ಬಿಜೆಪಿಯಲ್ಲಿ ನೈತಿಕ ಪೊಲೀಸ್‌ಗಿರಿ ಇಲ್ಲ: ಖಾದರ್‌ಗೆ ಸಚಿವ ಮಾಧುಸ್ವಾಮಿ ತಿರುಗೇಟು

ಬಿಜೆಪಿಯಲ್ಲಿ ಹೈಕಮಾಂಡ್ ಬಹಳ ಪ್ರಬಲವಾಗಿದೆ, ನೈಪುಣ್ಯತೆಯಿಂದ ಇದೆ. ಚುನಾವಣೆ ಹೇಗೆ ಮಾಡಬೇಕು, ಯಾರನ್ನು ಚುನಾವಣೆಗೆ ನಿಲ್ಲಿಸಬೇಕು, ಯಾರಿಗೆ ನಾಯಕತ್ವ ಕೊಡಬೇಕು, ಏನು ಮಾಡಬೇಕು ಎಂದು ಹೈಕಮಾಂಡ್ ತೀರ್ಮಾನ ಮಾಡುತ್ತೆ: ಸಚಿವ‌ ಮಾಧುಸ್ವಾಮಿ 

No Moral Policing in BJP Says Minister JC Madhuswamy grg

ಉತ್ತರಕನ್ನಡ(ಡಿ.10):  ನಾವು ಸರ್ಕಾರ ನಡೆಸುತ್ತಿರುವುದು ಎಲ್ಲರಿಗೂ ಹೊರತು ಯಾರೋ ಒಬ್ಬರಿಗೆ ಅಲ್ಲಾ. ಸರ್ಕಾರದ ಮುಂದೆ ಎಲ್ಲರೂ ಒಂದೇ, ಸಾರ್ವಜನಿಕರಿಗೋಸ್ಕರ ಸರ್ಕಾರ ನಡೆಸುತ್ತಿದ್ದೇವೆ. ನಮ್ಮ ಪಕ್ಷದಲ್ಲಿ ನೈತಿಕ ಪೊಲೀಸ್‌ಗಿರಿ ಇಲ್ಲ.‌ ನಮ್ಮ ಪಕ್ಷ ಇದೆ ಎಂದು ಯಾರಾದರೂ ನೈತಿಕ ಪೊಲೀಸ್‌ಗಿರಿ ಮಾಡಿದ್ರೆ ನಾವು ಸಹಿಸಲ್ಲ. ಯಾರಾದರೂ ಕಾನೂನು ಮೀರಿ ಹೋದ್ರೆ ಅನುಭವಿಸುತ್ತಾರೆ ಅಷ್ಟೇ ಎಂದು ಕಾನೂನು ಸಚಿವ ಮಾಧುಸ್ವಾಮಿ  ತಿಳಿಸಿದ್ದಾರೆ.

ಅನೈತಿಕ ಗೂಂಡಾಗಿರಿ ಮಾಡುವವರೇ ಸರ್ಕಾರ ನಿಯಂತ್ರಿಸ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ಯು.ಟಿ.ಖಾದರ್ ಹೇಳಿಕೆಗೆ ಇಂದು(ಶನಿವಾರ) ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಧುಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

Mangaluru Moral Policing: ಸುಳ್ಯದಲ್ಲಿ ನೈತಿಕ ಪೊಲೀಸ್‌ಗಿರಿ: ಇಬ್ಬರು ವಿದ್ಯಾರ್ಥಿಗಳ ಮೇಲೆ ಹಲ್ಲೆ

ಬಿಜೆಪಿಯಲ್ಲಿ ಹೊಸ ಮುಖಗಳಿಗೆ ಟಿಕೆಟ್ ಕೊಡುವ ಸಾಧ್ಯತೆ ಕುರಿತು ಮಾತನಾಡಿದ ಸಚಿವ ಮಾಧುಸ್ವಾಮಿ ಅವರು, ಬಿಜೆಪಿಯಲ್ಲಿ ಹೈಕಮಾಂಡ್ ಬಹಳ ಪ್ರಬಲವಾಗಿದೆ, ನೈಪುಣ್ಯತೆಯಿಂದ ಇದೆ. ಚುನಾವಣೆ ಹೇಗೆ ಮಾಡಬೇಕು, ಯಾರನ್ನು ಚುನಾವಣೆಗೆ ನಿಲ್ಲಿಸಬೇಕು, ಯಾರಿಗೆ ನಾಯಕತ್ವ ಕೊಡಬೇಕು, ಏನು ಮಾಡಬೇಕು ಎಂದು ಹೈಕಮಾಂಡ್ ತೀರ್ಮಾನ ಮಾಡುತ್ತೆ. ನಮ್ಮ ಕಡೆಯಿಂದ ಹೇಳಿಸಿಕೊಳ್ಳುವ ಸ್ಥಿತಿಯಲ್ಲಿ ಹೈಕಮಾಂಡ್ ಇಲ್ಲ. ಹೈಕಮಾಂಡ್ ಏನು ಸೂಚನೆ ಕೊಡುತ್ತೆ ಅದರ ಮೇಲೆ ಚುನಾವಣೆ ಮಾಡುತ್ತೇವೆ ಎಂದು ಸಚಿವ‌ ಮಾಧುಸ್ವಾಮಿ ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios