ಬೆಂಗಳೂರು, (ಮಾ.01): ಪಂಚಮಸಾಲಿ 2A ಮೀಸಲಾತಿ ಪಾದಯಾತ್ರೆ ಸಮಾವೇಶದಲ್ಲಿ ಗುಡುಗಿ ಬಳಿಕ ದೆಹಲಿಗೆ ತೆರಳಿ, ಅಲ್ಲಿಂದ ಅಜ್ಞಾತ ಸ್ಥಳದಲ್ಲಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತ್ಯಕ್ಷರಾಗಿದ್ದಾರೆ.

ಹೌದು.. ಪಂಚಮಸಾಲಿಗೆ 2ಎ ಮೀಸಲಾತಿ ಕೋರಿ ಫ್ರೀಡಂ ಪಾರ್ಕ್​ನಲ್ಲಿ ನಡೆಯುತ್ತಿರುವ ಸತ್ಯಾಗ್ರಹದ ಸ್ಥಳದಲ್ಲಿ ಇಂದು (ಸೋಮವಾರ) ಮತ್ತೆ ಬಸನಗೌಡ ಪಾಟೀಲ್ ಯತ್ನಾಳ್ ಕಾಣಿಸಿಕೊಂಡರು.

ಈ ವೇಳೆ ಮಾತನಾಡಿದ ಹಾಲು ಮತದವರೂ ಹಿಂದೂಗಳೇ ಅಲ್ವೇ..? ವಾಲ್ಮೀಕಿ ಸಮುದಾಯದವರು ಹಿಂದೂಗಳೇ ಅಲ್ವೇ..? ಎಲ್ಲರೂ ಹಿಂದೂಗಳೇ, ಅಲ್ಲಿ ಬಡವರು ಇಲ್ವೇ ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ. ನಾಳೆ ನೋಡಿ ಟಿ.ಆರ್.ಪಿ ಸುದ್ದಿ ಕೊಡ್ತೇನೆ.. ನಾನು ಕೇಂದ್ರ ಮಂತ್ರಿ ಆಗಿದ್ದಾಗ ಯಾರ್ಯಾರು ಕಾಲು ಹಿಡಿದಿದ್ರು ಏನೇನು ಮಾಡಿದ್ರು ಅಂತ ಎಲ್ಲವನ್ನೂ ಹೇಳುತ್ತೇನೆ ಎಂದು ಇದೇ ವೇಳೆ ಯತ್ನಾಳ್ ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದರು.

ಪಂಚಮಸಾಲಿ 2A ಮೀಸಲಾತಿ ಹೋರಾಟ: ಮುಂದಿನ ನಡೆ ಬಗ್ಗೆ ಸಭೆಯಲ್ಲಿ ಮಹತ್ವದ ನಿರ್ಧಾರ

ನನ್ನ ರಾಜಕೀಯ ಜೀವನ ಮುಗಿಸೋಕೆ ಯಾರಿಂದಲೂ ಆಗಲ್ಲ, ಈ ಯತ್ನಾಳ್ ಗೌಡ ಹೆದರುವ ಮಗನಲ್ಲ. ಕಡೆಯವರೆಗೂ ನಾನು ಈ ಹೋರಾಟದಲ್ಲಿ ಇರುತ್ತೇನೆ. ಅದ್ಹೇಗೆ ನನ್ನ ರಾಜಕೀಯ ಜೀವನ ಮುಗಿಸ್ತೀರಿ ನೋಡ್ತೀನಿ. ನಾವು ಮಾರ್ಚ್ 4 ರವರೆಗೆ ನೋಡ್ತೇವೆ ಎಂದರು.

ನಾನು ಸದನದಲ್ಲಿ ಪ್ರಸ್ತಾಪ ಮಾಡುವ ಮಗನೇ.. ಸಿಎಂ ಬೇಕಾದ್ರೆ ಕ್ಷಮೆಯಾಚಿಸಲಿ. 2ಎ ಮಾಡೋಕೆ ಬರಲ್ಲ ಅಂತ ಹೇಳಿಬಿಡ್ಲಿ. ಕೊಡೋಕಾದ್ರೆ ಕೊಡ್ತೀನಿ ಅಂತ ಹೇಳ್ರಿ ಯಡಿಯೂರಪ್ಪನವರೇ.. ನಾವೇನು ನಿಮ್ಮ ವಿರೋಧಿಗಳಲ್ಲ. ಸುಮ್ಮನೆ ಕೊಡ್ತೀವಿ ಅಂತ ಯಾಕೆ ಯಾಮಾರಿಸ್ತೀರಿ..? ಎಂದು ಕೂಡ ಪ್ರಶ್ನಿಸಿದರು.