Asianet Suvarna News Asianet Suvarna News

ರಾಜ್ಯಸಭಾ ಸದಸ್ಯರಾಗಿ ಮೂವರು ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕಾರ, ದೇವೇಗೌಡ್ರು ಗೈರು

ನೂತನವಾಗಿ ಆಯ್ಕೆಯಾಗಿದ್ದ ಕರ್ನಾಟಕದ ಮೂವರು ರಾಜ್ಯಸಭಾ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು.  ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷ ವಾಗಿತ್ತು. 

newly elected 3 Karnataka rajyasabha Members takes oath In Kannada On July 22
Author
Bengaluru, First Published Jul 22, 2020, 7:33 PM IST

ನವದೆಹಲಿ, (ಜುಲೈ.22): ನೂತನವಾಗಿ ಆಯ್ಕೆಯಾಗಿದ್ದ ಮೂವರು ರಾಜ್ಯಸಭಾ ಸದಸ್ಯರು ಇಂದು (ಬುಧವಾರ) ಪ್ರಮಾಣ ವಚನ ಸ್ವೀಕರಿಸಿದರು.

ಬಿಜೆಪಿ ಪಕ್ಷದ ಈರಣ್ಣ ಕಡಾಡಿ, ಅಶೋಕ್ ಗಸ್ತಿ, ಕಾಂಗ್ರೆಸ್ ಪಕ್ಷದ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಸಭಾ ಸಭಾಪತಿ ಎಂ.ವೆಂಕಯ್ಯನಾಯ್ಡು ಗೌಪ್ಯತೆ ಬೋಧಿಸಿದರು.ಆದ್ರೆ, ಎಚ್‌ಡಿ ದೇವೇಗೌಡ ಅವರು ಗೈರಾಗಿದ್ದಾರೆ.

ಎಲೆಕ್ಷನ್ ಇಲ್ಲದೇ ದೇವೇಗೌಡ ಸೇರಿದಂತೆ 4 ಅಭ್ಯರ್ಥಿಗಳು ರಾಜ್ಯಸಭೆಗೆ ಆಯ್ಕೆ

ಮೂರು ಮಂದಿ ಸಂಸದರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷ ವಾಗಿತ್ತು. ಅಶೋಕ್ ಗಸ್ತಿ ಮತ್ತು ಈರಣ್ಣ ಕಡಾಡಿಯವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ,  ಆಯ್ಕೆ ಮಾಡಿದ ಪಕ್ಷಕ್ಕೆ, ಶಾಸಕರಿಗೆ, ಹೈಕಮಾಂಡ್ ಗೆ ಧನ್ಯವಾದ ಅರ್ಪಿಸಿದರು. ಅಲ್ಲದೇ, ರಾಜ್ಯಸಭೆಯಲ್ಲಿ ಚರ್ಚೆ ಮಾಡಲು ಬಹಳಷ್ಟು ವಿಷಯಗಳು ಇವೆ. ಗಡಿ ವಿಚಾರ, ಕೊರೊನಾ ಹೀಗೆ ಹಲವು ವಿಚಾರಗಳು ಇವೆ ಎಂದರು.

ಅಶೋಕ್ ಗಸ್ತಿ ಮಾತು,
ಪಕ್ಷದ ಕಾರ್ಯಕರ್ತನೊಬ್ಬನಿಗೆ ಈ ಅವಕಾಶ ಮಾಡಿಕೊಟ್ಟ ಪಕ್ಷಕ್ಕೆ , ಪ್ರಧಾನಿ ಮೋದಿ ಹಾಗು ಬಿಎಸ್ ವೈ ಅವರಿಗೆ ಧನ್ಯವಾದ ಅರ್ಪಿಸಿದರು. ಜೊತೆಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ನಾನು ಶ್ರಮಿಸಲಿದ್ದೇನೆ ಎಂದರು.

ಈರಣ್ಣ ಕಡಾಡಿ  ಪ್ರತಿಕ್ರಿಯೆ
ರಾಜ್ಯಸಭಾ ನೂತನ ಸದಸ್ಯನಾಗಿ ಪ್ರಮಾಣವಚನ ಸ್ವೀಕರಿಸಿದ್ದು ಸಂತೋಷ ತಂದಿದೆ. ನಾನು ರೈತ ಕುಟುಂಬದಿಂದ ಬಂದಿದ್ದೇನೆ. ರೈತರ ಆದಾಯ ದ್ವಿಗುಣ ಗೊಳಿಸುವ ಬಗ್ಗೆ ನನ್ನ ಆಸಕ್ತಿ ಇದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತೇನೆ ವಿಶ್ವಾಸ ವ್ಯಕ್ತಪಡಿಸಿದರು.

ಎಲ್ಲವೂ ಅಚ್ಚರಿ
 ನಾನು ಎಂಎಲ್ ಸಿ ಆಗಬೇಕು ಅಂತಿದ್ದವನು. ರಾಜ್ಯಸಭೆಯ ಬಗ್ಗೆ ಯೋಚಿಸಿರಲಿಲ್ಲ.ಆದರೆ ನನ್ನ ಬಗ್ಗೆ ಹಲವು ದಿನಗಳ ಹಿಂದೆ ಪಕ್ಷ ವಿವರಗಳನ್ನು ಪಡೆದಿತ್ತು. ನಾನು ಅಂದುಕೊಂಡಿದ್ದೆ ಯಾವುದಾದರೊಂದು ನಿಗಮಕ್ಕೆ ಸದಸ್ಯನಾಗಿಸಬಹುದು ಅಂಥ. ಆದರೆ ರಾಜ್ಯಸಭೆಗೆ ಆಯ್ಕೆ ಮಾಡಿದ್ದು ಅಚ್ಚರಿ ತಂದಿತು. ನನಗೆ ಫೋನ್ ಕಾಲ್ ಬರುವ ತನಕ ಗೊತ್ತೇ ಇರಲಿಲ್ಲ ಅಂಥ ಈರಣ್ಣ ಕಡಾಡಿ ಅನಿಸಿಕೆ ಹಂಚಿಕೊಂಡರು.

ಅಧ್ಯಕ್ಷರ ಜೊತೆ ಇದ್ದೆ,ಆದರೂ ಗೊತ್ತಿರಲಿಲ್ಲ
 ನನಗೆ ರಾಜ್ಯಸಭೆಯ ಸೀಟು ಘೋಷಿಸಿದಾಗ ನಾನು ಮತ್ತು ನಮ್ಮ ರಾಜ್ಯಾಧ್ಯಕ್ಷರು ಸಭೆಯೊಂದರಲ್ಲಿ ಇದ್ವಿ. ಮಾಧ್ಯಮಗಳಲ್ಲಿ ಹೆಸರು ಬರುವುದಕ್ಕೆ ಶುರುವಾಯ್ತು. ಎಲ್ಲರೂ ಬಂದು ಹೇಳೋಕೆ ಶುರು ಮಾಡಿದರು. ಅದೇ ವೇಳೆ ಪಕ್ಷದಿಂದ ಫೋನ್ ಕರೆ ಬಂದಾಗ ಖಚಿತವಾಯಿತು ಅಂತಾರೆ ಅಶೋಕ್ ಗಸ್ತಿ.

Follow Us:
Download App:
  • android
  • ios