ಸಿಎಂ ಸ್ಥಾನ ಯಾರಿಗಾದರೂ ಕೊಡಲಿ ನಾನು ನಮ್ಮ ತಾಲೂಕಿಗೆ ಏನು ಸೌಲಭ್ಯ ಬೇಕು ನೋಡುತ್ತೇನೆ. ಅದು ಬಿಟ್ಟು ರಾಜ್ಯ ರಾಜಕಾರಣ ನನಗೆ ಬೇಕಾಗಿಲ್ಲ, ರಾಜ್ಯದ ವಿಚಾರಗಳು ನನಗೆ ಗೊತ್ತಿಲ್ಲ, ನಾನು ಅದರ ಕುರಿತು ತಲೆನೂ ಕೆಡಿಸಿಕೊಳ್ಳುವುದಿಲ್ಲ ಎಂದ ಶಾಸಕ ಕೊತ್ತೂರು ಮಂಜುನಾಥ್ 

ಕೋಲಾರ(ಫೆ.26): ಮುಖ್ಯಮಂತ್ರಿ ಸ್ಥಾನ ಯಾರಿಗಾದರೂ ಕೊಡಲಿ ಬಿಡಲಿ ನಾನು ನನ್ನ ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸುವೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು. ನಗರದ ಕನ್ನಡ ಭವನದಲ್ಲಿ ತಾಲೂಕು ಮಟ್ಟದಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ಸಾಂಸ್ಕೃತಿಕ ಕಾರ್ಯವಿಧಾನ ಪರಿಣಾಮಕಾರಿಯಾಗಿ ಜಾರಿಗೆ ತಂದಿರುವ ಫಲಾನುಭವಿಗಳ ಸಮ್ಮೇಳನದ ಕಾರ್ಯಕ್ರಮದ ನಂತರ ಅವರು ಸುದ್ಧಿಗಾರರೊಂದಿಗೆ ಮಾತನಾಡಿದರು.

ರಾಜ್ಯ ರಾಜಕಾರಣ ಬೇಡ

ದಲಿತ ಸಿಎಂ ವಿಚಾರ ಕುರಿತು ಮಾತನಾಡಿದ ಅವರು, ಸಿಎಂ ಸ್ಥಾನ ಯಾರಿಗಾದರೂ ಕೊಡಲಿ ನಾನು ನಮ್ಮ ತಾಲೂಕಿಗೆ ಏನು ಸೌಲಭ್ಯ ಬೇಕು ನೋಡುತ್ತೇನೆ. ಅದು ಬಿಟ್ಟು ರಾಜ್ಯ ರಾಜಕಾರಣ ನನಗೆ ಬೇಕಾಗಿಲ್ಲ, ರಾಜ್ಯದ ವಿಚಾರಗಳು ನನಗೆ ಗೊತ್ತಿಲ್ಲ, ನಾನು ಅದರ ಕುರಿತು ತಲೆನೂ ಕೆಡಿಸಿಕೊಳ್ಳುವುದಿಲ್ಲ ಎಂದರು.

ಯುಗಾದಿ ನಂತರ‌ ರಾಜ್ಯದಲ್ಲಿ ಧಾರ್ಮಿಕ ಮುಖಂಡನ ಸಾವಾಗಲಿದ್ದು, ಒಳ್ಳೆಯ ಮಳೆ-ಬೆಳೆಯಾಗಲಿದೆ: ಕೋಡಿಶ್ರೀ ಸ್ಫೋಟಕ ಭವಿಷ್ಯ!

ಸಿಎಂ ಯಾರಾದರೂ ಆಗಬಹುದು ನನ್ನದೇನು ಅಭ್ಯಂತರ ಇಲ್ಲ, ಇನ್ನೂ ದಲಿತರಾಗುತ್ತಾರೋ ಇನ್ಯಾರೋ ಆಗುತ್ತಾರೋ ಅನ್ನೋದು ಇಲ್ಲ, ಕರ್ನಾಟಕಕ್ಕೆ ಈಗ ಸಿಎಂ ಆಗಿ ಸಿದ್ದರಾಮಯ್ಯ ಇದ್ದಾರೆ, ಅಷ್ಟೆ ಸಾಕು ಎಂದು ಹೇಳಿದರು.

ಜೆಡಿಎಸ್‌ ಶಾಸಕರು ಕಾಂಗ್ರೆಸ್‌ಗೆ?

ಕೋಲಾರ ಜಿಲ್ಲೆಯ ಜೆಡಿಎಸ್ ಇಬ್ಬರು ಶಾಸಕರು ಕಾಂಗ್ರೆಸ್‌ಗೆ ಬರ್ತಾರೆ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದನ್ನ ಸಮರ್ಥಿಸಿಕೊಂಡ ಅವರು, ಕಾಂಗ್ರೆಸ್‌ಗೆ ಬರುವುದಾಗಿ ಕೇಳಿರುವುದು ನಿಜ, ಇಲ್ಲದಿದ್ದರೆ ಅಧ್ಯಕ್ಷರು ನಮಗೆ ಯಾಕೆ ಕೇಳ್ತಾರೆ. ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಣ್ಣ ಅವರು ನಮ್ಮನ್ನ ಕರೆಸಿ ಯಾಕೆ ಮಾತನಾಡುತ್ತಿದ್ದರು, ಇವರು ಹೋಗಿರುವುದರಿಂದ ಕೇಳಿದ್ದಾರೆ, ನಾನೂ ಹೇಳಿದ್ದೇನೆ, ಈ ಕುರಿತು ಒರಿಜಿನಲ್ ವಾಸ್ತವಾಂಶ ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ಸೇರುವುದಾಗಿ ಹೋಗಿರುವುದು ನಿಜ ಎಂದು ಹೇಳಿದರು.