ಎಚ್ಡಿಕೆ ಸಿಎಂ ಆಗುವುದು ಸೂರ‍್ಯ ಚಂದ್ರರಿರುವಷ್ಟೇ ಸತ್ಯ: ನಿಖಿಲ್‌ ಕುಮಾರಸ್ವಾಮಿ

ಯಾರೂ ಏನೇ ಕುತಂತ್ರ ಮಾಡಿದರೂ ಕುಮಾರಣ್ಣ ಈ ಬಾರಿ ಇಪ್ಪತ್ತಲ್ಲ ಐವತ್ತು ಸಾವಿರ ಮತಗಳ ಲೀಡ್‌ ಪಡೆದು ಜಯಭೇರಿ ಬಾರಿಸಲಿದ್ದಾರೆ ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ಗೆ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಪರೋಕ್ಷವಾಗಿ ಟಾಂಗ್‌ ನೀಡಿದರು.

Nikhil Kumaraswamy Slams On CP Yogeshwar At Channapatna gvd

ಚನ್ನಪಟ್ಟಣ (ಡಿ.05): ಈ ಜಗತ್ತಿನಲ್ಲಿ ಸೂರ್ಯಚಂದ್ರರಿರುವುದು ಎಷ್ಟುಸತ್ಯವೋ ಮುಂದಿನ ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದೂ ಕೂಡ ಅಷ್ಟೇ ಸತ್ಯ. ಯಾರೂ ಏನೇ ಕುತಂತ್ರ ಮಾಡಿದರೂ ಕುಮಾರಣ್ಣ ಈ ಬಾರಿ ಇಪ್ಪತ್ತಲ್ಲ ಐವತ್ತು ಸಾವಿರ ಮತಗಳ ಲೀಡ್‌ ಪಡೆದು ಜಯಭೇರಿ ಬಾರಿಸಲಿದ್ದಾರೆ ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ಗೆ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಪರೋಕ್ಷವಾಗಿ ಟಾಂಗ್‌ ನೀಡಿದರು.

ತಾಲೂಕಿನ ಕೂಡ್ಲೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪಕ್ಷ ಸೇರ್ಪಡೆ ಕಾರ‍್ಯಕ್ರಮದಲ್ಲಿ ಮಾತನಾಡಿದ ಅವರು, ರೈತರ ಸಾಲ ಮನ್ನಾ ಮಾಡಿ ರೈತರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದ ಕುಮಾರಸ್ವಾಮಿಯವರ ಸರ್ಕಾರವನ್ನು ಕೆಲವರೊಂದಿಗೆ ಸೇರಿ ಇಲ್ಲಿನ ಮಾಜಿ ಶಾಸಕರೊಬ್ಬರು ಕೆಡವಿದರು. ಅದರೆ, ಮುಂದಿನ ಬಾರಿ ಎಚ್‌ಡಿಕೆ ಮತ್ತೊಮ್ಮೆ ರಾಜ್ಯದ ಸಿಎಂ ಆಗಲಿದ್ದು, ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಾಣಕೊಟ್ಟು ಹೋರಾಡಿ ಪಕ್ಷ ಗೆಲ್ಲಿಸುತ್ತೇವೆ: ಎಚ್‌.ಡಿ.ದೇವೇಗೌಡ

40% ಸರ್ಕಾರ ಬರಲು ಕಾರಣಕರ್ತ: ಉತ್ತಮ ಆಡಳಿತ ನೀಡುತ್ತಿದ್ದ ಕುಮಾರಸ್ವಾಮಿಯವರ ಸರ್ಕಾರವನ್ನು ವಾಮಮಾರ್ಗದಲ್ಲಿ ಬೀಳಿಸಿದ ಇಲ್ಲಿ ಮಾಜಿ ಶಾಸಕರು ಆ ಮೂಲಕ ರಾಜ್ಯದಲ್ಲಿ 40% ಸರ್ಕಾರ ಬರಲು ಕಾರಣಕರ್ತರಾದರು. ಆದರೆ, ಈ ಬಾರಿ ಪರಿಸ್ಥಿತಿ ಬೇರೆ ಇದ್ದು, ಕುಮಾರಸ್ವಾಮಿಯವರ ಹಿಂದಿನ ಆಡಳಿತವನ್ನು ಮೆಚ್ಚಿರುವ ರಾಜ್ಯದ ಜನರು ಮತ್ತೊಮ್ಮೆ ಅವರನ್ನು ಸಿಎಂ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿಸಿದರು.

