೈವ್‌ ಕೇಸನ್ನು ಗೃಹಸಚಿವರು ಲಘುವಾಗಿ ಪರಿಗಣಿಸಿದ್ದಾರೆ: ಈಶ್ವರಪ್ಪ

ಪೆನ್‌ಡ್ರೈವ್‌ ಪ್ರಕರಣದಿಂದ ಇಡೀ ಕರ್ನಾಟಕ ರಾಜ್ಯ ತಲೆತಗ್ಗಿಸುವ ಸ್ಥಿತಿ ಉಂಟಾಗಿದೆ. ಈ ಪ್ರಕರಣವನ್ನು ಸಿಎಂ, ಹೋಮ್ ಮಿನಿಸ್ಟರ್ ಹಗುರವಾಗಿ ತೆಗೆದುಕೊಂಡಿದ್ದಾರೆ. ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ಏಕೆ ಕೊಡ್ತಿಲ್ಲ? ಎಂದು ಮಾಜಿ ಸಚಿವ ಈಶ್ವರಪ್ಪ ಪ್ರಶ್ನಿಸಿದರು. 

Pendrive case taken lightly by Home Minister Parameshwar Says KS Eshwarappa gvd

ಬಾಗಲಕೋಟೆ (ಮೇ.27): ಪೆನ್‌ಡ್ರೈವ್‌ ಪ್ರಕರಣದಿಂದ ಇಡೀ ಕರ್ನಾಟಕ ರಾಜ್ಯ ತಲೆತಗ್ಗಿಸುವ ಸ್ಥಿತಿ ಉಂಟಾಗಿದೆ. ಈ ಪ್ರಕರಣವನ್ನು ಸಿಎಂ, ಹೋಮ್ ಮಿನಿಸ್ಟರ್ ಹಗುರವಾಗಿ ತೆಗೆದುಕೊಂಡಿದ್ದಾರೆ. ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ಏಕೆ ಕೊಡ್ತಿಲ್ಲ? ಎಂದು ಮಾಜಿ ಸಚಿವ ಈಶ್ವರಪ್ಪ ಪ್ರಶ್ನಿಸಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಪೆನ್ ಡ್ರೈವ್ ಪ್ಯಾಕ್ಟರಿ ಮಾಲೀಕ ಅಂತ ನಾನು ಹೇಳಲ್ಲ. ಕುಮಾರಸ್ವಾಮಿ ಅವರ ದೊಡ್ಡ ಪಾತ್ರ ಇದೆ ಅಂತಾನೂ ಹೇಳಲ್ಲ ಎಂದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಜನರಿಂದ ಆಯ್ಕೆಯಾದ ಚುನಾಯಿತ ಸರ್ಕಾರ ರಾಜ್ಯದಲ್ಲಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದೆ. ಸರ್ಕಾರವನ್ನು ಕೆಡವಿ ಎಂದು ನಾನು ಹೇಳಲ್ಲ. 

ರಾಷ್ಟ್ರಪತಿ ಆಡಳಿತ ತನ್ನಿ ಅಂತಾನೂ ಹೇಳಲ್ಲ. ಚುನಾಯಿತ ಪ್ರತಿನಿಧಿಗಳ ಸರ್ಕಾರವೇ ಮುಂದುವರೆಯಲಿ. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ತರೋದಕ್ಕೆ ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಅವಕಾಶ ಕೊಡಬಾರದು ಎಂದರು. ಚನ್ನಗಿರಿಯಲ್ಲಿ ನಡೆದ ಲಾಕಪ್ ಡೆತ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಸರ್ಕಾರದ ವ್ಯವಸ್ಥೆ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತಿದೆ. ಮೃತ ಆದಿಲ್ ತಂದೆಯೇ ಎರಡು ಹೇಳಿಕೆ ನೀಡಿದ್ದಾರೆ. ಒಂದು ಕಡೆ ಲೋ ಬಿಪಿ ಎಂದು ಹೇಳಿದ್ದರೆ, ಮತ್ತೊಂದು ಕಡೆ ಲಾಕಪ್ ಡೆತ್ ಅಂದಿದ್ದಾರೆ. ರಾಜ್ಯ ಸರ್ಕಾರ ಮೃತ ಕುಟುಂಬಕ್ಕೆ ಈವರೆಗೂ ಪರಿಹಾರ ಕೊಟ್ಟಿಲ್ಲ ಅನ್ನೊದೇ ಒಂದು ಅಚ್ಚರಿ ಎಂದು ವ್ಯಂಗ್ಯವಾಡಿದರು.

