ರಾಮನಗರ[ಫೆ.17]: ಈ ಜಿಲ್ಲೆ ಜೆಡಿ​ಎಸ್‌ನ ಭದ್ರ​ಕೋಟೆ. ಇಲ್ಲಿನ ಜನರು ಜಾತ್ಯ​ತೀತ ಮನೋ​ಭಾವ ಉಳ್ಳ​ವರು. ಗಣ​ವೇ​ಷ​ಧಾ​ರಿ​ಗ​ಳಾಗಿ ಕೈಯಲ್ಲಿ ಲಾಠಿ ಹಿಡಿದು ಎಷ್ಟೇ ಪ್ರಯತ್ನಿಸಿ​ದರೂ ಇಲ್ಲಿನ ಜನರ ಮನ​ಸ್ಥಿತಿ ಬದ​ಲಾ​ಯಿ​ಸಲು ಸಾಧ್ಯ​ವಿಲ್ಲ ಎಂದು ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ.​ಕು​ಮಾ​ರ​ಸ್ವಾಮಿ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆ​ಸಿ​ದ​ರು.

ಭಾವಿ ಪತ್ನಿಯ ಕೈಬರಹ ಶೇರ್, ನಿಖಿಲ್‌ರಿಂದ ಮತ್ತೊಂದು ವಿಷಯ ಕ್ಲಿಯರ್!

ತಾಲೂಕಿನ ಕೈಲಾಂಚ ಗ್ರಾಮದ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಮಹಾದ್ವಾರವನ್ನು ಭಾನುವಾರ ದಂಪತಿ ಸಮೇತ ಉದ್ಘಾಟಿಸಿದ ಅವರು, ಆರ್‌ಎಸ್‌ಎಸ್‌ನ ಕೆಲವರು ಬಾಡಿಗೆ ಜನ​ರನ್ನು ಕರೆ​ತಂದು, ಗಣ​ವೇ​ಷ​ಧಾರಿ​ಗ​ಳಾಗಿ ಪಥ ಸಂಚ​ಲ​ನ​ ನಡೆ​ಸಿದ್ದಾರೆ. ಈ ಮೂಲಕ​ ಬೇರೆ ಪಕ್ಷ​ಗ​ಳೆ​ಲ್ಲ​ವನ್ನು ನಾಮಾ​ವ​ಶೇಷ ಮಾಡಿ​ಬಿ​ಡು​ತ್ತೇವೆ ಎಂದಿದ್ದಾರೆ.

ಬೇರೆ​ಯ​ವರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದರೆ 144 ಸೆಕ್ಷನ್‌ ಜಾರಿ ಮಾಡುತ್ತಾರೆ. ಆದರೆ, ಆರ್‌ಎಸ್‌ಎಸ್‌ನವರು ರಾಮನಗರದಲ್ಲಿ ಪಥ ಸಂಚಲನ ನಡೆಸಿದರೆ ಅವರಿಗೆ ಅವ​ಕಾಶ ನೀಡಿ ಪೊಲೀಸ್‌ ಬಂದೋ​ಬಸ್‌್ತ ನೀಡು​ತ್ತಾರೆ. ನಮ್ಮದು ಕಾರ್ಯಕರ್ತರ ಗಟ್ಟಿಕೋಟೆ, ಯಾರೇ ಮಹಾನ್‌ ನಾಯಕರು ಬಂದರೂ ಅದನ್ನು ಅಲುಗಾಡಿಸಲು ಸಾಧ್ಯವಾಗದು ಎಂದರು.

ರಾಮನಗರದಲ್ಲಿ ರಣಹದ್ದು ಸಂತಾನೋತ್ಪತ್ತಿ ಕೇಂದ್ರ!