ನನ್ನ ಮೇಲಿನ ತೇಜೋವಧೆಗೆ ಮನನೊಂದು, ಪತ್ನಿ 14 ಸೈಟು ವಾಪಸ್ ಕೊಟ್ರು: ಸಿದ್ದರಾಮಯ್ಯ

ಮುಡಾ ನಿವೇಶನ ವಿವಾದದಿಂದ ಹಾಗೂ ತನ್ನ ಮೇಲಾಗುತ್ತಿದ್ದ ರಾಜಕೀಯ ತೇಜೋವಧೆಯನ್ನು ಸಹಿಸಲಾರದೇ ನನ್ನ ಪತ್ನಿ ಸೈಟು ಹಿಂದಿರುಗಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇದು ಹೇಗೆ  ತಪ್ಪೊಪ್ಪಿಕೊಂಡಂತೆ ಆಗುತ್ತದೆಯೇ ಎಂದು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Parvathi Siddaramaiah MUDA 14 sites returned then Siddaramaiah first reaction sat

ಮೈಸೂರು (ಅ.01): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ವಿವಾದದಿಂದ ಹಾಗೂ ತನ್ನ ಮೇಲಾಗುತ್ತಿದ್ದ ರಾಜಕೀಯ ತೇಜೋವಧೆಯನ್ನು ಸಹಿಸಲಾರದೇ ನನ್ನ ಪತ್ನಿ ಸೈಟು ಹಿಂದಿರುಗಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇದು ಹೇಗೆ  ತಪ್ಪೊಪ್ಪಿಕೊಂಡಂತೆ ಆಗುತ್ತದೆಯೇ ಎಂದು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಾವು 3 ಎಕರೆ 16 ಗುಂಟೆ ಜಮೀನಿಗೆ ಬದಲಿ ನಿವೇಶನ ಕೊಡಿ ಎಂದು ಮುಡಾಗೆ ಕೇಳಿದಾಗ ವಿಜಯನಗರದ 3 ಮತ್ತು 4ನೇ ಹಂತದಲ್ಲಿ ನಿವೇಶನ ಕೊಟ್ಟಿದ್ದರು. ಇದೀಗ ಅದೊಂದು ದೊಡ್ಡ ವಿವಾದ ಆಗಿದೆ. ಈ ವಿವಾದದಿಂದ ಮನನೊಂದು ನಮ್ಮ ಯಜಮಾನರಿಗೆ ತೇಜೋವಧೆ ಆಗಿತ್ತಿದೆ, ವಿರೋಧ ಪಕ್ಷದವರು ರಾಜಕೀಯ ದ್ವೇಷ ತೀರಿಸಿಕೊಳ್ಳಲು ಮುಂದಾಗಿರುವುದರಿಂದ ಮನನೊಂದು ನನ್ನ ಹೆಂಡತಿ ಸೈಟು ವಾಪಸ್ ಕೊಟ್ಟಿದ್ದಾರೆ. ಇನ್ನು ಜಾರಿ ನಿರ್ದೇಶನಾಲಯ (ಇಡಿ) ಇಸಿಐಆರ್ ದಾಖಲಿಸಿಕೊಂಡಿದೆ. ಕಾನೂನು ಪ್ರಕಾರ ಇಡಿ ಏನು ಮಾಡಬೇಕೋ ಮಾಡಲಿ. ಈ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಅನ್ವಯವಾಗಲ್ಲ. ನಮಗೆ ಸೈಟು ಹಂಚಿಕೆಯಾಗಿದೆ. ಇದರಲ್ಲಿ ನನ್ನ ಪಾತ್ರ ಏನಿದೆ.? ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮುಡಾ ಹಗರಣ: ನಾನು ಸಂಪತ್ತು ಬಯಸಿಲ್ಲ, ಈ ಸೈಟ್‌ಗಳು ತೃಣಕ್ಕೆ ಸಮ, ಸಿಎಂ ಪತ್ನಿ ಪಾರ್ವತಿ

ನಾನು ಹೆಂಗೆ ತಪ್ಪು ಒಪ್ಪಿಕೊಂಡಂಗೆ. ನನ್ನ ಹೆಂಡತಿ ಮನಸ್ಸು ನೊಂದು ವಿವಾದ ಬೇಡವೆಂದು ಸೈಟು ವಾಪಸ್ ಕೊಟ್ಟರೆ ಅದೆಂಗೆ ತಪ್ಪು ಒಪ್ಪಿಕೊಂಡಂತೆ ಆಗುತ್ತದೆ. ವಿಪಕ್ಷದವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಅನಗತ್ಯವಾಗಿ ರಾಜೀನಾಮೆ ಕೇಳುತ್ತಿದ್ದಾರೆ. ಆದರೆ, ನಾನು ತಪ್ಪೇ ಮಾಡಿಲ್ಲ ಎಂದಾಗ ಏಕೆ ರಾಜೀನಾಮೆ ಕೊಡಬೇಕು. ಯಡಿಯೂರಪ್ಪ ಅವರು ಡಿನೋಟಿಫೈ ಮಾಡಿದ್ದರು. ನಾನೇನು ಡಿನೋಟಿಫೈ ಮಾಡಿದ್ದೇನಾ? ನನ್ನದೇನಾದರೂ ಆದೇಶ, ಪತ್ರ ವ್ಯವಹಾರ, ಅಕ್ರಮ ಹಣ ವರ್ಗಾವಣೆ ಏನಾದರೂ ಇದೆನಾ? ಯಡಿಯೂರಪ್ಪ ಹಾಗೂ ನನ್ನ ಪ್ರಕರಣಗಳು ತುಂಬಾ ವ್ಯತ್ಯಾಸಗಳಿವೆ.

Latest Videos
Follow Us:
Download App:
  • android
  • ios