ಬಿಜೆಪಿ ನಾಯಕರಿಂದ ಮೋಸ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಹಂಚಿಕೆ ವಿಚಾರಕ್ಕೆ ಸಂಬಂಧಿಸಿ ಸಿಡಿದೆದ್ದು, ಪಕ್ಷೇತರರಾಗಿ ಸ್ಪರ್ಧಿಸಿರುವ ಬಿಜೆಪಿ ಹಿರಿಯ ನಾಯಕ ಕೆ.ಎಸ್‌.ಈಶ್ವರಪ್ಪನವರ ರಾಷ್ಟ್ರಭಕ್ತ ಬಳಗ ಇದೀಗ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯೂ ಆಗಿರುವ ಮಾಜಿ ಶಾಸಕ ರಘುಪತಿ ಭಟ್‌ ಅವರಿಗೆ ಬೆಂಬಲ ಘೋಷಿಸಿದೆ. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ನಿವಾಸದಲ್ಲಿ ರಾಷ್ಟ್ರಭಕ್ತ ಬಳಗದ ಸಭೆಯಲ್ಲಿ ಮಂಗಳವಾರ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.

ಮುಸಲ್ಮಾನರ ತುಷ್ಟೀಕರಣಕ್ಕೆ ಮುಂದಾದ ಕಾಂಗ್ರೆಸ್‌ ಸರ್ಕಾರ: ವಿಜಯೇಂದ್ರ ಆರೋಪ

ಪಕ್ಷ ನಿಷ್ಠ ರಘುಪತಿ ಭಟ್‌ಗೆ ಮೋಸ: ಬಿಜೆಪಿ ಅಂದರೆ ಈಶ್ವರಪ್ಪ, ಈಶ್ವರಪ್ಪ ಅಂದರೆ ಪಕ್ಷ ಎನ್ನುತ್ತಿದ್ದ ಸಂದರ್ಭದಲ್ಲೇ ಪಕ್ಷೇತರನಾಗಿ ಸ್ಪರ್ಧಿಸುವ ಸಂದರ್ಭ ಎದುರಾಯಿತು. ಅದೇ ರೀತಿ ನಾನು ಸತ್ತರೆ ನನ್ನ ಎದೆ ಮೇಲೆ ಬಿಜೆಪಿ ಬಾವುಟ ಇರಬೇಕು ಎಂದು ಹೇಳುವ ರಘುಪತಿ ಭಟ್‌ ಅವರಿಗೂ ಪಕ್ಷದಲ್ಲಿ ಮೋಸವಾಯಿತು ಎಂದು ಈಶ್ವರಪ್ಪ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ನಿರಾಕರಿಸಿದಾಗ ರಾಷ್ಟ್ರೀಯ ನಾಯಕರ ಕರೆ ಬಂದಿತ್ತು. ಆದರೆ ಉಡುಪಿಯಲ್ಲಿ ರಘುಪತಿ ಭಟ್ಟರಿಗೆ ಕರೆ ಕೂಡ ಬರಲಿಲ್ಲ. ಟಿಕೆಟ್‌ ಘೋಷಣೆಗೆ ಎರಡು ದಿನ ಇರುವಾಗ ನಿನಗೇ ಟಿಕೆಟ್‌ ಎಂದು ಭಟ್‌ರಿಗೆ ಹೇಳಿದವರು ಕೊನೇ ಗಳಿಗೆಯಲ್ಲಿ ಮೋಸ ಮಾಡಿದರು. ಪಕ್ಷ ಎಂದರೆ ತಾವು ಮಾತ್ರ, ತಮ್ಮ ಕುಟುಂಬ ಮಾತ್ರ. ತಮ್ಮ ನಿರ್ಧಾರವೇ ಪಕ್ಷದ ನಿರ್ಧಾರ. ಹಿಂಬಾಲಕರಿಗೆ ಮಾತ್ರ ಎಲ್ಲ ಅವಕಾಶ ಎಂದು ಅಂದುಕೊಂಡವರಿಗೆ ಈ ಮೂಲಕ ಪಾಠ ಕಲಿಸಬೇಕೆಂದರು.

Latest Videos
Follow Us:
Download App:
  • android
  • ios