Asianet Suvarna News Asianet Suvarna News
breaking news image

ರಾಜ್ಯದ ರಸ್ತೆ ಅಭಿವೃದ್ಧಿಗೆ ಒಂದು ಲಕ್ಷ ಕೋಟಿ: ಕೇಂದ್ರ ಸಚಿವ ನಿತಿನ್ ಗಡ್ಕರಿ

ರಾಜ್ಯದಲ್ಲಿ ರಸ್ತೆಗಳ ಅಭಿವೃದ್ಧಿಗಾಗಿ ಒಂದು ಲಕ್ಷ ಕೋಟಿ ರು. ನೀಡಲು ಕೇಂದ್ರ ಬದ್ಧವಾಗಿದ್ದು, ಶೀಘ್ರ ಭೂಸ್ವಾ ಧೀನ ಮಾಡಿ ಪ್ರಸ್ತಾವನೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. 
 

One lakh crore for state road development says Nitin Gadkari gvd
Author
First Published Jul 5, 2024, 12:28 PM IST

ಬೆಂಗಳೂರು (ಜು.05): ರಾಜ್ಯದಲ್ಲಿ ರಸ್ತೆಗಳ ಅಭಿವೃದ್ಧಿಗಾಗಿ ಒಂದು ಲಕ್ಷ ಕೋಟಿ ರು. ನೀಡಲು ಕೇಂದ್ರ ಬದ್ಧವಾಗಿದ್ದು, ಶೀಘ್ರ ಭೂಸ್ವಾ ಧೀನ ಮಾಡಿ ಪ್ರಸ್ತಾವನೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ರಾಜ್ಯ ವಿಶೇಷ ಕಾರ್ಯ ಕಾರಿಣಿಯಸಮಾರೋಪಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಖ್ಯಮಂತ್ರಿ ಮತ್ತು ಉಪಮುಖ್ಯ ಮಂತ್ರಿಗಳು ನನ್ನನ್ನು ಭೇಟಿಯಾಗಿದ್ದರು. 

ರಾಜ್ಯದ ರಸ್ತೆಗಳ ಅಭಿವೃದ್ಧಿಗಾಗಿ ಒಂದು ಲಕ್ಷ ಕೋಟಿ ರು. ನೀಡುವುದಾಗಿ ಆಶ್ವಾಸನೆ ನೀಡಿದ್ದೇನೆ. ಆದರೆ, ಭೂಸ್ವಾಧೀನ ಪ್ರಕ್ರಿಯೆ ಮುಗಿಸಿಕೊಂಡುಬರುವಂತೆ ತಿಳಿಸಲಾಗಿದೆ. ಗಾಳಿಯಲ್ಲಿ ರಸ್ತೆ ಮಾಡಲು ಸಾಧ್ಯವಿಲ್ಲ. ತಿಂಗಳಲ್ಲಿ ಭೂಸ್ವಾಧೀನ ಒಂದು ಪ್ರಕ್ರಿಯೆಗಳನ್ನು ಮುಗಿಸಿ ಪ್ರಸ್ತಾವನೆ ಸಲ್ಲಿಸಿದರೆ, ಒಂದಲ್ಲ ಎರಡು ಲಕ್ಷ ಕೋಟಿ ರು. ಬೇಕಾದರೂ ನೀಡಲಾಗುವುದು ಎಂದು ಹೇಳಿದರು. ಕೃಷ್ಣಾ -ಗೋದಾವರಿ ಯೋಜನೆ ಮುಕ್ತಾಯವಾದರೆ, ಕರ್ನಾಟಕ ಮಾತ್ರ ವಲ್ಲದೇ, ತಮಿಳುನಾಡಿನ ಸಮಸ್ಯೆಯೂ ಪರಿಹಾರವಾಗಲಿದೆ. 

ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ: 15 ದಿನಕ್ಕೆ 10ನೇ ಘಟನೆ

ಎಲ್ಲವನ್ನೂ ಜಾತಿವಾದದಿಂದ ನೋಡುವುದಿಲ್ಲ. ಎನ್‌ಡಿಎ ಸರ್ಕಾರವು ಜಾತಿಗೆ ಸೀಮಿತವಾದ ಯೋಜನೆ ನೀಡಿದ್ದೇವೆಯೇ? ಪ್ರತಿ ಯೋಜನೆಯೂ ಸಲ್ಲುವಂತಹದ್ದಾಗಿದೆ. ಜಾತಿವಾದ, ಎಲ್ಲರಿಗೂ ಸಂಪ್ರದಾಯವಾದ ತೆಗೆದು ಹಾಕಬೇಕು. ಆದರೆ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ. ಬಡತನ, ಜಾತಿ, ಸಂಪ್ರದಾಯಿತ್ವ ನಿರ್ಮೂಲನೆ ಮಾಡುವುದೇ ನಮ್ಮ ಉದ್ದೇಶ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

Latest Videos
Follow Us:
Download App:
  • android
  • ios