* ಹೊಳಲ್ಕೆರೆ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ ಸ್ಪೋಟ.*‌ ಶಾಸಕ ಚಂದ್ರಪ್ಪ ವಿರುದ್ದ ಮತದಾನ ಮಾಡಲು ಮುಂದಾದ ಮೂಲ‌ ಬಿಜೆಪಿಗರು.* ಬಿಜೆಪಿ ಟಿಕೆಟ್ ಸಿಗದಿದ್ದಕ್ಕೆ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ ಜಯಸಿಂಹ.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಏ.16): ಬಿಎಸ್ ಯಡಿಯೂರಪ್ಪ ಆಪ್ತ ಹಾಗೂ ಬಿಜೆಪಿ ಹಿರಿಯ ಶಾಸಕ ಎಂ. ಚಂದ್ರಪ್ಪ ವಿರುದ್ಧ ಹೊಳಲ್ಕೆರೆ ಕ್ಷೇತ್ರದಲ್ಲಿ ಅಸಮಧಾನ ಸ್ಪೋಟಗೊಂಡಿದೆ. ಶಾಸಕ ಚಂದ್ರಪ್ಪ ಅವರ ದೌರ್ಜನ್ಯದಿಂದ ಆಕ್ರೋಶಗೊಂಡಿರುವ ಮೂಲ ಬಿಜೆಪಿಗರು ಚಂದ್ರಪ್ಪನ ವಿರುದ್ಧ ಮತದಾನಕ್ಕೆ ಅಭಿಯಾನ ಆರಂಭಿಸಿದ್ದಾರೆ. 

ಬಿಜೆಪಿ ಶಾಸಕ ಚಂದ್ರಪ್ಪ ವಿರುದ್ಧ ಭುಗಿಲೆದ್ದ ಭಿನ್ನಮತ. ಲಾಂಬಾಣಿ ತಾಂಡಗಳಲ್ಲಿ ಪ್ರಚಾರ ಕಾರ್ಯ ಆರಂಬಿಸಿದ ಪಕ್ಷೇತರ ಅಭ್ಯರ್ಥಿ ಜಯಸಿಂಹ ಲೋಕನಾಥ್. ಈ ದೃಶ್ಯಗಳು ಕಂಡುಬಂದಿದ್ದು, ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಕ್ಷೇತ್ರದಲ್ಲಿ. ಹೌದು, ಚುನಾವಣೆ ಬಂದಾಗ ಅವರವರ ಪಕ್ಷದ ಅಭ್ಯರ್ಥಿ ಪರ ಒಟ್ಟಾಗಿ ಮತ ಕೇಳೋದು ಸಹಜ‌. ಆದ್ರೆ ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ ವಿರುದ್ಧ ಬಿಜೆಪಿ ಕಾರ್ಯಕರ್ತರು ಹಾಗು ಮುಖಂಡರಿಂದಲೇ ಬಿನ್ನಮತ ಭುಗುಲೆದ್ದಿದೆ.

ನಿಮಗೆಲ್ಲಾ ಮಾನ, ಮರ್ಯಾದೆ, ಸ್ವಾಭಿಮಾನ ಇದೆಯಾ? ಶೆಟ್ಟರ್‌, ಸವದಿ ವಿರುದ್ಧ ಯತ್ನಾಳ್ ಕೆಂಡ

ಸತತ ಮೂರು ಬಾರಿ ಶಾಸಕರಾಗಿರುವ ಚಂದ್ರಪ್ಪ ಒಮ್ಮೆಯೂ ಬಿಜೆಪಿ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಅಭಿವೃದ್ಧಿ ನೆಪದಲ್ಲಿ ಸರ್ಕಾರದ ಹಣವನ್ನು ಲೂಟಿ ಹೊಡೆದಿದ್ದಾರೆ. ಮೂಲ ಬಿಜೆಪಿಯವರನ್ನು‌ ಹೊರಗಿಟ್ಟು, ಅವರ ಬೆಂಬಲಿಗರಿಗೆ ಎಲ್ಲಾ ಅವಕಾಶ ಕಲ್ಪಿಸಿದ್ದಾರೆ.ಅಲ್ದೇ ಬಿಜೆಪಿ ಪಕ್ಷದ ಸರ್ವೆ ವೇಳೆಯೂ ಅವರ ಆಪ್ತರಿಂದ ಮತ ಹಾಕಿಸಿ ಟಿಕೇಟ್ ಗಿಟ್ಟಿಸಿದ್ದಾರೆಂದು ಸ್ವಪಕ್ಷಿಯರೇ ಆರೋಪಿಸಿದ್ದಾರೆ. ಹೀಗಾಗಿ ಹೊಳ‌ಲ್ಕೆರೆ‌ಯ ಒಂಟಿ ಕಲ್ಮಠದಲ್ಲಿ ಪುರಸಭೆ ಸದಸ್ಯರಾದ ಜಯಸಿಂಹ‌ ಖೊಟ್ರೋತ್‌, ವಿಜಯಸಿಂಹ, ಮಾಜಿ ಜಿಪಂ ಅಧ್ಯಕ್ಷ ಶಿವಕುಮಾರ್, ಮಾಜಿ ಬಿಜೆಪಿ‌ ಅಧ್ಯಕ್ಷ ರಂಗಸ್ವಾಮಿ ನೇತೃತ್ವದಲ್ಲಿ ಸಭೆ ಸೇರಿದ್ದ ಬಿಜೆಪಿ ಮುಖಂಡರು ಚಂದ್ರಪ್ಪ ವಿರುದ್ಧ ಮತದಾನಕ್ಕೆ ಅಭಿಯಾನ ಆರಂಭಿಸಿದ್ದಾರೆ. ಚಂದ್ರಪ್ಪ‌ ಸೋಲಿಸಲು ಮೂಲ ಬಿಜೆಪಿ ಮುಖಂಡರೇ ಒಗ್ಗಟ್ಟಾಗಿದ್ದಾರೆ. ಇದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ.

