ದಾವಣಗೆರೆ, [ಜ.20]: "ಹೌದು ಹುಲಿಯಾ ಅಲ್ಲ ಹೌದು ಇಲಿಯಾ" ಎಂದು ಹೇಳುವ ಮೂಲಕ ಸಚಿವ ಸಿಟಿ ರವಿ ಅವರು ಸಿದ್ದರಾಮಯ್ಯನವರ ಕಾಲೆಳೆದಿದ್ದರು. 

ಇದೀಗ ಅದೇ ಬಿಜೆಪಿ ವಿಧಾನಪರಿಷತ್ ಸದಸ್ಯ ರವಿಕುಮಾರ್,  ಸಿದ್ದರಾಮಯ್ಯರಿಗೆ ಹೌದು ಸೋನಿಯಾ ಎಂದು ಲೇವಡಿ ಮಾಡಿದ್ದಾರೆ.

ಕೊಪ್ಪಳದ ಜಾತ್ರೆಯಲ್ಲಿಯೂ ಮೋದಿ ಮೋದಿ, ಹೌದು ಹುಲಿಯಾದ್ದೇ ಹವಾ!

ಇಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಹೌದು ಹುಲಿಯಾ ಅಲ್ಲಾ, ಅವರು ಹೌದು ಸೋನಿಯಾ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ರವಿಕುಮಾರ್ ವ್ಯಂಗ್ಯವಾಡಿದರು.

ಉಪಚುನಾವಣೆ ವೇಳೆ ಸಿದ್ದರಾಮಯ್ಯ ಅವರು ಕಾಗವಾಡದಲ್ಲಿ ಭಾಷಣ ಮಾಡುತ್ತಿದ್ದ ವೇಳೆ 'ಹೌದೋ ಹುಲಿಯಾ' ಎಂದು ಪೀರಪ್ಪ ಕಟ್ಟೀಮನಿ ಕೂಗಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿತ್ತು. ಇನ್ನೂ ಸಹ ಮಾಡುತ್ತಿದೆ.

ಸಿದ್ದು ಕಾಲಿಗೆ ಬಿದ್ದು 'ಹೌದು ಹುಲಿಯಾ' ಹೇಳಿದ್ದು ಒಂದೇ ಮಾತು

ಇನ್ನು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿರುವ ‘ಹೌದು ಹುಲಿಯಾ’ ಡೈಲಾಗ್ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ನಗುತ್ತಲೇ ಪ್ರತಿಕ್ರಿಯಿಸಿದ್ದರು.

ರಾಯಚೂರು ಸಿಂಧನೂರು ತಾಲೂಕಿನ ಒಳಬಳ್ಳಾರಿಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ವೇಳೆ ಸಿದ್ದರಾಮಯ್ಯ ಅವರು, ‘ಹೌದು ಹುಲಿಯಾ’ ಎಲ್ಲೆಡೆ ತುಂಬಾ ವೈರಲ್ ಅಗಿದೆ. ಚುನಾವಣಾ ಪ್ರಚಾರದಲ್ಲಿ ನಡೆದದ್ದು ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ ಎಂದು ಸ್ಪಷ್ಟಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.