Asianet Suvarna News Asianet Suvarna News

ಲೋಕಸಭಾ ಚುನಾವಣೆಗೆ ನಾನೂ ನಿಲ್ಲೊಲ್ಲ, ನಿಖಿಲ್‌ ಕೂಡ ಸ್ಪರ್ಧಿಸೊಲ್ಲ: ಮಾಜಿ ಸಿಎಂ ಕುಮಾರಸ್ವಾಮಿ!

ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ನಾನು ಹಾಗೂ ನನ್ನ ಪುತ್ರ ನಿಖಿಲ್ ಕುಮಾರಸ್ವಾಮಿ ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ.

Nikhil Kumaraswamy and i will not contest for Lok Sabha elections said Former CM Kumaraswamy sat
Author
First Published Dec 21, 2023, 1:21 PM IST

ನವದೆಹಲಿ  (ಡಿ.21): ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ ಹಾಗೂ ನನ್ನ ಪುತ್ರ ನಿಖಿಲ್ ಕುಮಾರಸ್ವಾಮಿ ಕೂಡ ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ. ಆದರೆ, 20 ಲೋಕಸಭಾ ಕ್ಷೇತ್ರಗಳಲ್ಲಿಯೂ ಪ್ರಚಾರ ಕಾರ್ಯಗಳಲ್ಲಿ ಇಬ್ಬರೂ ಭಾಗಿಯಾಗುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿಖಿಲ್ 28 ಲೋಕಸಭಾ ಕ್ಷೇತ್ರದಲ್ಲಿ ಸಂಚಾರ ಮಾಡ್ತಾರೆ. ಯಾವುದೇ ಕಾರಣಕ್ಕೂ ಚುನಾವಣೆಗೆ ನಿಲ್ಲಲ್ಲ. ಆದರೆ, ಜನರೇ ನಿಲ್ಲಬೇಕು ಅಂತ ಹೇಳುತ್ತಿದ್ದಾರೆ. ನಿಖಿಲ್ 2ನೇ ಬಾರಿ ಚುನಾವಣೆಯಲ್ಲಿ ಸೋತಿದ್ದಾರೆಂಬ ಅನುಕಂಪದ ಅಲೆಯಿದ್ದು, ಮಂಡ್ಯದಲ್ಲಿ ಸ್ಪರ್ಧೆ ಮಾಡಲಿ ಎಂದು ಹೇಳುತ್ತಿದ್ದಾರೆ. ಜನರಿಗೆ ನಿಖಿಲ್ ಬಗ್ಗೆ ಅನುಕಂಪ ಇದೆ. ಆದ್ರೆ ನಿಖಿಲ್ ಅಭ್ಯರ್ಥಿ ಆಗೋ ಬಗ್ಗೆ ಪಕ್ಷದಲ್ಲಿ ತೀರ್ಮಾನ ಆಗಿಲ್ಲ. ಸೀಟ್ ಹಂಚಿಕೆ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಯಾವ ಯಾವ ಕ್ಷೇತ್ರದಲ್ಲಿ ಯಾರ್ಯಾರು ನಿಲ್ತಾರೆ ಅಂತ ನಾವು ಫೈನಲ್ ಮಾಡ್ತೇವೆ. ಅದರ ಬಗ್ಗೆ ಸಮಸ್ಯೆಯಿಲ್ಲ. ಒಂದು ಸೀಟ್ ಹೆಚ್ಚು ಕಮ್ಮಿ ಆಗುತ್ತದೆ, ಅದರಲ್ಲಿ ಏನು ಸಮಸ್ಯೆ ಇಲ್ಲ. ವಿಶ್ವಾಸ ಬೇಕು ಅಷ್ಟೇ, ಅದನ್ನ ನಾವು ಉಳಿಸಿಕೊಳ್ಳಬೇಕು. ಜನವರಿ ಅಂತ್ಯದ ಒಳಗೆ ನಾವು ಎಲ್ಲಾ ನಿರ್ಧಾರ ಮಾಡ್ತೇವೆ ಎಂದು ತಿಳಿಸಿದರು.

