ಗ್ಯಾರಂಟಿ ಯೋಜನೆಯಿಂದ ರಾಜ್ಯದ ಖಜಾನೆ ಖಾಲಿ?: ತೂಹಲ ಮೂಡಿಸಿದ ಬಸವರಾಜ ರಾಯರೆಡ್ಡಿ ಹೇಳಿಕೆ
ನಮ್ಮ ಕ್ಷೇತ್ರಕ್ಕೆ ಮಾತ್ರ ಹಣ ಬಂದಿದೇ, ಗ್ಯಾರಂಟಿ ಯೋಜನೆ ನಮ್ಮನ್ನ ಮುಚ್ಚಿ ಬಿಟ್ಟಿದೆ. ನಾನು ಸಿಎಂ ಆರ್ಥಿಕ ಸಲಹೆಗಾರನಾಗಿದ್ದಿನಿ. ದಿನನಿತ್ಯ ಅಲ್ಲಿರೋದಕ್ಕೆ ನನ್ನ ಕ್ಷೇತ್ರಕ್ಕೆ ಹಣ ಬಂದಿದೆ. ಇಲ್ಲ ಅಂದ್ರೆ ಯಾವುದೇ ಕಾರಣಕ್ಕೂ ಹಣ ಬರ್ತಾಯಿರಲಿಲ್ಲ: ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ
ಕೊಪ್ಪಳ(ಜು.12): ಬಹಳಷ್ಟು ಕ್ಷೇತ್ರಗಳಲ್ಲಿ ಅಭಿವೃದ್ಧಿ ಮಾಡೋಕೆ ಅನುದಾನ ಕೇಳ್ತಾಯಿದ್ದಾರೆ. ಆದ್ರೆ ಸರ್ಕಾರದ ಬಳಿ ಹಣ ಇಲ್ಲ. ಸರ್ಕಾರದಲ್ಲಿ ಅಭಿವೃದ್ಧಿಗೆ ಹಣ ಇಲ್ಲ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ನಿನ್ನೆ(ಗುರುವಾರ) ಯಲಬುರ್ಗಾ ತಾಲೂಕಿನ ಮಂಗಳೂರು ಗ್ರಾಮದಲ್ಲಿ 970 ಕೋಟಿ ಮೊತ್ತದ ಕೆರೆ ನಿರ್ಮಾಣದ ರೈತರ ಸಭೆಯಲ್ಲಿ ಮಾತನಾಡಿದ ಬಸವರಾಜ ರಾಯರೆಡ್ಡಿ ಅವರು, ನಮ್ಮ ಕ್ಷೇತ್ರಕ್ಕೆ ಮಾತ್ರ ಹಣ ಬಂದಿದೇ, ಗ್ಯಾರಂಟಿ ಯೋಜನೆ ನಮ್ಮನ್ನ ಮುಚ್ಚಿ ಬಿಟ್ಟಿದೆ. ನಾನು ಸಿಎಂ ಆರ್ಥಿಕ ಸಲಹೆಗಾರನಾಗಿದ್ದಿನಿ. ದಿನನಿತ್ಯ ಅಲ್ಲಿರೋದಕ್ಕೆ ನನ್ನ ಕ್ಷೇತ್ರಕ್ಕೆ ಹಣ ಬಂದಿದೆ. ಇಲ್ಲ ಅಂದ್ರೆ ಯಾವುದೇ ಕಾರಣಕ್ಕೂ ಹಣ ಬರ್ತಾಯಿರಲಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆ ದಂಧೆ ಆಗಿರೋದು ನಿಜ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಒಪ್ಪಿಗೆ
ಇದು ಒಂದೇ ಕೆಲಸ ಆಗಿರೋದು ಈ ರಾಜ್ಯದಲ್ಲಿ. ಯಾಕಂದ್ರೇ ಗ್ಯಾರಂಟಿನೇ ನಿಮ್ಮನ್ನ ಮುಚ್ಚಿ ಬಿಟ್ಟಿದೆ. 60 ರಿಂದ 65 ಸಾವಿರ ಕೋಟಿ ಹಣ ಕೊಡಬೇಕು ನಾವು, ಹಣ ಕೊಡೊದು ಎಷ್ಟು ತ್ರಾಸ್ ಇದೆ ಅನ್ನೋದು ನನಗೆ ಗೊತ್ತಿದೆ. ಹಣಕಾಸಿನ ಆಂತರಿಕ ವಿಚಾರ, ನನಗೆ ಮಾತ್ರ ಗೊತ್ತು ಎಂದ ರಾಯರೆಡ್ಡಿ ಹೇಳಿದ್ದಾರೆ. ಬಸವರಾಜ ರಾಯರೆಡ್ಡಿ ಹೇಳಿಕೆಯಿಂದ ರಾಜ್ಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.