ಕ್ಷೇತ್ರದ ಅಭಿವೃದ್ಧಿ: ಕುಮಾರಸ್ವಾಮಿ ಕ್ಷೇತ್ರದ ಶಾಸಕರಾದ ನಂತರ ಹಿಂದೆಂದು ಕಾಣದಷ್ಟುಅಭಿವೃದ್ಧಿ ಕಾರ‍್ಯಗಳನ್ನು ಮಾಡಿದ್ದಾರೆ. ಕ್ಷೇತ್ರವನ್ನು ಇನ್ನಷ್ಟುಅಭಿವೃದ್ಧಿಗೊಳಿಸಲು ಕ್ಷೇತ್ರ ಮತದಾರರು ಅವರಿಗೆ ಶಕ್ತಿ ತುಂಬಬೇಕು. ಇಲ್ಲಿನ ಮಾಜಿ ಶಾಸಕರು ಬಿಜೆಪಿಯಿಂದಲೋ, ಕಾಂಗ್ರೆಸ್‌ನಿಂದಲೂ ಇಲ್ಲ ಪಕ್ಷೇತರಾಗೋ ಎಲ್ಲಿಂದ ಬೇಕಾದರೂ ಸ್ಪರ್ಧಿಸಲಿ ಮುಂದಿನ ಚುನಾವಣೆಯಲ್ಲಿ ಅವರಿಗೆ ತಕ್ಕ ಉತ್ತರ ಸಿಗಲಿದೆ ಎಂದು ಪರೋಕ್ಷವಾಗಿ ಸಿಪಿವೈಗೆ ಟಾಂಗ್‌ ನೀಡಿದರು.

ಕೆಲವರು ತಮಗೆ ಬೇಕಾದವರಿಗೆ ಪಕ್ಷದ ಶಾಲು ಹೊಂದಿಸಿ, ಮಾಧ್ಯಮಗಳ ಮುಂದೆ ಪಕ್ಷ ಸೇರ್ಪಡೆ ಪ್ರಚಾರ ಗಿಟ್ಟಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಆದರೆ, ಇದರಿಂದ ಯಾವುದೇ ಪ್ರಯೋಜನವಿಲ್ಲ. ಇಂದು ಕೂಡ್ಲೂರಿನಲ್ಲಿ ನಡೆಯುತ್ತಿರುವುದು ನಿಜವಾದ ಪಕ್ಷ ಸೇರ್ಪಡೆ ಕಾರ‍್ಯಕ್ರಮ. ಕುಮಾರಣ್ಣನ ಆಡಳಿತವನ್ನು ಮೆಚ್ಚಿರುವ ನೂರಾರು ಮಂದಿ ಇಂದು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಜೆಡಿಎಸ್‌ ಸೇರ್ಪಡೆಗೊಳ್ಳಲು ಪ್ರತಿ ಹಳ್ಳಿಗಳಲ್ಲೂ ಜನ ಉತ್ಸುಕರಾಗಿದ್ದು, ಮುಂದಿನ ದಿನಗಳಲ್ಲಿ ಇಂತ ಇನ್ನಷ್ಟುಕಾರ‍್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ಪಂಚರತ್ನ ಯೋಜನೆ: ಬಡವರು, ರೈತರ ಅಭಿವೃದ್ಧಿಗಾಗಿ ಕುಮಾರಸ್ವಾಮಿಯರವರು ತಮ್ಮದೇ ಆದ ಕಲ್ಪನೆಗಳನ್ನು ಇಟ್ಟುಕೊಂಡಿದ್ದಾರೆ. ರಾಜ್ಯದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಪಂಚರತ್ನ ಯೋಜನೆ ರೂಪಿಸಿರುವ ಅವರು, ತಮ್ಮ ಯೋಜನೆಗಳ ಕುರಿತು ಜನರಿಗೆ ಮನದಟ್ಟು ಮಾಡಿಕೊಡುವ ಉದ್ದೇಶದಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಅವರ ಪ್ರತಿನಿಧಿಯಾಗಿ ನಾನಿರಲಿದ್ದು, ನಿಮ್ಮ ಯಾವುದೇ ಕುಂದುಕೊರೆತೆಗಳಿದ್ದರೂ ಅದನ್ನು ಅವರಿಗೆ ತಲುಪಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ನಾವು ಜಾತಿ, ಧರ್ಮಕ್ಕೆ ಸೀಮಿತವಲ್ಲ: ನಿಖಿಲ್‌ ಕುಮಾರಸ್ವಾಮಿ

ಕಾರ‍್ಯಕ್ರಮದಲ್ಲಿ ಜೆಡಿಎಸ್‌ ತಾಲೂಕು ಅಧ್ಯಕ್ಷ ಎಚ್‌.ಸಿ.ಜಯಮುತ್ತು, ಮುಖಂಡ ಎಂ.ಸಿ.ಕರಿಯಪ್ಪ, ಒಕ್ಕಲಿಗರ ಸಂಘದ ನಿರ್ದೇಶಕ ಹಾಪ್‌ ಕಾಮ್ಸ್‌ ದೇವರಾಜು, ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಗೋವಿಂದನಹಳ್ಳಿ ನಾಗರಾಜು, ಮುಖಂಡರಾದ ನಿಸರ್ಗ ಲೋಕೇಶ್‌, ಬೋರ್‌ವೆಲ್‌ ರಾಮಚಂದ್ರು, ಎಂಜಿಕೆ ಪ್ರಕಾಶ್‌, ಕೂಡ್ಲೂರು ವೆಂಕಟೇಶ್‌, ಮಳೂರುಪಟ್ಟಣ ರವಿ, ಕೂಡ್ಲೂರು ಗ್ರಾಪಂ ಅಧ್ಯಕ್ಷ ಗೋವಿಂದೇಗೌಡ ಇತರರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios