Karnataka Council Election : ಅಭ್ಯರ್ಥಿ ಪರ ಪ್ರಚಾರಕ್ಕೆ ಎಚ್‌.ಡಿ.ದೇವೇಗೌಡ ಆಗಮನ

  • ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತುಮಕೂರು ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಅನಿಲ್‌ಕುಮಾರ್‌ ಅವರ ಪರ ಪ್ರಚಾರ 
  •  ಪ್ರಚಾರ ಮಾಡಲು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಆಗಮನ
HD Devegowda to Campaign For Tumakuru MLC candidate  Anil Kumar snr

  ಶಿರಾ (ನ.26):  ವಿಧಾನಸಭಾ ಚುನಾವಣೆ (MLC Election) ಹಿನ್ನೆಲೆಯಲ್ಲಿ ತುಮಕೂರು (Tumakuru) ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ (JDS) ಅನಿಲ್‌ ಕುಮಾರ್‌ (Anil kumar) ಅವರ ಪರ ಪ್ರಚಾರ ಮಾಡಲು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ (Former PM HD Devegowda) ಅವರು ಇಂದು ಶಿರಾ (Shira) ನಗರಕ್ಕೆ ಆಗಮಿಸಲಿದ್ದಾರೆ ಎಂದು ತಾಲೂಕು ಜೆಡಿಎಸ್‌ ಅಧ್ಯಕ್ಷ ಆರ್‌.ಉಗ್ರೇಶ್‌ ಹೇಳಿದರು. ನಗರದ ಜೆಡಿಎಸ್‌ (JDS) ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು ನಗರದ ಸೋಮೇಶ್ವರ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರು ಆಗಮಿಸಲಿದ್ದಾರೆ. ತಾಲೂಕಿನ ಗ್ರಾ.ಪಂ.ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವೆಗೌಡ ಅವರಿಗೆ ಗೌರವ ನೀಡುವ ಮೂಲಕ ಜೆಡಿಎಸ್‌ ಅಭ್ಯರ್ಥಿ ಅನಿಲ್‌ ಕುಮಾರ್‌ ಅವರ ಗೆಲುವಿಗೆ ಶ್ರಮಿಸಬೇಕು ಎಂದರು.

ಮಾಜಿ ಜಿ.ಪಂ. ಸದಸ್ಯ ಸಿ.ಆರ್‌.ಉಮೇಶ್‌ ಮಾತನಾಡಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಶಿರಾಕ್ಕೆ ಆಗಮಿಸಲಿದ್ದು, ಜೆಡಿಎಸ್‌ ಅಭ್ಯರ್ಥಿ ಅನಿಲ್‌ ಕುಮಾರ್‌ ಅವರ ಪರ ಮತಯಾಚನೆ (campaign) ಮಾಡಲಿದ್ದಾರೆ. ಈ ಹಿಂದೆ ತುಮಕೂರು (Tumakuru) ಲೋಕಸಭಾ ಚುನಾವಣೆಯಲ್ಲಿ (Loksabha Election) ದೇವೇಗೌಡ ಅವರು ಸೋತಿದ್ದ ನೋವನ್ನು ಮರೆಸಬೇಕೆಂದರೆ, ವಿಧಾನ ಪರಿಷತ್‌ ಚುನಾವಣೆಯಲ್ಲಿ (MLC Election) ಜೆಡಿಎಸ್‌ ಅಭ್ಯರ್ಥಿ ಅನಿಲ್‌ ಕುಮಾರ್‌ ಅವರನ್ನು ಗೆಲ್ಲಿಸಬೇಕು. ಆದ್ದರಿಂದ ಶಿರಾ ತಾಲೂಕಿನ ಗ್ರಾ.ಪಂ.ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜೆಡಿಎಸ್‌ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಜಿ.ಪಂ. ಉಪಾಧ್ಯಕ್ಷ ಮುದಿ ಮಡು ರಂಗಶಾಮಯ್ಯ, ಮಾಜಿ ತಾ.ಪಂ.ಅಧ್ಯಕ್ಷ ಸತ್ಯಪ್ರಕಾಶ್‌, ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ರೆಹಮತ್‌, ಮಹಿಳಾ ಘಟಕದ ಅಧ್ಯಕ್ಷೆ ರೇಣುಕಮ್ಮ, ನಗರ ಜೆಡಿಎಸ್‌ ಅಧ್ಯಕ್ಷ ಅಂಜಿನಪ್ಪ, ಮಾಜಿ ನಗರಸಭಾ ಸದಸ್ಯರಾದ ಆರ್‌.ರಾಘವೇಂದ್ರ, ಆರ್‌.ರಾಮು, ಮಾಜಿ ಟಿಎಪಿಸಿಎಂಎಸ್‌ ಅಧ್ಯಕ್ಷ ರವಿಶಂಕರ್‌, ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಟಿ.ಡಿ.ಮಲ್ಲೇಶ್‌, ಹೊನ್ನೇನಹಳ್ಳಿ ನಾಗರಾಜು, ಸೋಮಶೇಖರ್‌ ಸೇರಿ ಹಲವರಿದ್ದರು.

