ಸಿದ್ದರಾಮಯ್ಯ ಮಸೀದಿಗೆ ಯಾಕೆ ಹೋಗ್ತಾರೆ? ಮನೇಲಿ ನಮಾಜ್ ಮಾಡ್ಲಿ; ಅಯೋಧ್ಯೆಗೆ ಯಾಕೆ ಹೋಗ್ಬೇಕು ಎಂದ ಸಿಎಂಗೆ ಆರ್ ಅಶೋಕ್ ತಿರುಗೇಟು!

ಸಿದ್ದರಾಮಯ್ಯ ನಮಾಜ್ ಮಾಡೋಕೆ ಮಸೀದಿಗೆ ಯಾಕೆ ಹೋಗ್ತಾರೆ? ಟೋಪಿ ಹಾಕೊಂಡು ಮನೆಯಲ್ಲೇ ನಮಾಜ್ ಮಾಡಬಹುದಲ್ಲ? ಬಿರಿಯಾನಿ ತಿನ್ನೋಕೆ ಅಲ್ಲಿಗೆ ಯಾಕೆ ಹೋಗಬೇಕು
ಹಲಾಲ್ ಕಟ್ ತಿನ್ನೋಕೆ ಹೋಗ್ತಾರಾ? ಬಿರಿಯಾನಿ ಮನೆಯಲ್ಲೇ ಮಾಡ್ಕೊಂಡು ತಿನ್ನಬಹುದಪ್ಪ ಎನ್ನುವ ಮೂಲಕ 'ಅಯೋಧ್ಯಾಗೆ ಯಾಕೆ ಹೋಗಬೇಕು' ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವಿಪಕ್ಷ ನಾಯಕ ಆರ್ ಅಶೋಕ್ ತಿರುಗೇಟು ನೀಡಿದರು.

Opposition leader R Ashok reaction against CM Siddaramaiah statement about ayodhye rammandir rav

ಬೆಂಗಳೂರು (ಜ.11): ಸಿದ್ದರಾಮಯ್ಯ ನಮಾಜ್ ಮಾಡೋಕೆ ಮಸೀದಿಗೆ ಯಾಕೆ ಹೋಗ್ತಾರೆ? ಟೋಪಿ ಹಾಕೊಂಡು ಮನೆಯಲ್ಲೇ ನಮಾಜ್ ಮಾಡಬಹುದಲ್ಲ? ಬಿರಿಯಾನಿ ತಿನ್ನೋಕೆ ಅಲ್ಲಿಗೆ ಯಾಕೆ ಹೋಗಬೇಕು
ಹಲಾಲ್ ಕಟ್ ತಿನ್ನೋಕೆ ಹೋಗ್ತಾರಾ? ಬಿರಿಯಾನಿ ಮನೆಯಲ್ಲೇ ಮಾಡ್ಕೊಂಡು ತಿನ್ನಬಹುದಪ್ಪ ಎನ್ನುವ ಮೂಲಕ 'ಅಯೋಧ್ಯಾಗೆ ಯಾಕೆ ಹೋಗಬೇಕು' ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವಿಪಕ್ಷ ನಾಯಕ ಆರ್ ಅಶೋಕ್ ತಿರುಗೇಟು ನೀಡಿದರು.

ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಜನೆವರಿ 22ರಂದು ಜನರು ರಾಮನನ್ನು ಕಣ್ತುಂಬಿಕೊಳ್ಳಲು ಕಾಯ್ತಿದ್ದಾರೆ. ಆದರೆ ಕಾಮಾಲೆ ಕಣ್ಣಿನವರಿಗೆ ರಾಮ ಮಂದಿರ ಕಾಣಲ್ಲ
22ಕ್ಕೆ ಕಾಂಗ್ರೆಸ್ ನಾಯಕರು ಕಣ್ಮುಚ್ಚಿಕೊಂಡು ಕೂರಬೇಕು ಎಂದು ಟಾಂಗ್ ನೀಡಿದರು.

