Asianet Suvarna News Asianet Suvarna News

ಉತ್ತರಕನ್ನಡ: ಭಾರತ್ ಜೋಡೋ ಯಾತ್ರೆಯ ವಾರ್ಷಿಕೋತ್ಸವ, ದೇಶಪಾಂಡೆ ನೇತೃತ್ವದಲ್ಲಿ ಪಾದಯಾತ್ರೆ

ಹಳಿಯಾಳದ ತೇರಗಾಂವ ಗ್ರಾಮದಿಂದ ಪಾದಯಾತ್ರೆಗೆ ಚಾಲನೆ ದೊರಕಿದ್ದು, ಹವಗಿ ಗ್ರಾಮದ ಮೂಲಕ ಸಾಗಿ, ವನಶ್ರೀ ವೃತ್ತ ರಸ್ತೆಯಲ್ಲಿ ಸಂಚರಿಸಿ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಯಾತ್ರೆ ಸಮಾಪನಗೊಂಡಿತು. ಈ ಪಾದಯಾತ್ರೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ್, ಇತರ ಕಾಂಗ್ರೆಸ್ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.

Padayatra led by RV Deshpande on the day of Bharat Jodo Anniversary grg
Author
First Published Sep 8, 2023, 10:38 PM IST

ಉತ್ತರಕನ್ನಡ(ಸೆ.08): ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ವಾರ್ಷಿಕೋತ್ಸವದ ಅಂಗವಾಗಿ ಹಳಿಯಾಳ ಶಾಸಕ ಆರ್. ವಿ. ದೇಶಪಾಂಡೆ ನೇತೃತ್ವದಲ್ಲಿ ಇಂದು(ಶುಕ್ರವಾರ) ಸಂಜೆ ಹಳಿಯಾಳದ ವಿವಿಧೆಡೆ ಪಾದಯಾತ್ರೆ ನಡೆಯಿತು. 

ಹಳಿಯಾಳದ ತೇರಗಾಂವ ಗ್ರಾಮದಿಂದ ಪಾದಯಾತ್ರೆಗೆ ಚಾಲನೆ ದೊರಕಿದ್ದು, ಹವಗಿ ಗ್ರಾಮದ ಮೂಲಕ ಸಾಗಿ, ವನಶ್ರೀ ವೃತ್ತ ರಸ್ತೆಯಲ್ಲಿ ಸಂಚರಿಸಿ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಯಾತ್ರೆ ಸಮಾಪನಗೊಂಡಿತು. ಈ ಪಾದಯಾತ್ರೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ್, ಇತರ ಕಾಂಗ್ರೆಸ್ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.

ವನ್ಯಪ್ರಾಣಿಗಳ ಮೇಲೂ ಬರದ ನೆರಳು: ನೀರು ಅರಸಿ ನಾಡಿಗೆ ಬರುವ ಕಾಡುಪ್ರಾಣಿಗಳು

ನಂತರ ತನ್ನ ಕಚೇರಿಯ ಮುಂಭಾಗದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಶಾಸಕ ಆರ್. ವಿ. ದೇಶಪಾಂಡೆ, ಬಿಜೆಪಿಯ ದ್ವೇಷ ರಾಜಕಾರಣದ ವಿರುದ್ಧ ರಾಹುಲ್ ಗಾಂಧಿ ನಡೆಸಿದ ಐತಿಹಾಸಿಕ ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ ದೊಡ್ಡ ಬದಲಾವಣೆ ತಂದಿದೆ. 4,470ಕಿ.ಮೀ. ಹೆಚ್ಚು ದೂರ ಪಾದಯಾತ್ರೆ ಮಾಡುವ ಮೂಲ‌ಕ ರಾಹುಲ್ ಗಾಂಧಿ ದಾಖಲೆ ನಿರ್ಮಾಣ ಮಾಡಿದ್ದಾರೆ. ಅವರ ಪ್ರಯತ್ನದ ಫಲವಾಗಿ ಬಿಜೆಪಿಯ ಆಪರೇಷನ್‌ ಕಮಲಕ್ಕೆ ಬದಲಾಗಿ, ಮತದಾರರು ಕಾಂಗ್ರೆಸ್‌ನೊಂದಿಗೆ ಕೈಜೋಡಿಸುವಂತೆ ಮಾಡಿದೆ ಎಂದು ಹೇಳಿದರು.

Follow Us:
Download App:
  • android
  • ios