Asianet Suvarna News Asianet Suvarna News

Panchamasali: ಯತ್ನಾಳರ ಪಿಂಪ್‌ ಸಚಿವ ಟೀಕೆ: ಮನನೊಂದು ಭಾವುಕರಾದ ಮುರುಗೇಶ್ ನಿರಾಣಿ

ಶಾಸಕ ಯತ್ನಾಳ ಅಸಂವಿಧಾನಿಕ ಮಾತುಗಳನ್ನು (ಪಿಂಪ್‌ ಸಚಿವ) ಆಡುತ್ತಾರೆ. ಸಿದ್ದೇಶ್ವರ ಸ್ವಾಮೀಜಿ ಅವರ ಸನ್ನಿಧಿಯಲ್ಲಿ ಬೆಳೆದವರು ನಾವು. ಸ್ವಾಮೀಜಿ ಅವರ ಗುಣಗಳ ಶೇ.0.5 ರಷ್ಟು ನಾವು ಅನುಕರಣೆ ಮಾಡಿಕೊಂಡರೆ ಸಾಕು ಎಂದು ಸಚಿವ ಮುರುಗೇಶ್‌  ನಿರಾಣಿ ಅವರು ಭಾವುಕರಾದರು.

Panchamasali MLA Yatnal Criticism Pimp Minister Heartfelt Murugesh Nirani sat
Author
First Published Jan 14, 2023, 6:04 PM IST

ದಾವಣಗೆರೆ (ಜ.14): ಬಿಜೆಪಿ ಸಂಸ್ಕೃತಿ ಹೊಂದಿರೋ ಪಕ್ಷ, ನಮ್ಮ ಸಮುದಾಯದವೂ ಸಂಸ್ಕೃತಿ ಹೊಂದಿದೆ. ಶಾಸಕ ಯತ್ನಾಳ ಅಸಂವಿಧಾನಿಕ ಮಾತುಗಳನ್ನು (ಪಿಂಪ್‌ ಸಚಿವ) ಆಡುತ್ತಾರೆ. ಸಿದ್ದೇಶ್ವರ ಸ್ವಾಮೀಜಿ ಅವರ ಸನ್ನಿಧಿಯಲ್ಲಿ ಬೆಳೆದವರು ನಾವು. ಸ್ವಾಮೀಜಿ ಅವರ ಗುಣಗಳ ಶೇ.0.5 ರಷ್ಟು ನಾವು ಅನುಕರಣೆ ಮಾಡಿಕೊಂಡರೆ ಸಾಕು ಎಂದು ಸಚಿವ ಮುರುಗೇಶ್‌  ನಿರಾಣಿ ಅವರು ಭಾವುಕರಾದರು.

ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಮೀಸಲಾತಿ ವಿಚಾರವಾಗಿ ಮಾತನಾಡುತ್ತಾ, ಮುರುಗೇಶ್‌ ನಿರಾಣಿ ಅವರ ಬಗ್ಗೆ ಪಿಂಪ್‌ ಸಚಿವ ಎಂದು ಹೇಳಿದ್ದರು. ಈ ಹೇಳಿಕೆಯ ಬಗ್ಗೆ ದಾವಣಗೆರೆ ಜಿಎಂಐಟಿ ಹೆಲಿಪ್ಯಾಡ್ ನಲ್ಲಿ ಮಾಧ್ಯಮಗಳ ಮುಂದೆ ಮಾತನಾಡುವ ವೇಲೆ ಸಚಿವ ಮುರುಗೇಶ್‌ ನಿರಾಣಿ ಅವರು ಭಾವುಕರಾದರು. ಈ ಹಿಂದೆ ಕೆಲವರು ಜೆಡಿಎಸ್ ಗೆ ಹೋಗಿ ಮುಸ್ಲಿಂ ಟೋಪಿ ಹಾಕಿದ್ದು ಎಲ್ಲರಿಗೂ ಗೊತ್ತಿಗೆ. ಡೋಂಗಿ ರಾಜಕಾರಣ ಮಾಡುತ್ತಿದ್ದಾರೆ. ನಾವು ಕೂಡಾ  ಘಟಪ್ರಭ, ಮಲಪ್ರಭಾ ನದಿಯ ನೀರು ಕುಡಿದೇ ಬೆಳದಿದ್ದೇವೆ. ನಮಗೂ ಮಾತನಾಡುವುದಕ್ಕೆ ಬರುತ್ತದೆ. ಸುಮ್ಮನೆ ಇದ್ದೀವಿ ಅಂದರೆ ದೌರ್ಬಲ್ಯ ಅಲ್ಲ. ಯತ್ನಾಳ್ ಏನೂ ಸತ್ಯ ಹರಿಶ್ಚಂದ್ರ ಅಲ್ಲ. ದೊಡ್ಡ ಸಮಾಜದಲ್ಲಿ ಹುಟ್ಟಿದ್ದೀರಿ ಗೌರವದಿಂದ ಮಾತಾಡಿ ಎಂದು ಕಿಡಿಕಾರಿದರು.

