ಕಾರವಾರ- ಅಂಕೋಲಾ‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ್ ಪರವಾಗಿ ಗೋವಾ ರಾಜ್ಯದ ಕೇಂದ್ರ ಸಚಿವ ಶ್ರೀಪಾದ ನಾಯ್ಕ ಭರ್ಜರಿ ಪ್ರಚಾರಕ್ಕಿಳಿದಿದ್ದಾರೆ.

ಉತ್ತರ ಕನ್ನಡ (ಏ.26): ಕಾರವಾರ- ಅಂಕೋಲಾ‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ್ ಪರವಾಗಿ ಗೋವಾ ರಾಜ್ಯದ ಕೇಂದ್ರ ಸಚಿವ ಶ್ರೀಪಾದ ನಾಯ್ಕ ಭರ್ಜರಿ ಪ್ರಚಾರಕ್ಕಿಳಿದಿದ್ದಾರೆ. ನಿನ್ನೆ‌ ಗೋವಾ ಶಾಸಕ ಪ್ರೇಮೆಂದ್ರ ಶೇಟ್‌, ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ್, ಎಂಎಲ್‌ಸಿ ಗಣಪತಿ ಉಳ್ವೇಕರ್ ಹಾಗೂ ಬಿಜೆಪಿ ವಕ್ತಾರ ನಾಗರಾಜ ನಾಯ್ಕ್ ಉಪಸ್ಥಿತಿಯಲ್ಲಿ ಹೋಟೆಲ್ ಮಾಲೀಕರ ಸಭೆ ನಡೆಸಿದ ಕೇಂದ್ರ ಸಚಿವ ಶ್ರೀಪಾದ ನಾಯ್ಕ್, ಇಂದು ಕಾರವಾರ ನಗರ, ಬೈತ್‌ಕೋಲಾ ಹಾಗೂ ಗೌಡ್ರಕೇರಿಯಲ್ಲಿ ರೂಪಾಲಿ ನಾಯ್ಕ್ ಪರವಾಗಿ ಪ್ರಚಾರ ನಡೆಸಿದ್ದಾರೆ. 

ಅಲ್ಲದೇ, ಮತ್ತೆ ರೂಪಾಲಿ ನಾಯ್ಕ್ ಅವರನ್ನು ಭಾರೀ ಬಹುಮತದಿಂದ ಗೆಲ್ಲಿಸಿ, ರಾಜ್ಯದಲ್ಲಿ ಬಿಜೆಪಿ ಹಾಗೂ ಕೇಂದ್ರದಲ್ಲಿ ನರೇಂದ್ರ ಮೋದಿಯವರ ಕೈ ಗಟ್ಟಿಗೊಳಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ರೂಪಾಲಿ ಎಸ್.‌ನಾಯ್ಕ್ ಮಾತನಾಡಿ, ಹಿಂದಿನ ಸರ್ಕಾರಗಳು ಮೀನುಗಾರ, ಹಾಲಕ್ಕಿ ಹೀಗೆ ವಿವಿಧ ಸಮಾಜವನ್ನು ಕಡೆಗಣಿಸಿದೆ. ನಮ್ಮ ಡಬಲ್‌ ಇಂಜಿನ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅನೇಕ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಮೀನುಗಾರ ಸಮಾಜದವರಿಗೆ ಕೂಡ ಕೃಷಿಕರ ಮಾದರಿಯಲ್ಲಿ ಕಿಸಾನ್ ಕಾರ್ಡ್‌ನ್ನು ನೀಡಿದ್ದೇವೆ. ಮೀನುಗಾರ ಸಮಾಜದವರಿಗೆ ಯಾವುದೇ ರೀತಿಯ ಅನ್ಯಾಯವನ್ನು ಮಾಡಿಲ್ಲ. 

ಅಮಿತ್ ಶಾ ಮಾತನಾಡಿದ್ರು ವಿಶ್ವಾಸ ದ್ರೋಹ ಮಾಡಿ ಶೆಟ್ಟರ್ ಹೋಗಿದ್ದಾರೆ: ಬಿ.ಎಸ್.ಯಡಿಯೂರಪ್ಪ

ನನ್ನ ವಿರುದ್ಧ ಅಪಪ್ರಚಾರ ಮಾಡಿ ಸಾಗರ ಮಾಲಾ ಯೋಜನೆಯಲ್ಲಿ ಅಮಾಯಕರನ್ನು ಬಳಸಿಕೊಂಡರು. ನನ್ನ ಕ್ಷೇತ್ರದ ಜನರಿಗೆ ಯಾವುದು ಅವಶ್ಯಕವೋ ಅದರ ಪರವಾಗಿ ನಾನು ಇರುತ್ತೇನೆ. ಅವರಿಗೆ ಬೇಡವಾದಲ್ಲಿ ನಾನು ಅದನ್ನು ವಿರೋಧಿಸುತ್ತೇನೆ. ಈ ಬಾರಿ ಕಾರವಾರ ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿದ್ದು, ನಾಗರಿಕ ವಿಮಾನ‌ ನಿಲ್ದಾಣ ನಿರ್ಮಾಣಕ್ಕೆ ಮೀಸಲಿರಿಸಿರುವ ಜಾಗದಲ್ಲಿ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ಸಂಬಂಧಿಸಿ ಚುನಾವಣಾಧಿಕಾರಿಗಳ‌ ಗಮನಕ್ಕೆ ತಂದಿದ್ದು, ನೇವಿಯವರಿಗೂ ಪತ್ರ ಬರೆಯಲಾಗಿದೆ. ಈ ಕಾರ್ಯಕ್ರಮಕ್ಕೆ ಯಶಸ್ವಿಯಾಗಿ ನಡೆಯಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು. 

ಪಿಯುಸಿ ಪೂರಕ ಪರೀಕ್ಷೆ ತೆಗೆದುಕೊಳ್ಳೋರೂ ಸಿಇಟಿ ಬರೆಯಬೇಕು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಕಾರ್ಯಕ್ರಮದಲ್ಲಿ ವಿಧಾನಪರಿಷತ್‌ ಶಾಸಕರಾದ ಗಣಪತಿ ಉಳ್ವೇಕರ, ಗೋವಾ ಶಾಸಕ ಪ್ರೇಮೆಂದ್ರ ಶೇಟ್‌, ಮಂಡಲಾಧ್ಯಕ್ಷರಾದ ನಾಗೇಶ ಕುರ್ಡೇಕರ, ನಿತಿನ್ ಪಿಕಳೆ, ಜಿಲ್ಲಾ ವಕ್ತಾರರಾದ ನಾಗರಾಜ ನಾಯಕ, ಪ್ರಮುಖರಾದ ಮನೋಜ ಭಟ್‌ ಮತ್ತಿತರರು ಭಾಗವಹಿಸಿದ್ದರು. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.