ನಾವು ರಾಮಭಕ್ತರೇ ಆದರೆ ರಾಮಮಂದಿರ ಉದ್ಘಾಟನೆಗೆ ಯಾಕೆ ಹೋಗೊಲ್ಲಂದ್ರೆ..; ಮಾಜಿ ಸಚಿವ ಎಚ್‌ ಆಂಜನೇಯ ಹೇಳಿದ್ದೇನು?

ಇನ್ನು ಕಾಂಗ್ರೆಸ್ ಕಾರ್ಯಕರ್ತರನ್ನ ತೃಪ್ತಿ ಪಡಿಸಲು, ಕಾಂಗ್ರೆಸ್ ನಾಯಕರಿಗೆ ಅಧಿಕಾರ ಕೊಡಲು ಸರ್ಕಾರದ ಹಣ ಕೊಡಲು ಮುಂದಾಗಿರುವುದು ಖಂಡನೀಯ. ಲೋಕಸಭಾ ಚುನಾವಣೆ ಹತ್ತಿರ ಬರ್ತಿದೆ ಹೀಗಾಗಿ ಕಾರ್ಯಕರ್ತರನ್ನು ದುಡಿಸಿಕೊಳ್ಳಲು ಈ ಕೆಲಸ  ಕಾಂಗ್ರೆಸ್ ಮಾಡ್ತಿದೆ.  ಮಂತ್ರಿಗಳ ಅಕ್ಕ ಪಕ್ಕದಲ್ಲಿ ಸಾಕಷ್ಟು ಸಿಬ್ಬಂದಿ ಕೆಲಸ ಮಾಡ್ತಿದ್ದಾರೆ. ಹಾಗಾದ್ರೆ ಮಂತ್ರಿಗಳೆಲ್ಲಾ ನಾಲಾಯಕ್ ಹಾಗಾದರೆ? ಎಂದು ಪ್ರಶ್ನಿಸಿದರು.

ರಾಮನಿಗಾಗಿ ಅಳಿಲು ಸೇವೆಯೂ ಮಾಡದ ಕಾಂಗ್ರೆಸ್ ಯಾವ ಮುಖ ಇಟ್ಟುಕೊಂಡು ಬರ್ತಾರೆ? : ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು!

ಕಾಂಗ್ರೆಸ್ ಕಾರ್ಯಕರ್ತರಿಗೆ ಗೂಟದ ಕಾರಿಗೆ ಕೊಡಬೇಕು, ಚುನಾವಣೆಗೆ ದುಡಿಸಿಕೊಳ್ಳಬೇಕು. 160 ಕೋಟಿ ರೂಪಾಯಿ ಹಣವನ್ನು ಈ ಸರ್ಕಾರ 3 ಸಾವಿರ ಕಾರ್ಯಕರ್ತರಿಗೆ ಕೊಡ್ತಿದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ದುಡ್ಡು ಕೊಡಲು ಇವರಿಗೆ ಅಧಿಕಾರ ಕೊಟ್ಟಿದ್ದು ಯಾರು? ರಾಜ್ಯದ ತೆರಿಗೆ ಹಣ ಪಕ್ಷದ ಕಾರ್ಯಕರ್ತರಿಗೆ ಕೊಡಲು ಏನು ಅಧಿಕಾರವಿದೆ. ಬರಗಾಲ ಬಂದು ಬೆಳೆ ನಷ್ಟವಾಗಿ ರೈತರು ಆತ್ಮಹತ್ಯೆ ಮಾಡಿಕೊಂಡರೂ ಬಿಡಿಗಾಸು ಕೊಡದ ಸರ್ಕಾರ. ಕಾರ್ಯಕರ್ತರಿಗೆ 160 ಕೋಟಿ ರೂ ಖರ್ಚು ಮಾಡುತ್ತಿದೆ. ಮುಂಬರುವ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದರು.

Latest Videos
Follow Us:
Download App:
  • android
  • ios