ಬಿಜೆಪಿಗೆ ಬಂಡಾಯ ಅಭ್ಯರ್ಥಿ ಜಯಸಿಂಹ ಭಯ: ಇನ್ನು ಬಿಜೆಪಿಯಲ್ಲು ಶಾಸಕ ಚಂದ್ರಪ್ಪ ಸೇರಿದಂತೆ ಹಲವರು ಆಕಾಂಕ್ಷಿಗಳಿದ್ದರು. ಆದ್ರೆ ಬಿಎಸ್ ವೈ ಕೃಪಾಕಟಾಕ್ಷದಿಂದ ಟಿಕೇಟ್ ಪಡೆದಿರುವ ಚಂದ್ರಪ್ಪ ಗೆಲುವು ಅಷ್ಟು ಸುಲಭವಾಗಿಲ್ಲ. ಚಂದ್ರಪ್ಪನ ಬದ್ದ ವೈರಿ ಹಚ್.ಆಂಜನೇಯ ಕಾಂಗ್ರೆಸ್ ನಿಂದ ಪ್ರತಿಸ್ಪರ್ಧಿಯಾಗಿದ್ದು, ಬಿಜೆಪಿ ಪ್ರಬಲ ಆಕಾಂಕ್ಷಿಗಳಿಂದಲೂ ತೀವ್ರ ವಿರೋಧವಿದೆ. ಅಲ್ಲದೇ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಮಾಜಿ ಟಿಹೆಚ್ ಓ ಜಯಸಿಂಹ ಲೋಕನಾಥ್ ಕಣದಲ್ಲಿದ್ದಾರೆ., ಈಗಾಗಲೇ ಹಾಲಿ ಶಾಸಕ ಚಂದ್ರಪ್ಪ ಹಾಗು ಮಾಜಿ ಸಚಿವ ಆಂಜನೇಯರ‌ ಆಡಳಿತ‌ ನೋಡಿರುವ ಮತದಾರರು, ಈ ಬಾರಿ ಹೊಸಮುಖ ಹಾಗು ಪಕ್ಷೇತರ ಅಭ್ಯರ್ಥಿಯಾಗಿರುವ ಜಯಸಿಂಹಗೆ ಹೊಳಲ್ಕೆರೆ ಕ್ಷೇತ್ರದಲ್ಲಿ ಮಣೆ ಹಾಕಿದರೂ ಅಚ್ಚರಿ ಪಡುವಂತಿಲ್ಲ‌ ಎಂಬ ವಾತಾವರಣವಿದೆ.

ಸವದಿ ಹೆಣವನ್ನು ಸ್ಮಶಾನಕ್ಕೆ ಕಳಿಸಿ, ಬಿಜೆಪಿ ಕಚೇರಿ ಮುಂದೆ ಯಾಕೆ ತರ್ತೀರಿ?: ಯತ್ನಾಳ್

ಒಟ್ಟಾರೆ ಹೊಳಲ್ಕೆರೆ ಬಿಜೆಪಿ‌ ಅಭ್ಯರ್ಥಿ ಚಂದ್ರಪ್ಪ ವಿರುದ್ಧ ಅಸಮಧಾನ ಸ್ಪೋಟಗೊಂಡಿದೆ. ಜಾತ್ಯಾತೀತವಾಗಿ ಚಂದ್ರಪ್ಪ ಸೋಲಿಸಲು ವಿರೋಧಿ‌ಪಾರ್ಟಿಗೆ ಮತ‌ಚಲಾಯಿಸುವಂತೆ ಬಿಜೆಪಿ ಮುಖಂಡರೇ‌ ಅಭಿಯಾನ ಆರಂಬಿಸಿದ್ದಾರೆ. ಇದು ಕಾಂಗ್ರೆಸ್ ಗೆ ವರದಾನಾಗಲಿದೆಯೊ ಅಥವಾ ಪಕ್ಷೇತರ ಅಭ್ಯರ್ಥಿಗೆ ಲಾಭವಾಗಲಿದೆಯೋ ಅನ್ನೋದನ್ನ ಕಾದು ನೋಡಬೇಕಿದೆ.

ಏಪ್ರಿಲ್‌ 13 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ಏಪ್ರಿಲ್‌ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್‌ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.