ಮಹಾಘಟಬಂಧನ್ ಸಭೆ ಮುಗಿಯುತ್ತಿದ್ದಂತೆಯೇ ಟ್ವಿಟ್ ಮಾಡಿರುವ ಪ್ರಧಾನಿ ಮೋದಿ ವಿಪಕ್ಷಗಳ ಒಗ್ಗಟ್ಟಿಗೆ ಕುಟುಕಿ ಟ್ವೀಟ್ ಮಾಡಿದ್ದಾರೆ.
ನವದೆಹಲಿ (ಜು.18): ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಈ ಭಾರಿ ಅಧಿಕಾರದಿಂದ ಕಿತ್ತೊಗೆಯಲು ಬೆಂಗಳೂರಿನಲ್ಲಿ ವಿಪಕ್ಷಗಳೆಲ್ಲ ಸೇರಿ ಒಗಟ್ಟಿನ ಮಂತ್ರ ಸಾರಿದ್ದು, ಇದಕ್ಕೆ ಪ್ರಧಾನಿ ಮೋದಿ ಟ್ವೀಟ್ ಮೂಲಕ ಹರಿಹಾಯ್ದಿದ್ದಾರೆ. ಮಹಾಘಟಬಂಧನ್ ಸಭೆ ಮುಗಿಯುತ್ತಿದ್ದಂತೆಯೇ ಮೋದಿ ವಿಪಕ್ಷಗಳ ಒಗ್ಗಟ್ಟಿಗೆ ಕುಟುಕಿ ಟ್ವೀಟ್ ಮಾಡಿದ್ದಾರೆ.
ಇಂದು ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಭಾರತದಾದ್ಯಂತದ ನಮ್ಮ ಮೌಲ್ಯಯುತ ಎನ್‌ಡಿಎ ಪಾಲುದಾರರು ಭಾಗವಹಿಸುತ್ತಿರುವುದು ಅಪಾರ ಸಂತೋಷದ ವಿಷಯವಾಗಿದೆ. ನಮ್ಮದು ಸಮಯ ಪರೀಕ್ಷಿತ ಮೈತ್ರಿಯಾಗಿದ್ದು ಅದು ಮತ್ತಷ್ಟು ರಾಷ್ಟ್ರೀಯ ಪ್ರಗತಿಗೆ ಮತ್ತು ಪ್ರಾದೇಶಿಕ ಆಕಾಂಕ್ಷೆಗಳನ್ನು ಪೂರೈಸಲು ಪ್ರಯತ್ನಿಸುತ್ತದೆ ಎಂದು ಕುಟುಕಿದ್ದಾರೆ.
ಬೆಂಗಳೂರಿನ ತಾಜ್‌ವೆಸ್ಟೆಂಡ್‌ನಲ್ಲಿ ನಡೆದ ಸಭೆಯಲ್ಲಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ, ಉದ್ದವ್ ಠಾಕ್ರೆ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿ ಅನೇಕ ಕೇಂದ್ರ ನಾಯಕರು ಭಾಗಿಯಾಗಿದ್ದರು. ಇದೇ ಸಭೆಯಲ್ಲಿ ಯುಪಿಎ ಮಿತ್ರಪಕ್ಷವನ್ನು ಹೊಸದಾಗಿ ನಾಮಕರಣ ಮಾಡಿ ಐಎನ್‌ಡಿಐಎ ಎಂದು ಘೋಷಿಸಿದೆ.
