ಸ್ವಾಮೀಜಿ ಗಳು ಕೂಡಾ ತಲೆಯ ಮೇಲೆ ವಸ್ತ್ರ ಧರಿಸುವುದಿಲ್ಲವೇ ಎಂದು ಹೇಳಿಕೆ ನೀಡಿ ವಿವಾದದಲ್ಲಿ ಸಿಲುಕಿಕೊಂಡಿರುವ ಸಿದ್ದರಾಮಯ್ಯ ಅವರ ಪರವಾಗಿ ಯಾವೊಬ್ಬ ಕಾಂಗ್ರೆಸ್ ನಾಯಕನೂ ಹೇಳಿಕೆ ನೀಡುತ್ತಿಲ್ಲ.

 ವರದಿ . ಸುರೇಶ್ ಎ ಎಲ್. ಏಷ್ಯಾನೆಟ್ ಸುವರ್ಣನ್ಯೂಸ್ 

ಬೆಂಗಳೂರು(ಮಾ.26): ಹಿಜಾಬ್ (Hijab) ವಿವಾದದಲ್ಲಿ ಕಾಂಗ್ರೆಸ್ ಪಕ್ಷ ಅಡಕತ್ತರಿಗೆ ಸಿಕ್ಕಿಕೊಂಡಂತೆ ಆಗಿತ್ತು. ಹಿಜಾಬ್ ವಿವಾದ ತಾರಕಕ್ಕೇರಿದಾಗ ಯಾವುದೇ ಹೇಳಿಕೆ ಕೊಟ್ಟರೂ ಪಕ್ಷಕ್ಕೆ ಡ್ಯಾಮೇಜ್ ಎಂಬಂತೆ ಆಗಿ, ನಾಯಕರೆಲ್ಲಾ ಮೌನಕ್ಕೆ ಶರಣಾಗಿದ್ದರು. ಹೈ ಕೋರ್ಟ್ ತೀರ್ಪು ಕೂಡಾ ಬಂದಾಗಿ ಇದೀಗ ಹಿಜಾಬ್ ವಿಚಾರವೇ ಜನರ ಮನಸಿಂದ ಮರೆಯಾಗ್ತಿರುವ ಈ ಸಂದರ್ಭದಲ್ಲಿ ಸುಮ್ಮನಿರಲಾರದೆ ಹಳೆ ಗಾಯವನ್ನು ಕೆರೆದು ಹುಣ್ಣು ಮಾಡಿಕೊಂಡಂತೆ ಸಿದ್ದರಾಮಯ್ಯ (siddaramaiah ) ವರ್ತಿಸಿದ್ದಾರೆ. 

ಹಿಜಾಬ್ ಧರಿಸಿಧರೆ ತಪ್ಪೇನು.? ಎಂದು ಪ್ರಶ್ನಿಸಿದ್ದಾರೆ. ಹೆಣ್ಣು ಮಕ್ಕಳು ತಲೆಯ ಮೇಲೆ ವಸ್ತ್ರ (ಸೆರಗು ) ಹಾಕಿಕೊಳ್ಳುವುದಿಲ್ಲವೇ.? ಅದೇ ರೀತಿ ಹಿಜಾಬ್ ಧರಿಸಿದರೆ ಏನು ತಪ್ಪು ಎಂದಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸ್ವಾಮೀಜಿ ಗಳು ಕೂಡಾ ತಲೆಯ ಮೇಲೆ ವಸ್ತ್ರ ಧರಿಸುವುದಿಲ್ಲವೇ ಎಂದಿದ್ದಾರೆ. ಇದು ಮತ್ತೊಂದು ಸುತ್ತಿನ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. 

Chamarajanagara ಉರುಕಾತೇಶ್ವರಿ ಜಾತ್ರೆಯಲ್ಲಿ ಮೈ ಮೇಲೆ ಕೆಂಡ ಸುರಿದುಕೊಳ್ಳುವ ಆಚರಣೆ

ವಿಪರ್ಯಾಸವೆಂದರೆ ಸಿದ್ದರಾಮಯ್ಯ ನವರ ಈ ಹೇಳಿಕೆ ವಿವಾದವಾಗುವ ಸೂಚನೆ ಸಿಗುತ್ತಿದ್ದಂತೆಯೇ ಕಾಂಗ್ರೆಸ್ ನ (congress) ನಾಯಕರೂ ಕೂಡಾ ಸಿದ್ದರಾಮಯ್ಯ ಪರ ವಕಾಲತ್ತು ವಹಿಸಲು ಹಿಂದೇಟು ಹಾಕಲಾರಂಭಿಸಿದ್ದಾರೆ. ಸಿದ್ದರಾಮಯ್ಯ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಯಾವೊಬ್ಬ ನಾಯಕನೂ ಮುಂದೆ ಬರುತ್ತಿಲ್ಲ.

 ಖುದ್ದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ (D.k shivakumar) ಕೂಡಾ ಸಿದ್ದರಾಮಯ್ಯ ಅವರ ಹೇಳಿಕೆಗೆ ಅವರೇ ಉತ್ತರ ಕೊಡುತ್ತಾರೆ, ಸಿದ್ದರಾಮಯ್ಯ ಅವರಿಗೂ ಕೂಡಾ ಸ್ವಾಮೀಜಿ ಗಳ ಮೇಲೆ ಗೌರವ ಇದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅನೇಕ ಮಠಮಾನ್ಯಗಳಿಗೆ ಸಹಾಯ ಮಾಡಿದ್ದಾರೆ. ಈಗ ಅವರು ನೀಡಿರುವ ಹೇಳಿಕೆಗೆ ಅವರೇ ಉತ್ತರ ಕೊಡುತ್ತಾರೆ ಎಂದು ಜಾರಿಕೊಂಡಿದ್ದಾರೆ.

ಸಿದ್ದರಾಮಯ್ಯ ಹೇಳಿಕೆಯನ್ನು ಕಟುವಾಗಿ ಖಂಡಿಸಿದ ಕಿಷ್ಕಿಂದ ಸರಸ್ವತಿ ಸ್ವಾಮೀಜಿ

ಹಿಜಾಬ್ ವಿಚಾರದಲ್ಲಿ ಮಕ್ಕಳು ಹಠ ಮಾಡದೇ ಶಾಲೆಗೆ ಹೋಗಲಿ: ಹಿಜಾಬ್ ವಿಚಾರದಲ್ಲಿ ಕೋರ್ಟ್ ತೀರ್ಪು ಬಂದರೂ ಕೂಡಾ ಹಠಕ್ಕೆ ಬಿದ್ದಿರುವ ಮಕ್ಕಳ ಬಗ್ಗೆ ಡಿಕೆಶಿ ಪ್ರತಿಕ್ರಿಯಿಸಿದ್ದಾರೆ. ಈಗಾಗಲೇ ಈ ವಿಚಾರವಾಗಿ ಕೋರ್ಟ್ ತೀರ್ಪು ಬಂದಿದೆ. ಇದನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡುವ ಅವಕಾಶವಿದೆ. ಆದರೆ ಈಗ ಮಕ್ಕಳು ಹಠ ಮಾಡುವುದು ಸರಿಯಲ್ಲ ವಿದ್ಯಾಭ್ಯಾಸ ಕ್ಕೆ ಮೊದಲು ಆದ್ಯತೆ ಕೊಡಲಿ. ಮಕ್ಕಳ ಮನಸ್ಸನ್ನು ಬದಲಾಯಿಸುವ ಕೆಲಸವನ್ನು ಶಿಕ್ಷಕರು, ತಂದೆತಾಯಿಗಳು ಮಾಡಲಿ, ಸದ್ಯಕ್ಕೆ ಹೈಕೋರ್ಟ್ ತೀರ್ಮಾನದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.