Council Election: ಕಾಂಗ್ರೆಸ್‌ನಲ್ಲಿ ದೇಶ ಮುನ್ನಡೆಸುವ ನಾಯಕರಿಲ್ಲ: ಆನಂದ್ ಸಿಂಗ್
* ಸಮುದಾಯದ ಹೆಸರು ಹೇಳಿ ವೋಟ್ ಬ್ಯಾಂಕ್ ರಾಜಕಾರಣ ಮುಂದುವರಿಸಿದ ಕಾಂಗ್ರೆಸ್
* ಅಲ್ಪಸಂಖ್ಯಾತ ಸಮುದಾಯದವರಿಗೆ ಕಾಂಗ್ರೆಸ್‌ನ ನಿಜಬಣ್ಣ ಈಗ ಗೊತ್ತಾಗುತ್ತಿದೆ
* ಗರೀಬಿ ಹಟಾವೋ ಘೋಷಣೆ ಜಾರಿ ಮಾಡದ ಕಾಂಗ್ರೆಸ್
ಕಂಪ್ಲಿ(ನ.26): ಕಾಂಗ್ರೆಸ್‌ಗೆ(Congress) ದೇಶದಲ್ಲಿ ನೆಲೆ ಇಲ್ಲವಾಗಿದ್ದು, ಆ ಪಕ್ಷಕ್ಕೆ ನಾಯಕರೇ ಇಲ್ಲದ ದಯನೀಯ ಪರಿಸ್ಥಿತಿ ಉಂಟಾಗಿದೆ ಎಂದು ಪ್ರವಾಸೋದ್ಯಮ ಸಚಿವರೂ ಆದ ಪರಿಸರ ಖಾತೆ ಸಚಿವ ಆನಂದ್ ಸಿಂಗ್(Anand Singh) ಟೀಕಿಸಿದ್ದಾರೆ.
ವಿಧಾನಪರಿಷತ್ ಚುನಾವಣೆ(Vidhan Parishat Election) ಹಿನ್ನೆಲೆ ಬಳ್ಳಾರಿ(Ballari) ಜಿಲ್ಲೆಯ ಕಂಪ್ಲಿ(Kampli) ತಾಲೂಕಿನಲ್ಲಿ ಗುರುವಾರ ಆಯೋಜಿಸಿದ್ದ ಚುನಾವಣಾ ಪ್ರಚಾರ(Campaign) ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ್‌ನಲ್ಲಿ ದೇಶವನ್ನು ಮುನ್ನಡೆಸುವಂತಹ ನಾಯಕರಿಲ್ಲ(Leader). ಯಜಮಾನನಿಲ್ಲದ ಸ್ಥಿತಿ ಕಾಂಗ್ರೆಸ್‌ನದ್ದು. ರಾಹುಲ್ ಗಾಂಧಿ(Rahul Gandhi) ಅಧ್ಯಕ್ಷ ಹುದ್ದೆ ಒಲ್ಲೆ ಎನ್ನುತ್ತಾರೆ. ಆ ಪಕ್ಷದಲ್ಲಿ ನಾಯಕರಿಲ್ಲದ ಕಾರಣ ರಾಹುಲ್ ಅವರನ್ನು ಬಲವಂತವಾಗಿ ಕೂರಿಸುವ ಪ್ರಯತ್ನ ನಡೆಯುತ್ತಿದೆ. ಇಂತಹ ಪಕ್ಷದದಿಂದ ಜನ ಯಾವುದೇ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ ಎಂದು ಛೇಡಿಸಿದರು.
