ಗ್ಯಾರಂಟಿ ಯೋಜನೆಗಳಿಂದ ರಾಜ್ಯಕ್ಕೆ ಆರ್ಥಿಕ ಹೊಡೆತವಿಲ್ಲ: ಬಸವರಾಜ ರಾಯರೆಡ್ಡಿ

ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸ್ಥಿತಿ ಕುಂಠಿತವಾಗಿಲ್ಲ. 6.90 ಕೋಟಿ ಜನರಿಗೆ ₹1 ಲಕ್ಷ ಕೋಟಿ ನೀಡುತ್ತಿದ್ದೇವೆ. 7.10 ಲಕ್ಷ ನೌಕರರಿಗೆ ಸರಿಸುಮಾರು ₹96 ಲಕ್ಷ ಕೋಟಿ ನೀಡಲಾಗುತ್ತದೆ. ಹೀಗಿರುವಾಗ ಜನರಿಗೆ ಗ್ಯಾರಂಟಿ ಯೋಜನೆ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ; ಮುಂದುವರಿಸುತ್ತೇವೆ: ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ 

no Financial blow to the Karnataka from Guarantee Schemes Says Basavaraj Rayareddy grg

ಕೊಪ್ಪಳ(ಜ.27):  ಗ್ಯಾರಂಟಿ ಯೋಜನೆಗಳಿಂದ ರಾಜ್ಯಕ್ಕೆ ಆರ್ಥಿಕ ಹೊಡೆತವಿಲ್ಲ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸ್ಪಷ್ಟಪಡಿಸಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸ್ಥಿತಿ ಕುಂಠಿತವಾಗಿಲ್ಲ. 6.90 ಕೋಟಿ ಜನರಿಗೆ ₹1 ಲಕ್ಷ ಕೋಟಿ ನೀಡುತ್ತಿದ್ದೇವೆ. 7.10 ಲಕ್ಷ ನೌಕರರಿಗೆ ಸರಿಸುಮಾರು ₹96 ಲಕ್ಷ ಕೋಟಿ ನೀಡಲಾಗುತ್ತದೆ. ಹೀಗಿರುವಾಗ ಜನರಿಗೆ ಗ್ಯಾರಂಟಿ ಯೋಜನೆ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ; ಮುಂದುವರಿಸುತ್ತೇವೆ ಎಂದರು.

ನಾವು ಗ್ಯಾರಂಟಿ ಬಂದ್ ಮಾಡಿದರೆ ಜನ ಸುಮ್ಮನಿರುತ್ತಾರಾ? ಕೊಟ್ಟಿದ್ದನ್ನು ನಿಲ್ಲಿಸಲು ಆಗುವುದಿಲ್ಲ, ಮುಂದೆಯೂತೆಗೆಯಬಾರದು. ಗ್ಯಾರಂಟಿಯಿಂದ ಹಣದ ಭಾರವಿದೆ, ಆದರೆ ಅದಕ್ಕೆ ಪರಿಹಾರ ಹುಡುಕಿಕೊಂಡಿದ್ದೇವೆ ಎಂದರು.

ಪಕ್ಷ ವಿರೋಧಿಗಳನ್ನು ಕುತ್ತಿಗೆ ಹಿಡಿದು ಆಚೆ ಹಾಕಿ: ಮಾಜಿ ಸಚಿವ ಇಕ್ಬಾಲ್ ಅನ್ಸಾರಿ

ಶೆಟ್ಟರ್ ಸ್ಟ್ಯಾಂಡರ್ಡ್ ಇಟ್ಕೋಬೇಕಿತ್ತು: 

ಬಿಜೆಪಿ ಟಿಕೆಟ್ ನೀಡದೇ ಇದ್ದಾಗ ಜಗದೀಶ್ ಶೆಟ್ಟರ್‌ನಮ್ಮ ಪಕ್ಷಕ್ಕೆ ಬರಬಾರದಿತ್ತು. ಬಂದ ಮೇಲೆ ಮರಳಿ ಹೋಗಬಾರದಿತ್ತು. ಶೆಟ್ಟರ್‌ಒಂದು ಸ್ಟ್ಯಾಂಡರ್ಡ್ ಇನ್ನೊಬೇಕಿತ್ತು ಎಂದು ಬಸವರಾಜ ರಾಯರಡ್ಡಿ ಹೇಳಿದರು.

ಕಾಂಗ್ರೆಸ್ ಗೆ ಬಂದಿದ್ದು ಆತುರದ ನಿರ್ಧಾರ, ಹೋಗಿದ್ದು ಕೂಡ ಆತುರದ ನಿರ್ಧಾರವಾಗಿದೆ. ಸೋತ ಮೇಲೆಯೂ ಎಂಎಲ್‌ಸಿ ಮಾಡಿದ್ದರು. ಶೆಟ್ಟರ್‌ಹೀಗೆ ಮಾಡಬಾರದಿತ್ತು. ರಾಜಕಾರಣ ಕೆಳಮಟ್ಟದಲ್ಲಿದೆ. ಯಾವ ಪಕ್ಷದಲ್ಲಿ ಕೂಡ ನೈತಿಕತೆ ಮೌಲ್ಯ ಉಳಿದಿಲ್ಲ. ಬಿಜೆಪಿಯಲ್ಲಿ ಇಲ್ಲವೇ ಇಲ್ಲ ಎಂದರು. ಇವತ್ತಿನ ನಮ್ಮ ಸಂಖ್ಯಾ ಬಲದಲ್ಲಿ ನಮ್ಮನ್ನು ಯಾರೂ ಅಲುಗಾಡಿ ಸಲು ಆಗಲ್ಲ ಎಂದರು. 

Latest Videos
Follow Us:
Download App:
  • android
  • ios