Asianet Suvarna News Asianet Suvarna News

ಆಪರೇಷನ್‌ ಹಸ್ತ ಅಗತ್ಯವಿಲ್ಲ, ಪಕ್ಷಕ್ಕೆ ಬರೋರ ತಡೆಯಲ್ಲ: ಡಿ.ಕೆ.ಶಿವಕುಮಾರ್‌

ಇನ್ನೂ ಒಬ್ಬ ವಿರೋಧ ಪಕ್ಷದ ನಾಯಕನನ್ನ ಆಯ್ಕೆ ಮಾಡೋಕೂ ಅವರಿಗೆ ಆಗ್ತಿಲ್ಲ, ಪ್ರಧಾನಿ ಮೋದಿ ಬರುವ ವಿಚಾರವನ್ನೇ ಆರ್‌.ಅಶೋಕ್‌ಗೆ ತಿಳಿಸಿಲ್ಲ, ಪ್ರಧಾನ ಮಂತ್ರಿಗಳ ಕಚೇರಿಯಿಂದ ಗವರ್ನರ್‌ ಬರು ವುದು ಬೇಡ, ಸಿಎಂ, ಡಿಸಿಎಂ ಯಾರೂ ಬರೋದು ಬೇಡ ಎಂದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ 

No Congress Operation Required in Karnataka Says DCM DK Shivakumar grgs
Author
First Published Aug 27, 2023, 12:30 AM IST

ಚಾಮರಾಜನಗರ(ಆ.27):  ನಮ್ಮ ಪಕ್ಷಕ್ಕೆ ಪೂರ್ಣ ಮೆಜಾರಿಟಿ ಇದೆ. ಆದ್ದರಿಂದ ನಮಗೆ ಆಪರೇಷನ್‌ ಹಸ್ತದ ಅವಶ್ಯಕತೆಯಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಸ್ವ ಇಚ್ಚೆಯಿಂದ ಪಕ್ಷಕ್ಕೆ ಬರುವವರನ್ನು ತಡೆಯಲಾಗಲ್ಲ, ನಮ್ಮ ಮೇಲೆ ವಿಶ್ವಾಸ ಇಟ್ಟವರಿಗೆ ನಾವು ಕೂಡ ವಿಶ್ವಾಸ ತೋರಿಸ ಬೇಕಾಗುತ್ತದೆ ಎಂದರು. ಪ್ರಧಾನಿ ನರೇಂದ್ರ ಮೋದಿ ಭೇಟಿ ವೇಳೆ ಶಿಷ್ಟಾಚಾರ ಪಾಲಿಸಿಲ್ಲ ಎಂಬ ಬಿಜೆಪಿ ನಾಯಕ ಆರ್‌.ಅಶೋಕ್‌ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಇನ್ನೂ ಒಬ್ಬ ವಿರೋಧ ಪಕ್ಷದ ನಾಯಕನನ್ನ ಆಯ್ಕೆ ಮಾಡೋಕೂ ಅವರಿಗೆ ಆಗ್ತಿಲ್ಲ, ಪ್ರಧಾನಿ ಮೋದಿ ಬರುವ ವಿಚಾರವನ್ನೇ ಆರ್‌.ಅಶೋಕ್‌ಗೆ ತಿಳಿಸಿಲ್ಲ, ಪ್ರಧಾನ ಮಂತ್ರಿಗಳ ಕಚೇರಿಯಿಂದ ಗವರ್ನರ್‌ ಬರು ವುದು ಬೇಡ, ಸಿಎಂ, ಡಿಸಿಎಂ ಯಾರೂ ಬರೋದು ಬೇಡ ಅಂದಿದ್ದಾರೆ. 

ಕಾವೇರಿ ಗಲಭೆ ತಡೆಗೆ ನಿಯೋಜನೆಗೊಂಡಿದ್ದ ಮುಖ್ಯಪೇದೆ ಹೃದಯಾಘಾತದಿಂದ ಸಾವು!

ನಮಗೆ ಸಮಯ ಪ್ರಜ್ಞೆ, ವ್ಯವಹಾರ ಪ್ರಜ್ಞೆ ಎರಡೂ ಇದೆ, ಪ್ರೊಟೋಕಾಲೂ ಗೊತ್ತಿದೆ ಆದರೆ, ಅವರದೇ ಪಕ್ಷದ ನಾಯಕರಿಗೆ ಇದರ ಮಾಹಿತಿ ಇಲ್ಲ ಎಂದು ಹರಿಹಾಯ್ದರು.

Follow Us:
Download App:
  • android
  • ios