ಬೆಂಗಳೂರು(ಜ.15) ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟ ಆದಾಗ ಇದದ್ದ ಪಕ್ಷಗಳ ಬಲಾಬಲಕ್ಕೂ ಈಗಿನ ಬಲಾಬಲಕ್ಕು ಕೊಂಚ ವ್ಯತ್ಯಾಸವಾಗಿರುವುದು ನಿಜ. ಉಪಚುನಾವಣೆಗಳು ನಡೆದರೂ ಆಯಾ ಸ್ಥಾನಗಳು ಅವರಿಗೆ ಲಭ್ಯವಾಗಿದೆ.

ದೋಸ್ತಿ ಸರ್ಕಾರ: ೮೦ ಸ್ಥಾನ ಹೊಂದಿರುವ ಕಾಂಂಗ್ರೆಸ್ ಮತ್ತು 37 ಸ್ಥಾನ ಹೊಂದಿರುವ ಜೆಡಿಎಸ್ ಒಟ್ಟಾಗಿ ಸರ್ಕಾರದಲ್ಲಿವೆ. ಬಿಎಸ್‌ಪಿಯ ಮಹೇಶ್‌ ಸಹ ಜೆಡಿಎಸ್‌ಗೆ ಬೆಂಬಲ ಸೂಚಿಸಿದ್ದಾರೆ. ಅಂದರೆ ಅಲ್ಲಿಗೆ ದೋಸ್ತಿ ಸರ್ಕಾರದ ಬಲ 118.  ಪಕ್ಷೇತರರಿಬ್ಬರು ಬೆಂಬಲ ವಾಪಸ್ ಪಡೆಯುವುದಕ್ಕಿಂತ ಮುಂಚೆ  120 ಇತ್ತು.

ಸರ್ಕಾರ ಪತನವಾದರೆ ಬಿಜೆಪಿ ಸರ್ಕಾರ ಬರಲ್ಲ, ಇನ್ನೊಂದು ಆಯ್ಕೆಯೂ ಇದೆ!

ಬಿಜೆಪಿ ಫಲಿತಾಂಶದ ವೇಳೆ 104 ಸ್ಥಾನ ಗಳಿಸಿಕೊಂಡಿದ್ದು ಯಾವುದೆ ಬದಲಾವಣೆ ಆಗಿಲ್ಲ. ಜಮಖಂಡಿ ಮತ್ತು ರಾಮನಗರದಲ್ಲಿ ಉಪಚುನಾವಣೆ ನಡೆದರೂ ಅಲ್ಲಿ ಹಿಂದೆ ಇದ್ದ ಪಕ್ಷಗಳ ಜಯ ಸಾಧಿಸಿದ್ದರಿಂದ ಅಂಕಿ ಅಂಶದಲ್ಲಿ ಬದಲಾವಣೆ ಆಗಿಲ್ಲ.

ಬಲಾಬಲ ನೋಡೋದಾದರೆ

ಕಾಂಗ್ರೆಸ್ 80

ಜೆಡಿಎಸ್‌ 37

ಬಿಜೆಪಿ 104

ಪಕ್ಷೇತರರು 2

ಬಿಎಸ್‌ಪಿ 1

ಸರ್ಕಾರಕ್ಕೆ ಪಕ್ಷೇತರರ ಬೆಂಬಲ ವಾಪಸ್: ಸಂ‘ಕ್ರಾಂತಿ’ ಸಕ್ಸಸ್!

ದೋಸ್ತಿ ಸರ್ಕಾರ- ಜೆಡಿಎಸ್+ಕಾಂಗ್ರೆಸ್+ಬಿಎಸ್‌ಪಿ, 37+80+1 = 118

ಬಿಜೆಪಿ- ಬಿಜೆಪಿ +ಪಕ್ಷೇತರರು, 104+2= 106

ಒಟ್ಟು ಸ್ಥಾನಗಳು=224

ಸರಳ ಬಹುಮತ=113