ಬೆಂಗಳೂರು, [ಫೆ.11]: ಬಿಜೆಪಿಯ ಆಪರೇಷನ್ ಕಮಲ ಆಡಿಯೋ ಕ್ಲಿಪ್  ಪ್ರಕರಣ ರಾಜ್ಯ ರಾಜಕಾರಣದಲ್ಲಿ ಗಂಭೀರ ಸ್ವರೂಪ ಪಡೆದುಕೊಂಡಿದೆ.

ಈ ಆಪರೇಷನ್​ ಆಡಿಯೋ ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸುವಂತೆ ಸ್ಪೀಕರ್ ರಮೇಶ್​ ಕುಮಾರ್​, ಸಿಎಂ ಕುಮಾರಸ್ವಾಮಿಗೆ ಸೂಚನೆ ನೀಡಿದ್ದಾರೆ. ಸಿಎಂ ಕುಮಾರಸ್ವಾಮಿ ಫೆಬ್ರವರಿ 8 ರಂದು ರಿಲೀಸ್​ ಮಾಡಿದ್ದ ಆಡಿಯೋ ಕುರಿತು ಇಂದು [ಸೋಮವಾರ]  ವಿಧಾನಸಭಾ ಕಲಾಪದಲ್ಲಿ ಭರ್ಜರಿ ಚರ್ಚೆ ನಡೆಯಿತು. 

ಆಡಿಯೋ ಕ್ಲಿಪ್: 'ಸುಪ್ರೀಂ ನಿಯಮದಂತೆ ಸ್ವತಃ ಕುಮಾರಸ್ವಾಮಿಯೂ ತಪ್ಪಿತಸ್ಥರು'

ಸ್ಪೀಕರ್ ರಮೇಶ್​ ಕುಮಾರ್ ಆರಂಭದಲ್ಲಿ ತಾವೇ, ಆಡಿಯೋ ಬಗ್ಗೆ ಪ್ರಸ್ತಾಪ ಮಾಡಿ ಚರ್ಚೆಗೆ ಅವಕಾಶ ಮಾಡಿಕೊಟ್ಟರು.  ಸುದೀರ್ಘ ಚರ್ಚೆ ಬಳಿಕ, ಸ್ಪೀಕರ್​ ರಮೇಶ್​ ಕುಮಾರ್, ಆಡಿಯೋ ಸಂಬಂಧ ಸೂಕ್ತ ತನಿಖೆ ಆಗುವ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ನಾನು ಸಿಎಂಗೆ ಸೂಚನೆ ನೀಡುತ್ತೇನೆ. 

ವಿಶೇಷ ತಂಡ ರಚಿಸಿ15 ದಿನದೊಳಗೆ ವರದಿ ನೀಡಿ. ಆಡಿಯೋದಲ್ಲಿ ನನ್ನ ಹೆಸರ ಕೂಡ ಕೇಳಿ ಬಂದಿದೆ. ನನಗೆ ರಿಲೀಫ್​ ಕೊಡಿ. ಸಮಗ್ರ ತನಿಖೆ ನಡೆಸಿ ಆಡಿಯೋದಲ್ಲಿ ಯಾರು ಇದ್ದಾರೆ ಅನ್ನೋದರ ಬಗ್ಗೆ ತನಿಖೆ ಆಗಲಿ ಎಂದು ಸೂಚನೆ ನೀಡಿದರು.

ಆಡಿಯೋದಲ್ಲಿ ಸ್ಪೀಕರ್ ಹೆಸ್ರು: ತನಿಖೆಯಾಗ್ಬೇಕು ಎಂದ ಸಿದ್ದರಾಮಯ್ಯ!

ಬಿಜೆಪಿಗೆ ಹಿನ್ನೆಡೆ
ಸರ್ಕಾರದ ಮೇಲೆ ತನಿಖೆ ಮೇಲೆ ನಮಗೆ ನಂಬಿಕೆ ಇಲ್ಲ. ಹಾಗೂ ಈ ಆಡಿಯೋ ಕ್ಲಿಪ್ ಪ್ರಕರಣವನ್ನು ನ್ಯಾಯಾಂಗದ ಮೂಲಕ ತನಿಖೆಯಾಗಬೇಕು ಎಂದು ವಿಧಾನಸೌಧದಲ್ಲಿ ಬಿಜೆಪಿ ಆಗ್ರಹಿಸಿತು. 

ಇದಕ್ಕೆ ಸ್ಪೀಕರ್ ರಮೇಶ್ ಕುಮಾರ್ ಅವರು ಪ್ರತಿಕ್ರಿಯಿಸಿ, ಮತ್ತೆ ನನ್ನ ನಿರ್ಧಾರ ಬದಲಿಸುವುದಿಲ್ಲ. 15 ದಿನದಲ್ಲಿ ನನಗೆ ರಿಲೀಫ್ ಸಿಗದಿದ್ರೆ ಕಷ್ಟ ಅದಕ್ಕಾಗಿ ಎಸ್ಐಟಿ ತನಿಖೆಗೆ ಆದೇಶಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು. ಇದ್ರಿಂದ ಬಿಜೆಪಿಗೆ ಮುಖಭಂಗವಾಗಿದೆ.