ಲೋಕಸಭೆಗೆ ನಿಖಿಲ್ ಸ್ಪರ್ಧಿಸಿದರೆ ಬೆಂಬಲ ನೀಡುವುದರಲ್ಲಿ ನಾನೇ ಮೊದಲಿಗ: ಶಿವರಾಮೇಗೌಡ

ಲೋಕಸಭಾ ಚುನಾವಣೆಯಲ್ಲಿ ನೀವು ಸ್ಪರ್ಧೆ ಮಾಡ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ನನ್ ಎದುರಿಗೆ ಆ ಥರ ಆಲೋಚನೆ ಇಲ್ಲ. ಮಾಧ್ಯಮದಲ್ಲಿ ಈ ಥರ ಸುದ್ದಿ ಬರ್ತಿದೆ. ನಮ್ಮ ಜನರು, ಕಾರ್ಯಕರ್ತರು ಹಾಗೆ ಅನ್ಕೊಂಡಿದ್ದಾರೆ. ನಾನು ಇಲ್ಲಿ ಬಂದ್ರೆ ಡೆವಲಪ್ಮೆಂಟ್ ಆಗುತ್ತದೆ, ಒಳ್ಳೇದಾಗುತ್ತೆ ಅಂತ ಅವರವರ ಭಾವನೆಯಿದೆ. ನಮ್ಮನ್ನ ಬಿಜೆಪಿ ಸ್ನೇಹಿತರು ಸಹ ಆ ಥರ ಅನ್ಕೊಂಡಿದ್ದಾರೆ. ನಾನು ಚುನಾವಣೆ ನಿತ್ಕೊಂಡ್ರೆ ಒಳ್ಳೇದಾಗುತ್ತೆ ಅಂತ. ನನಗೆ ಆ ಥರ ಆಲೋಚನೆ ಇಲ್ಲ. ನಾನು ಕರ್ನಾಟಕದಲ್ಲೇ ಇರೋಕೆ ತೀರ್ಮಾನ ಮಾಡಿದ್ದೇನೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಶಿಂಧೆ, ಅಜಿತ್ ಪವಾರ್ ಕೂಡ ಇದ್ದಾರೆ:  ಇನ್ನು ಬಿಜೆಪಿಯೊಂದಿಗಿನ ಮೈತ್ರಿ ಬಗ್ಗೆ ಜೆಡಿಎಸ್ ನಲ್ಲಿ ಗೊಂದಲ್ಲ‌ಇಲ್ಲ. ನಮ್ಮ ಶಾಸಕರಲ್ಲಿಯೂ ಸ್ಪಷ್ಟತೆ ಇದೆ. ಬಿಜೆಪಿ ಸಣ್ಣಪುಟ್ಟ ಸಮಸ್ಯೆಗಳು ಇವೆ ಅದನ್ನು ಅವರ ಹೈಕಮಾಂಡ್ ಸರಿಪಡಿಸಿಕೊಳ್ಳತಾರೆ. ನಾವು ಎಷ್ಟು ಸೀಟ್ ಗೆಲ್ತಿವೋ ಅಷ್ಟೇ ಕೇಳ್ತಿವಿ. ಷ್ಟು ಅನ್ನೋದು ಸದ್ಯದಲ್ಲಿ ಹೇಳ್ತಿವಿ. ಕರ್ನಾಟದ ರಾಜಕೀಯದಲ್ಲಿ ಶಿಂಧೆಯು ಇದ್ದಾರೆ, ಅಜೀತ್ ಪವಾರ್ ಸಹ ಇದ್ದಾರೆ . ಯಾರು ಮೊದಲು ಮುಂದೆ ಬರ್ತಾರೆ ನೋಡಬೇಕು. 2024ರ ನಂತರ ಸರ್ಕಾರ ಬೀಳುತ್ತೆದೆ ಅನ್ನೋದಕ್ಕಿಂತ ಸದ್ಯದ ಪರಿಸ್ಥಿತಿಯಲ್ಲಿ ಏನ್ ಬೇಕಾದ್ರು ಆಗಬಹುದು ಎಂದು ಹೇಳಿದರು.

ರಾಷ್ಟ್ರ ರಾಜಕಾರಣಕ್ಕೆ ಕುಮಾರಸ್ವಾಮಿ, 2024ರ ಚುನಾವಣೆಗೆ ಸ್ಪರ್ಧಿಸಲು ಮೋದಿ ಸೂಚನೆ?

ಯಾರ್ ಹಣೆ ಮೇಲೆ ಏನ್ ಬೇಕಾದ್ರೂ ಬರೆದಿರಬಹುದು: ಕುಮಾರಸ್ವಾಮಿ ಸೆಂಟ್ರಲ್ ಮಿನಿಸ್ಟರ್ ಆಗ್ತಾರಾ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ ಅವರು, ಯಾರ ಹಣೆ ಮೇಲೆ ಏನ್ ಬರ್ದಿದೆ ಅಂತ ಗೊತ್ತಿಲ್ಲ. ರಾಜಕೀಯದಲ್ಲಿ ಏನ್ ಬೇಕಾದ್ರು ಆಗಬೋದು. ಯಾರ್ ಹಣೆ ಮೇಲೆ ಏನ್ ಬರ್ದಿದೆ ನೋಡೋಣ. ಮೊನ್ನೆ ಚುನಾವಣೆ ರಿಸಲ್ಟ್ ಬಂದ್ಮೇಲೆ ಹೊಸಬರು ಮುಖ್ಯಮಂತ್ರಿ ಆದರು. ಹಾಗಾಗಿ ರಾಜಕೀಯದಲ್ಲಿ ಯಾವಾಗ ಬೇಕಾದ್ರು ಏನ್ ಬೇಕಾದ್ರೂ ಆಗಬೋದು ಅಷ್ಟೇ. ಇನ್ನು ನಾವು ಎಷ್ಟು ಗೆಲ್ತಿವಿ, ಅಲ್ಲೆಲ್ಲ ಕಡೆ ಕ್ಷೇತ್ರ ಬೇಕು ಅಂತ ಕೇಳ್ತೇವೆ. ನಾವು ಎಲ್ಲೆಲ್ಲಿ ಗೆಲ್ತಿವಿ ಅಂತ ನಮ್ಮ ಬಳಿ ರಿಪೋರ್ಟ್ ಇದೆ. ಆ ರಿಪೋರ್ಟ್ ಪ್ರಕಾರ ನಾವು ಕೆಲಸ ಮಾಡ್ತೇವೆ. ಸೀಟ್ ಹಂಚಿಕೆ ಒಂದೇ ಪ್ರಮುಖವಲ್ಲ. ವಿಶ್ವಾಸ ಮುಖ್ಯ, ಆ ನಿಟ್ಟಿನಲ್ಲಿ ಕೆಲಸ ಮಾಡ್ತೇವೆ ಎಂದು ತಿಳಿಸಿದರು.

Follow Us:
Download App:
  • android
  • ios