ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮನೆಯಲ್ಲಿ ಅಧಿಕೃತಗವಾಗಿ ಕಾಂಗ್ರೆಸ್‌ ಸೇರ್ಪಡೆಗೊಂಡ ಬಾಬುರಾವ್ ಚಿಂಚನಸೂರು ಅವರು, ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತೊಡೆ ತಟ್ಟಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ.

ಬೆಂಗಳೂರು (ಮಾ.22): ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬಾಬುರಾವ್‌ ಚಿಂಚನಸುರು ಅವರು ಮೊದಲ ಬಾರಿಗೆ ಬಹಿರಂಗವಾಗಿ ಕೆಪಿಸಿಸಿ ಅಧ್ಯಕ್ಷ ಡಿ,.ಕೆ. ಶಿವಕುಮಾರ್‌ ಅವರ ಮನೆಯಲ್ಲಿ ಪ್ರತ್ಯಕ್ಷವಾಗಿ ಚರ್ಚೆ ನಡೆದಿದ್ದಾರೆ. ಈ ವೇಳೆ ಅಧಿಕೃತವಾಗಿ ಕಾಂಗ್ರೆಸ್‌ ಸೇರ್ಪಡೆಗೊಂಡ ಅವರು ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತೊಡೆ ತಟ್ಟೊರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಮುಂದುವರೆದು ನಮ್ಮದು ಮತ್ತು ಖರ್ಗೆ ಅವರದು ತಂದೆ- ಮಗನ ನಡುವಿನ ಜಗಳದಂತೆ ಎಂದು ಚಿಂಚನಸೂರ ತಿಳಿಸಿದ್ದಾರೆ.

ಡಿ.ಕೆ. ಶಿವಕುಮಾರ್‌ ಮನೆಯಲ್ಲಿ ಇಂದು ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷದ ಸದಸ್ಯತ್ವವನ್ನು ಪಡೆದುಕೊಂಡರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಖರ್ಗೆ ಬೆಳೆದಿದ್ದಾರೆ. ಅವರು ದೇಶದಲ್ಲಿ ಹೆಸರು ಮಾಡಿದ್ದಾರೆ. ಅವರನ್ನು ಹಿನ್ನಡೆ ಮಾಡಲು ಬಿಜೆಪಿ ಪ್ರಯತ್ನ ಮಾಡಿದ್ದರು. ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆಯಲಿದೆ ಎಂಬ ಅಭಿಪ್ರಾಯವನ್ನು ತಿಳಿಸಿದರು.

ಖರ್ಗೆ ಕುಟುಂಬ ಸೋಲಿಸೋದಾಗಿ ತೊಡೆ ತಟ್ಟಿದ್ದ ಚಿಂಚನಸೂರು ಮತ್ತೆ ಕಾಂಗ್ರೆಸ್ ಕದ ತಟ್ಟಿದ್ರಾ?!

ಖರ್ಗೆ ಅವರೊಂದಿಗೆ ಭಿನ್ನಾಭಿಪ್ರಾಯ ಇದ್ದುದು ನಿಜ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಇದ್ದ ಭಿನ್ನಾಭಿಪ್ರಾಯ ಇದ್ದುದು ನಿಜ. ನಮ್ಮದು ಮತ್ತು ಖರ್ಗೆ ನಡುವೆ ತಂದೆ ಮಗನ ಜಗಳವಾಗಿದೆ. ತಂದೆ ಮಕ್ಕಳ ಭಿನ್ನಾಭಿಪ್ರಾಯ ಈಗ ಮುಗಿದ ಅಧ್ಯಾಯವಾಗಿದೆ. ಖರ್ಗೆಯವರು ತಂದೆ ಸಮಾನರು. ಹಿಂದೆ ನಾನು ಮಲ್ಲಿಕಾರ್ಜುನ ಖರ್ಗೆ ವಿಚಾರದಲ್ಲಿ ತೊಡೆ ತಟ್ಟಿದ ವಿಚಾರವನ್ನೆಲ್ಲ ಮುನ್ನೆಲೆಗೆ ತರುವ ಅಗತ್ಯವಿಲ್ಲ, ಅದೆಲ್ಲಾ ಮುಗಿದ ಅಧ್ಯಾಯ. ಇನ್ನು ಮಕ್ಕಳು ಮನೆಯಲ್ಲಿ ಜಗಳ ಮಾಡಿ‌ಕೊಂಡು ಹೋದರೆ, ವಾಪಸ್‌ ಮೆನೆಗೆ ಬರೋದೆ ಇಲ್ವಾ.? ಮಾತು ಬೆಳ್ಳಿ - ಮೌನ ಬಂಗಾರ ಎಂದು ಹೇಳುತ್ತಾರೆ. ಆದ್ದರಿಂದ ಮಲ್ಲಿಕಾರ್ಜುನ ಖರ್ಗೆ ಅವರು ಏನೂ ಹೇಳಿಲ್ಲ ಎಂದು ತಿಳಿಸಿದರು.