 

Panchamasali: ಅವನು ಅಪ್ಪನಿಗೆ ಹುಟ್ಟಿಲ್ಲ- ಅವನೊಬ್ಬ ಪಿಂಪ್‌: ಹೆಸರೇಳದೇ ಯತ್ನಾಳ್‌ ವಿರುದ್ಧ ಸಚಿವ ನಿರಾಣಿ ಆರೋಪ

ದೀಪ ಆರುವಾಗ ಜೋರಾಗಿ ಉರಿಯುತ್ತದೆ: ಇನ್ನು ದೀಪ ಆರುವಾಗ ಗಾಳಿ ಜೋರಾಗಿ ಇರತ್ತದೆ. ಯತ್ನಾಳ ಪರಿಸ್ಥಿತಿ ಕೂಡ ಹಾಗೆ ಆಗಿದೆ. ಯತ್ನಾಳ್ ಗೆ ಪಕ್ಷದಲ್ಲಿ ಇರೋದು ಇಷ್ಟ ಇಲ್ಲದಿದ್ದರೆ ಬಿಟ್ಟು ಹೋಗಲಿ. ಯತ್ನಾಳ್ ಯಾರಿಗೆ ಬಿಟ್ಟಿದ್ದಾರೆ. ಎಲ್ಲರ ಬಗ್ಗೆ ಹಗರುವಾಗಿ ಮಾತನಾಡುತ್ತಲೇ ಇದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮುಖಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಜಗದೀಶ್‌ ಶೆಟ್ಟರ್, ಸಚಿವ ಸೋಮಣ್ಣ ಹೀಗೆ ಎಲ್ಲರ ಮೇಲೂ ಮಾತಾಡಿದ್ದಾರೆ. ನಂತರ ನ್ಯಾಯಾಲಯಕ್ಕೆ ಹೋಗಿ ಕೈಕಾಲು ಹಿಡಿದು ಬಂದಿದ್ದಾರೆ. ಜಯಮೃತ್ಯುಂಜಯ ಸ್ವಾಮೀಜಿ ಅವರು, ಯತ್ನಾಳ್‌ ವಿರುದ್ಧ ಹೋರಾಟ ಮಾಡೋದು ಬಿಟ್ಟು ನಮ್ಮ ವಿರುದ್ಧ ಮಾಡ್ತಿದ್ದಾರೆ. ನಾನಾಗಿಯೇ ಯತ್ನಾಳ್ ವಿರುದ್ದ ವಾಗ್ದಾಳಿ ಮಾಡಿಲ್ಲ. ಅವರು ನೀಡಿದ ಹೇಳಿಕೆ ಉತ್ತರ ಕೊಟ್ಟಿದ್ದೇನೆ. ಅವರನ್ನ ಸಹಿಸಿಕೊಂಡಿದ್ದು ಆಗಿದೆ. ಈಗ ನಿರ್ಧಾರ ತೆಗೆದುಕೊಳ್ಳುತ್ತಿದ್ದೆವೆ ಎಂದು ಸವಾಲು ಹಾಕಿದರು.

 

Panchamasali ಸಮಾಜಕ್ಕೆ ಅನ್ಯಾಯ ಮಾಡಲ್ಲ: ಮೀಸಲಾತಿ ಕಲ್ಪಿಸುವುದಾಗಿ ಸಿಎಂ ಬೊಮ್ಮಾಯಿ ಭರವಸೆ

ಸ್ವಾಮೀಜಿ ರಾಜಕೀಯ ಮಾಡುತ್ತಿದ್ದಾರೆ: ರಾಜ್ಯದಲ್ಲಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ವಿಚಾರವಾಗಿ ಜಯಮೃತ್ಯುಂಜ ಸ್ವಾಮೀಜಿ  ರಾಜಕೀಯ ಮಾಡುತ್ತಿದ್ದಾರೆ. ಇದರಲ್ಲಿ ಎರಡು ಮಾತಿಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗ ಅಂದಿನ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜ 2ಎ ಮೀಸಲಾತಿ  ನಿರಾಕರಿಸಿದ್ದರು. ಆಗ ಈ ಸ್ವಾಮೀಜಿ ಏನು ಮಾಡುತ್ತಿದ್ದರು.? ಈಗ ನಾವು ಹಂತ ಹಂತವಾಗಿ ಮೀಸಲಾತಿ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಿದೆ. ಆದರೆ ಸ್ವಾಮೀಜಿ ರಾಜಕೀಯ ಮಾಡುತ್ತಿದ್ದಾರೆ. ರಾಜಕೀಯ ನಿರ್ಧಾರಗಳನ್ನು ತಿಳಿದುಕೊಂಡು ಸ್ವಾಮೀಜಿ ಅವರು ಹೋರಾಟ ಮಾಡಬೇಕು ಎಂದು ತಿಳಿಸಿದರು.

Follow Us:
Download App:
  • android
  • ios