ಬೆಂಗಳೂರು[ಫೆ.05]: ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗಲೇ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಶಾಸಕ ಹಾಗೂ ಅವರ ಬೆಂಬಲಿಗರಿಗೆ ಆಘಾತಕಾರಿ ಸುದ್ದಿ ಬಂದೆರಗಿದೆ. ಪ್ರಮಾಣವಚನ ಸ್ವೀಕರಿಸಿ ತಾವು ಸಚಿವರಾಗುವ ಕನಸು ಕಂಡಿದ್ದ ಶಾಸಕರ ಮನವೊಲಿಸಲು ಸಿಎಂ ಯಡಿಯೂರಪ್ಪ ಮುಂದಾಗಿದ್ದು, ಕೇವಲ 10 ಹೊಸ ಶಾಸಕರಿಗೆ ಮಂತ್ರಿ ಮಂಡಲದಲ್ಲಿ ಸ್ಥಾನ ಸಿಗುವ ಸಾಧ್ಯತೆಗಳಿವೆ.

ಸಂಪುಟ ಪುನರಚನೆಯೋ, ವಿಸ್ತರಣೆಯೋ ? ಎಲ್ಲಾ ಗೊಂದಲಗಳಿಗೆ BSY ತೆರೆ

ಹೌದು ಇನ್ನೇನು ಸಚಿವರಾಗುತ್ತೇವೆ ಎಂಬ ನಿರೀಕ್ಷೆಯಲ್ಲಿದ್ದ ಮೂಲ ಬಿಜೆಪಿಗರಿಗೆ ಕಹಿ ಸುದ್ದಿ ಲಭಿಸಿದೆ. ರಾಜ್ಯ ಬಿಜೆಪಿಯ ಹಳೆ ತಲೆಗಳಾದ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ ಹಾಗೂ ಸಿ.ಪಿ. ಯೋಗೇಶ್ವರ್ ಸಚಿವ ಸ್ಥಾನ ಸಿಗುವುದು ಬಹುತೇಕ ಅನುಮಾನವಾಗಿದೆ. ಬಿಜೆಪಿ ಸರ್ಕಾರಕ್ಕಾಗಿ ತ್ಯಾಗ ಮಾಡಿದ ಕೇವಲ 10 ಹೊಸ ಶಾಸಕರಿಗೆ ಮಾತ್ರ ಮಂತ್ರಿಗಿರಿ ನೀಡಲು ಸಿಎಂ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಮೂಲಕ ಗೆದ್ದವರು, ಸೋತವರ ನಡುವಿನ ಭಿನ್ನಮತ ಸಿಎಂ ಮುಂದಾಗಿದ್ದಾರೆ

ಹೈಕಮಾಂಡ್ ನಿರ್ಧಾರದಂತೆ ಕತ್ತಿ, ಲಿಂಬಾವಳಿ, ಯೋಗೇಶ್ವರ್ ಮನವೊಲಿಸಲು ಸಿಎಂ ಯಡಿಯೂರಪ್ಪ ಮುಂದಾಗಿದ್ದಾರೆ. ಸರ್ಕಾರ  1 ವರ್ಷ ಪೂರ್ಣಗೊಳಿಸಿದಾಗ ಸಚಿವ ಸ್ಥಾನ ನೀಡುವ ಭರವಸೆ ಸಿಎಂ ಈ ಮೂಲ ಬಿಜೆಪಿಗರಿಗೆ ನೀಡಿದ್ದಾರೆ. ಯಡಿಯೂರಪ್ಪ ಮಾತಿಗೆ ಕತ್ತಿ ಹಾಗೂ ಲಿಂಬಾವಳಿ ತಣ್ಣಗಾಗಿದ್ದು, ಯೋಗೇಶ್ವರ್ ತೀವ್ರ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಬಿಎಸ್ ವೈ ಪುತ್ರ ವಿಜಯೇಂದ್ರ ಯೋಗೇಶ್ವರ್ ಮನವೊಲಿಸುವ ಪ್ರಯತ್ನ ಮುಂದುವರೆಸಿದ್ದಾರೆ. 

ಮುಖ್ಯಮಂತ್ರಿ ಬಿಎಸ್‌ವೈಗೆ ಖಾತೆ ಹಂಚಿಕೆ ತಲೆ ಬಿಸಿ