ನಮ್ಮ ನಾಯಕರಾಗಿ ಚಿಂಚನಸೂರು ಮುಂದುವರಿಕೆ: ನಂತರ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, ರಾಜ್ಯದಲ್ಲಿ ನಾವು ನುಡಿದಂತೆ ನಡೆಯುವ ಭರವಸೆಯನ್ನು ರಾಜ್ಯದ ಜನತೆಗೆ ಕೊಟ್ಟಿದ್ದೇವೆ. ನಮ್ಮ ಕಾರ್ಯಕ್ಕೆ ನಿರೀಕ್ಷೆಗೂ ಮೀರಿ ಬೆಂಬಲ ಲಭ್ಯವಾಗುತ್ತಿದೆ. ಈಗಾಘಲೇ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಕಾಂಗ್ರೆಸ್‌ಗೆ ಸೇರ್ಪಡೆ ಆಗಿದ್ದಾರೆ. ಈಗ ಮತ್ತೊರ್ವ ಪರಿಷತ್ ಸದಸ್ಯರಾಗಿದ್ದ ಬಾಬುರಾವ್ ಚಿಂಚನಸೂರು ಕಾಂಗ್ರೆಸ್ ಸೇರಿದ್ದಾರೆ ಎಂದು ಮಾಹಿತಿ ನೀಡಿದರು.

ಚಂಚಲ ಮನಸ್ಸಿನ ಚಿಂಚನಸೂರು ಬಿಜೆಪಿಗೆ ರಾಜೀನಾಮೆ: ಇಂದು ಕಾಂಗ್ರೆಸ್‌ಗೆ ವಾಪಸ್‌

ಚಿಂಚನಸೂರು ಶಕ್ತಿ ನೋಡಿಯೇ ಬಿಜೆಪಿ ಕರೆದುಕೊಂಡಿತ್ತು: ರಾಜ್ಯ ರಾಜಕೀಯ ಚೀವನದಲ್ಲಿ ಬಾಬುರಾವ್ ಚಿಂಚನಸೂರು ಅವರು ಬಹಳಷ್ಟು ವರ್ಷಗಳ ಕಾಲ ಮಲ್ಲಿಕಾರ್ಜುನ ಖರ್ಗೆ ಜೊತೆಗೆ ಇದ್ದವರು. ಇವರ ಶಕ್ತಿಯನ್ನು ಗಮನಿಸಿಯೇ ಬಿಜೆಪಿಯವರು ಕರೆದುಕೊಂಡು ಹೋಗಿದ್ದರು. ಹೊಸ ವರ್ಷ ಆರಂಭ ಆಗುವ ಹಿನ್ನೆಲೆಯಲ್ಲಿ ಬಾಬುರಾವ್ ಚಿಂಚನಸೂರು ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ನಮ್ಮ ನಾಯಕರಾಗಿ ಅಧಿಕೃತವಾಗಿ ಪಕ್ಷದಲ್ಲಿ ಮತ್ತೇ ಮುಂದುವರಿಯಲಿದ್ದಾರೆ ಎಂದು ಡಿ.ಕೆ. ಶಿವಕುಮಾರ್‌ ಮಾಹಿತಿ ನೀಡಿದರು.