Vidhan Parishat Election: ದೇಶಾದ್ಯಂತ ಕಾಂಗ್ರೆಸ್ ಪರ ಅಲೆ ಪ್ರಾರಂಭ: ಸಲೀಂ ಅಹ್ಮದ್
ನರೇಂದ್ರ ಮೋದಿ(Narendra Modi) ಹಾಗೂ ಬಿಜೆಪಿ(BJP) ಬಗ್ಗೆ ಮಾತನಾಡಲು ಕಾಂಗ್ರೆಸ್ ನಾಯಕರಿಗೆ ಯಾವುದೇ ವಿಷಯ ಸಿಗದ ಕಾರಣ ಅಲ್ಪಸಂಖ್ಯಾತ(Minority) ಸಮುದಾಯದ ಹೆಸರು ಹೇಳಿ ವೋಟ್ ಬ್ಯಾಂಕ್(Vote Bank) ರಾಜಕಾರಣವನ್ನು ಮುಂದುವರಿಸಿದ್ದಾರೆ. ಅಲ್ಪಸಂಖ್ಯಾತ ಸಮುದಾಯದವರಿಗೆ ಕಾಂಗ್ರೆಸ್‌ನ ನಿಜಬಣ್ಣ ಈಗ ಗೊತ್ತಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್‌ಗೆ ಮತ ಹಾಕಿದರೆ ಅದು ಕಸದ ಬುಟ್ಟಿಗೆ ಹಾಕಿದಂತೆ. ದೇಶದಲ್ಲಿ ಕಾಂಗ್ರೆಸ್ ಮುಳುಗಿದ ಹಡಗಿನಂತಾಗಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾಂಗ್ರೆಸ್‌ನವರು ಜನರ ಬಳಿ ಬರುತ್ತಾರೆ. ಜನತೆ ಬುದ್ಧಿವಂತರಿದ್ದು, ಪರಿಷತ್ ಚುನಾವಣೆಯಲ್ಲೂ ತಕ್ಕ ಪಾಠ ಕಲಿಸಲಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಈ ಬಾರಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಸಚಿವ ಆನಂದ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಪಕ್ಷದ ಅಭ್ಯರ್ಥಿ ವೈ.ಎಂ. ಸತೀಶ್, ಸಾರಿಗೆ ಸಚಿವ ಬಿ. ಶ್ರೀರಾಮುಲು, ಮಾಜಿ ಶಾಸಕ ಸುರೇಶ್ ಬಾಬು, ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಜಿಲ್ಲಾ ಉಪಾಧ್ಯಕ್ಷ ತಿಮ್ಮರೆಡ್ಡಿ, ಬುಡಾ ಮಾಜಿ ಅಧ್ಯಕ್ಷ ಕೆ.ಎ. ರಾಮಲಿಂಗಪ್ಪ, ಕಂಪ್ಲಿ ಮಂಡಲ ಅಧ್ಯಕ್ಷ ವೀರೇಶ್ ಗೌಡ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಗರೀಬಿ ಹಟಾವೋ ಘೋಷಣೆ ಜಾರಿ ಮಾಡದ ಕಾಂಗ್ರೆಸ್
ಕುರುಗೋಡು(Kurugodu): ಕಾಂಗ್ರೆಸ್ ಪಕ್ಷ ನೆಹರು ಕುಟುಂಬದ ಆಸ್ತಿಯಂತಾಗಿದೆ. ಅವರು ಬಿಟ್ಟರೆ ನಂತರದ ನಾಯಕರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ವ್ಯಂಗ್ಯವಾಡಿದರು.
ಪಟ್ಟಣದಲ್ಲಿ ವಿಧಾನಪರಿಷತ್ ಬಿಜೆಪಿ ಅಭ್ಯರ್ಥಿ ವೈ.ಎಂ. ಸತೀಶ್ ಪರವಾಗಿ ಮತಯಾಚನೆಗಾಗಿ ಗುರುವಾರ ಗ್ರಾಮ ಪಂಚಾಯಿತಿ ಸದಸ್ಯರ ಸಭೆಯಲ್ಲಿ ಮಾತನಾಡಿ, ಗರೀಬಿ ಹಟಾವೋ ಘೋಷಣೆ ಮಾಡಿ ಕೇಂದ್ರದಲ್ಲಿ 60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಜಾರಿಗೆ ಸಣ್ಣ ಪ್ರಯತ್ನವನ್ನೂ ಮಾಡಲಿಲ್ಲ ಎಂದು ಆರೋಪಿಸಿದರು.
Karnataka Council Election : ಅಭ್ಯರ್ಥಿ ಪರ ಪ್ರಚಾರಕ್ಕೆ ಎಚ್.ಡಿ.ದೇವೇಗೌಡ ಆಗಮನ
ಸಾರಿಗೆ ಸಚಿವ ಬಿ. ಶ್ರೀರಾಮುಲು(B Sriramulu) ಮಾತನಾಡಿ, ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ಮತ ಬ್ಯಾಂಕ್ ಮಾಡಿಕೊಂಡಿದೆ. ಸೌಲಭ್ಯ ಕೊಡುವ ಯಾವ ಪ್ರಯತ್ನ ಮಾಡದೆ ಕಡೆಗಣಿಸುತ್ತಾ ಬಂದಿದೆ ಎಂದು ಆರೋಪಿಸಿದರು.
ಮಾಜಿ ಶಾಸಕ ಟಿ.ಎಚ್. ಸುರೇಶ್ ಬಾಬು ಮಾತನಾಡಿದರು. ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ವೈ.ಎಂ. ಸತೀಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಮುಖಂಡರಾದ ಚಾನಾಳ್ ಆನಂದ್, ರಾಮಲಿಂಗಪ್ಪ, ತಿಮ್ಮಾರೆಡ್ಡಿ, ಮುರಾರಿ ಗೌಡ, ಮಹೇಶ್ ಗೌಡ, ಕೃಷ್ಣಮೂರ್ತಿ, ಗುತ್ತಿಗೆನೂರು ವಿರೂಪಾಕ್ಷಿ ಗೌಡ, ಬಳ್ಳಾರಿ ಎಪಿಎಂಸಿ ಸದಸ್ಯ ಪಿ. ಸೋಮಶೇಖರಗೌಡ, ವಿ.ಕೆ. ಬಸಪ್ಪ ಇತರರಿದ್ದರು.