ರದ್ದಾಗುತ್ತಾ ನಾಮಪತ್ರ : 

ವಿಧಾನ ಪರಿಷತ್​ ಚುನಾವಣೆಗೆ (MLC Election) ಜೆಡಿಎಸ್​ (JDS) ಅಭ್ಯರ್ಥಿಯಾಗಿ ಎಚ್‌ಡಿ ರೇವಣ್ಣ(Suraj Revanna) ಅವರ ಪುತ್ರ ಡಾ. ಸೂರಜ್​ ರೇವಣ್ಣ ಸಲ್ಲಿಸಿರುವ ನಾಮಪತ್ರ ರದ್ದಾಗುತ್ತಾ? ಎನ್ನುವ ಆತಂಕ ದಳಪತಿಗಳಿಗೆ ಶುರುವಾಗಿದೆ.

ಹೌದು...ನಾಮಪತ್ರದೊಂದಿಗೆ ಸೂರಜ್​ ರೇವಣ್ಣ ಸಲ್ಲಿಸಿರುವ ಅಫಿಡವಿಟ್​ನಲ್ಲಿ ತಮ್ಮ ಪತ್ನಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನೂ ಮರೆಮಾಚಿದ್ದಾರೆ ಎಂದು ವಕೀಲ ಜಿ.ದೇವರಾಜೇಗೌಡ ಅವರು ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಇಂದು(ನ.25) ಸುದ್ದಿಗಾರರೊಂದಿಗೆ ಮಾತನಾಡಿದ ವಕೀಲ ಜಿ.ದೇವರಾಜೇಗೌಡ, ನಾಮಪತ್ರದೊಂದಿಗೆ (Nomination) ಸೂರಜ್​ ರೇವಣ್ಣ ಸಲ್ಲಿಸಿರುವ ಅಫಿಡವಿಟ್​ನಲ್ಲಿ ತಮ್ಮ ಪತ್ನಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನೂ ಮರೆಮಾಚಿದ್ದಾರಂತೆ. ಜತೆಗೆ ಅವರ ಹೆಸರಿನ ಚಾಲ್ತಿ ಖಾತೆಯೊಂದರ ಹಣದ ವಿವರವನ್ನೂ ಮುಚ್ಚಿಟ್ಟಿದ್ದಾರಂತೆ ಎಂದರು.

ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದೇನೆ. ಅವರು ಕ್ರಮ ಕೈಗೊಳ್ಳದಿದ್ದರೆ ಶುಕ್ರವಾರ ಬೆಳಗ್ಗೆ ಹೈಕೋರ್ಟ್​ನಲ್ಲಿ ಚುನಾವಣಾ ತಕರಾರು ಅರ್ಜಿ ಸಲ್ಲಿಸುತ್ತೇನೆ. ಜನಪ್ರತಿನಿಧಿ ಕಾಯ್ದೆಯ ಅನ್ವಯ ಸೂರಜ್​ ಮಾಡಿರುವುದು ಅಪರಾಧವಾಗುತ್ತದೆ. ಅವರ ನಾಮಪತ್ರ ತಿರಸ್ಕೃತ ಆಗಬೇಕಾಗುತ್ತದೆ ಎಂದು ಹೇಳಿದರು.

2017ರ ಮಾರ್ಚ್​ 17ರಂದು ಸೂರಜ್​ ಅದ್ದೂರಿಯಾಗಿ ಮದುವೆಯಾಗಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. ಅವರ ಮದುವೆಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿದೆ. ಆದರೆ, ಅಫಿಡವಿಟ್​ನಲ್ಲಿ ಪತ್ನಿಯ ಮಾಹಿತಿ ನಮೂದಿಸುವ ಸ್ಥಳದಲ್ಲಿ ಅನ್ವಯಿಸುವುದಿಲ್ಲ ಎಂದು ಬರೆದಿದ್ದಾರೆ. ಅಲ್ಲದೆ, ಹೊಳೆನರಸೀಪುರದ ಕರ್ಣಾಟಕ ಬ್ಯಾಂಕ್​ ಚಾಲ್ತಿ ಖಾತೆ ಸಂಖ್ಯೆ 608ರ ಹಣದ ಮಾಹಿತಿಯನ್ನೂ ಮುಚ್ಚಿಟ್ಟಿದ್ದಾರೆ ದೂರಿದ್ದಾರೆ.

Latest Videos
Follow Us:
Download App:
  • android
  • ios