ಅಂದು ಪ್ರಧಾನಿ ಕಾರ್ಯವೈಖರಿ ಟೀಕಿಸಿದ್ದೆ ಆದರೆ... ಮೋದಿಯ ಹೊಗಳಿದ ಕಾಂಗ್ರೆಸ್ ಸಂಸದ ತರೂರ್
ಮಹಾಘಟಬಂಧನ್ ನಲ್ಲಿ ಪಾಲ್ಗೊಂಡಿರುವ ರಾಜಕೀಯ ಪಕ್ಷಗಳು
1) ಕಾಂಗ್ರೆಸ್
2) ಟಿಎಂಸಿ
3) ಡಿಎಂಕೆ
4) ಎಎಪಿ
5) ಜೆಡಿಯು
6) ಆರ್ ಜೆ ಡಿ
7) ಜೆಎಮ್ ಎಮ್
8) ಎನ್ ಸಿಪಿ
9) ಶಿವಸೇನಾ - ಉದ್ಧವ್ ಠಾಕ್ರೆ
10) ಎಸ್ ಪಿ
11) ರಾಷ್ಟ್ರೀಯ ಲೋಕದಳ
12) ಅಪನಾ ದಳ್ (ಕಮೆರಾವಾಡಿ)
13) ಜಮ್ಮು ಕಾಶ್ಮೀರ್ ನ್ಯಾಷನಲ್ ಕಾನ್ಫರೆನ್ಸ್
14) ಪಿಡಿಪಿ
15) ಸಿಪಿಐ(ಎಮ್)
16) ಸಿಪಿಐ (
17) ಸಿಪಿಐ (ಎಮ್ ಎಲ್)
18) ರೆವೆಲ್ಯುಷನರಿ ಸೋಷಿಯಲಿಸ್ಟ್ ಪಾರ್ಟಿ
19) ಆಲ್ ಇಂಡಿಯಾ ಫಾರ್ವಡ್ ಬ್ಲಾಕ್
20) ಎಮ್ ಡಿಎಂ ಕೆ
21) ವಿಸಿಕೆ (ವಿಡುದಲೈ ಚಿರುತೈಗಳ್ ಕಚ್ಚಿ)
22) ಕೆಎಂ ಡಿಕೆ (ಕೊಂಗುನಾಡು ಮಕ್ಕಳ್ ದೇಸಿಯಾ ಕಚ್ಚಿ
23) ಎಮ್ ಎಮ್ ಕೆ (ಮಣಿತನೆಯ ಮಕ್ಕಳ್ ಕಚ್ಚಿ)
24) ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್
25) ಕೇರಳ ಕಾಂಗ್ರೆಸ್ - ಮಣಿ
26) ಕೇರಳ ಕಾಂಗ್ರೆಸ್ - ಜೊಸೆಫ್
ವಿಪಕ್ಷ ಮೈತ್ರಿಕೂಟಕ್ಕೆ INDIA ನಾಮಕರಣಕ್ಕೆ ಅಂತಿಮ ಹಂತದ ಚರ್ಚೆ, ಇದು ನ್ಯಾಶನಲ್
ಸಭೆ ಬಳಿಕ ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿ, 26 ಪಕ್ಷಗಳು ಭಾಗಿಯಾಗಿದ್ದು ಅತ್ಯಂತ ಸಂತೋಷವಾಗಿದೆ. ನಾವೇ ಒಟ್ಟಾರೆಯಾಗಿ 11 ರಾಜ್ಯಗಳಲ್ಲಿ ಅಧಿಕಾರದಲ್ಲಿ ಇದ್ದೇವೆ. ಬಿಜೆಪಿ ಸ್ವಂತ ಬಲದಲ್ಲಿ 303 ಸ್ಥಾನ ಗೆದ್ದಿಲ್ಲ, ಮಿತ್ರಪಕ್ಷಗಳ ಓಟು ಪಡೆದೇ ಅವರು ಅಧಿಕಾರದಲ್ಲಿದ್ದಾರೆ. ಹಳೆಯ ಮೈತ್ರಿ ಉಳಿಸಿಕೊಳ್ಳಲು ಪ್ಯಾಚಪ್ ಮಾಡಿಕೊಳ್ಳಲು ರಾಜ್ಯದಿಂದ ರಾಜ್ಯಕ್ಕೆ ರಾಷ್ಟ್ರಾಧ್ಯಕ್ಷ ನಡ್ಡಾ ಓಡುತ್ತಿದ್ದಾರೆ. ನಮ್ಮ ಒಗ್ಗಟ್ಟು ನೋಡಿ ಅವರಲ್ಲಿ ಸೋಲಿನ ಭಯ ಹುಟ್ಟಿಸಿದೆ. ವಿವಿಧ ತನಿಖಾ ಸಂಸ್ಥೆಗಳನ್ನು ವಿಪಕ್ಷಗಳ ವಿರುದ್ಧ ಆಯುಧವಾಗಿ ಬಳಸುತ್ತಿದ್ದಾರೆ. ನಮ್ಮ ಈ ಒಗ್ಗೂಡುವಿಕೆ ಅಧಿಕಾರಕ್ಕಾಗಿ ಅಲ್ಲ. ಸಂವಿಧಾನ, ಜಾತ್ಯಾತೀತತೆ, ಸಾಮಾಜಿಕ ನ್ಯಾಯಕ್ಕಾಗಿ ಒಂದುಗೂಡಿದ್ದೇವೆ. ನೈಜ ಪ್ರಜಾಪ್ರಭುತ್ವ, ಅಭಿವೃದ್ಧಿ, ಮತ್ತು ದೇಶದ ಕಲ್ಯಾಣಕ್ಕಾಗಿ ನಾವು ಒಗ್ಗೂಡಬೇಕಿದೆ ಎಂದಿದ್ದಾರೆ.
