Asianet Suvarna News Asianet Suvarna News

ನಾನು ಪಕ್ಷದಲ್ಲಿ ಹಿರಿಯ, ಇವತ್ತಲ್ಲ ನಾಳೆ ಸಿಎಂ ಆಗುತ್ತೇನೆ: ಸಚಿವ ಎಂಬಿ ಪಾಟೀಲ್!

ಕುಮಾರಸ್ವಾಮಿ ತಾನು ಮತ್ತೆ ಸಿಎಂ ಆಗುವ ಆಸೆ ಆಕಾಂಕ್ಷೆ ಇಟ್ಟುಕೊಂಡಿದ್ರು ಆದ್ರೆ ಅವರ ಆಸೆ ನಿರಾಸೆಯಾಗಿದೆ. ಅವರು ಹೀಗೆ ಸಿಎಂ ಆಗುವ ಕನಸನ್ನು ಹೀಗೆ ಮುಂದುವರಿಸಿಕೊಂಡು ಹೋಗಲಿ ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಲೇವಡಿ ಮಾಡಿದರು.

One day I will become chief minister of karnataka says minister mb patil at bengaluru rav
Author
First Published Sep 7, 2024, 3:40 PM IST | Last Updated Sep 7, 2024, 3:40 PM IST

ಬೆಂಗಳೂರು (ಸೆ.7):  ಕುಮಾರಸ್ವಾಮಿ ತಾನು ಮತ್ತೆ ಸಿಎಂ ಆಗುವ ಆಸೆ ಆಕಾಂಕ್ಷೆ ಇಟ್ಟುಕೊಂಡಿದ್ರು ಆದ್ರೆ ಅವರ ಆಸೆ ನಿರಾಸೆಯಾಗಿದೆ. ಅವರು ಹೀಗೆ ಸಿಎಂ ಆಗುವ ಕನಸನ್ನು ಹೀಗೆ ಮುಂದುವರಿಸಿಕೊಂಡು ಹೋಗಲಿ ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಲೇವಡಿ ಮಾಡಿದರು.

ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಸಚಿವರು, ಅವರು ಕನಸು ಕಾಣುವುದಷ್ಟೇ ಯಾವುದೇ ಕಾರಣಕ್ಕೂ ಕುಮಾರಸ್ವಾಮಿ ಮತ್ತೆ ಸಿಎಂ ಆಗೊಲ್ಲ ಎಂದರು ಇದೇ ವೇಳೆ 'ಎಂಬಿ ಪಾಟೀಲ್ ಸಿಎಂ ಆಗೊಲ್ಲ' ಎಂಬ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಸಚಿವರು, ಈಗ ಅಂತಹ ಸನ್ನಿವೇಶ ಬಂದಿಲ್ಲ, ಸಿದ್ದರಾಮಯ್ಯ ಅವರೇ ಸಿಎಂ ಆಗಿರ್ತಾರೆ. ನಾನು ಹಿರಿಯನಿದ್ದೇನೆ. ಒಂದಲ್ಲ ಒಂದು ದಿನ ಮುಖ್ಯಮಂತ್ರಿ ಆಗ್ತೇನೆ. ಆದರೆ ಶಿವಾನಂದ ಪಾಟೀಲ್ ಆಗೊಲ್ಲ. ಯಾಕೆಂದರೆ ಅವರು ಜೆಡಿಎಸ್‌ನಿಂದ ಬಂದವರು. ವಿಜಯಪುರದಿಂದ ಸಿಎಂ ಆಗೋದು ನಾನೇ ಎಂದು ಶಿವಾನಂದ ಪಾಟೀಲ್‌ಗೆ ತಿರುಗೇಟು ನೀಡುವ ಮೂಲಕ ಎಂಬಿ ಪಾಟೀಲ್ ಸಿಎಂ ಆಗುವ ಆಸೆ ಬಿಚ್ಚಿಟ್ಟರು.

ಬಾಗೀನ ಅರ್ಪಿಸುವ ವೇಳೆ ಈಶ್ವರ್‌ ಖಂಡ್ರೆ ಜಸ್ಟ್‌ ಮಿಸ್‌, 'ಕೆರೆಗೆ ಹಾರ' ದಿಂದ ಬಚಾವ್‌ ಆದ ಅರಣ್ಯ ಸಚಿವ!

ಇನ್ನು ಮುಡಾ ಪ್ರಕರಣ ಡೈವರ್ಟ್ ಮಾಡಲು ದರ್ಶನ್ ಫೋಟೊ ರಿಲೀಸ್ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿದವರು. ಅವರ ಈ ರೀತಿ ಮಾತನಾಡೋದು ಸರಿಯಲ್ಲ. ದರ್ಶನ್ ರಾಜಾತಿಥ್ಯ ಗಂಭೀರವಾದುದು. ನಾನು ಹೋಂ ಮಿನಿಸ್ಟರ್ ಆಗಿದ್ದೆ. ಆಗಲೂ ಜೈಲಿನಲ್ಲಿ ಇಂತಹ ವ್ಯವಸ್ಥೆ ನೋಡಿದ್ದೇನೆ. ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅದಕ್ಕೆ ದರ್ಶನ್ ಅಂಡ್ ಗ್ಯಾಂಗ್ ಅನ್ನ ಚದುರಿಸಲಾಗಿದೆ. ರಾಜ್ಯದ ಬೇರೆಬೇರೆ ಜೈಲುಗಳಿಗೆ ಶಿಫ್ಟ್ ಮಾಡಲಾಗಿದೆ. ಫೋಟೊ ಲೀಕ್ ಎಲ್ಲದರ ಬಗ್ಗೆ ತನಿಖೆ ಆಗಲಿದೆ. ಮುಡಾ ಡೈವರ್ಟ್ ಮಾಡೋಕೆ ಅದರಲ್ಲಿ ಏನಾಗಿದೆ. ಸುಮ್ಮನೆ ಮಾತನಾಡಬಾರದು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆಗೆ ತಿರುಗೇಟು ನೀಡಿದರು.

 

ನನಗೂ ಭಾಷೆ ಗೊತ್ತು, ಬಾಗಲಕೋಟೆಗೇ ಬರ್ತೀನಿ: ನಿರಾಣಿಗೆ ಎಂಬಿ ಪಾಟೀಲ್ ತಿರುಗೇಟು

ಮುಡಾ ಪ್ರಕರಣದ ಸೈಟ್ ಹಂಚಿಕೆ ಬಿಜೆಪಿ ಅವಧಿಯಲ್ಲಿ ಆಗಿದ್ದು. ಇದರಲ್ಲಿ ಸಿಎಂ ಸಿದ್ದರಾಮಯ್ಯನರ ಪಾಲೇನಿದೆ? ಮುಡಾದಿಂದ ಯಾರೂ ಭಯಗೊಂಡಿಲ್ಲ. ಕಾನೂನಾತ್ಮಕವಾಗಿ ಹೋರಾಟ ಮಾಡ್ತಿದ್ದೇವೆ. ಇದರಲ್ಲಿ ನಮಗೆ ಜಯ ಸಿಕ್ಕೇ ಸಿಗುತ್ತದೆ. ಹಗಲುಗನಸು ಕಾಣೋದು ಬೇಡ. ರಾಜ್ಯಪಾಲರ ನಡೆವಳಿಕೆ ಮಾತ್ರ ಕಾನೂನು ಬಾಹಿರವಾಗಿದೆ ಎಂದರು.

Latest Videos
Follow Us:
Download App:
  • android
  • ios