ಲೋಕಸಭಾಚುನಾವಣೆಗೆ ಬಿಜೆಪಿ ತಯಾರಿ ಮಾಡಿಕೊಳ್ಳುತ್ತಿದೆ.  ಇದರ ಬೆನ್ನಲ್ಲೇ ಬಿಜೆಪಿಗೆ ಹಿನ್ನಡೆಯಾಗಿದೆ. ಸ್ವಾತಂತ್ರ್ಯ ವೀರ ಸುಭಾಷ್ ಚಂದ್ರ ಬೋಸ್ ಮೊಮ್ಮಗ ಚಂದ್ರಕುಮಾರ್ ಬೋಸ್ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.

ಕೋಲ್ಕತಾ(ಸೆ.06) ಲೋಕಸಭಾ ಚುನಾವಣೆಗೆ ಕೆಲ ತಿಂಗಳು ಮಾತ್ರ ಬಾಕಿ. ಒಂದೆಡೆ ಇಂಡಿಯಾ ಒಕ್ಕೂಟದ ಮೈತ್ರಿ ಕೂಡ ನಿರಂತರ ಸಭೆ ನಡೆಸುತ್ತಿದೆ. 26ಕ್ಕೂ ಹೆಚ್ಚು ಪಕ್ಷಗಳು ಇಂಡಿಯಾ ಒಕ್ಕೂಟದಲ್ಲಿ ಸೇರಿಕೊಂಡಿದೆ. ಇತ್ತ ಬಿಜೆಪಿ ಕೂಡ ರಣತಂತ್ರ ರೂಪಿಸುತ್ತಿದೆ. ಇದರ ನಡುವೆ ಬಿಜೆಪಿಗೆ ಹಿನ್ನಡೆಯಾಗಿದೆ. ಸ್ವಾತಂತ್ರ್ಯ ವೀರ ಸುಭಾಷ್ ಚಂದ್ರ ಬೋಸ್ ಮೊಮ್ಮಗ ಚಂದ್ರಕುಮಾರ್ ಬೋಸ್ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಪಶ್ಚಿಮ ಬಂಗಾಳದ ಬಿಜೆಪಿ ಉಪಾಧ್ಯಕ್ಷರಾಗಿರುವ ಚಂದ್ರ ಕುಮಾರ್ ಬೋಸ್ ಪಕ್ಷ ತೊರೆದಿರುವುದು ಬಿಜೆಪಿಗೆ ತೀವ್ರ ಹಿನ್ನಡೆಯಾಗಿದೆ.

ರಾಜ್ಯ ಬಿಜೆಪಿ ಹಾಗೂ ಕೇಂದ್ರ ಬಿಜೆಪಿಯಿಂದ ನನಗೆ ಯಾವುದೇ ಬೆಂಬಲ ಸಿಕ್ಕಿಲ್ಲ. ಉದ್ದೇಶಿಸಿದ ಯೋಜನೆಗಳನ್ನು ಸಾಕಾರಗಳೊಳಿಸಲು ನನಗೆ ಬಿಜೆಪಿ ಸಹಕಾರ ನೀಡಲಿಲ್ಲ ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಬಂಗಾಳ ಜನತೆಯನ್ನು ತಲುಪಲು, ತಳಮಟ್ಟದಿಂದ ಪಕ್ಷ ಸಂಘಟಿಸಲು ಹಲವು ಕಾರ್ಯಕ್ರಮಗಳನ್ನು ರೂಪಿಸಿ ನೀಡಿದ್ದೇನೆ. ಆದರೆ ನನ್ನ ಯಾವುದೇ ಕಾರ್ಯಕ್ರಮಗಳಿಗೆ ಬೆಂಬಲ ಸಿಕ್ಕಿಲ್ಲ ಎಂದು ಚಂದ್ರ ಕುಮಾರ್ ಬೋಸ್ ಹೇಳಿದ್ದಾರೆ.

ಭಾಷಣದಲ್ಲಿ ಬರೀ ವೋಳು... ಮತ್ತೆ ನಗೆಪಾಟಲೀಗೀಡಾದ ಮಮತಾ ಬ್ಯಾನರ್ಜಿ

ಪ್ರಧಾನಿ ನಾಯಕತ್ವ ಹಾಗೂ ಆಡಳಿತವನ್ನು ಹೊಗಳಿರುವ ಚಂದ್ರ ಕುಮಾರ್ ಬೋಸ್, ಬಿಜೆಪಿ ಇತರ ನಾಯಕರನ್ನು ದೂಷಿಸಿದ್ದಾರೆ. ಪಶ್ಚಿಮ ಬಂಗಾಳ ಬಿಜೆಪಿ ಹಾಗೂ ಕೇಂದ್ರ ಬಿಜೆಪಿಯಲ್ಲಿರುವ ನಾಯಕರು ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ದೂರಿದ್ದಾರೆ. ಈಗಾಗಲೇ ತಮ್ಮ ರಾಜೀನಾಮೆ ಪತ್ರವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾಗೆ ರವಾನಿಸಿದ್ದಾರೆ.

ಪಶ್ಚಿಮ ಬಂಗಾಳ ಬಿಜೆಪಿಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಇದರಿಂದ ಚಂದ್ರ ಕುಮಾರ್ ಬೋಸ್ ಮುನಿಸಿಕೊಂಡಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಹೆಚ್ಚಿನ ಸೀಟು ಗೆಲ್ಲಲು ಬಿಜೆಪಿ ಪ್ಲಾನ್ ಮಾಡಿದೆ. ಆದರೆ ಲೋಕಸಭೆಗೂ ಮುನ್ನವೇ ಪಕ್ಷದ ಉಪಾಧ್ಯಕ್ಷ ಚಂದ್ರ ಕುಮಾರ್ ಬೋಸ್ ರಾಜೀನಾಮೆ ನೀಡಿರುವುದು ಹಿನ್ನಡೆಗೆ ಕಾರಣವಾಗಿದೆ.

ಬಂಗಾಳ ಮಹಿಳಾ ಬಿಜೆಪಿ ಕಾರ್ಯಕರ್ತೆಯನ್ನು ನಗ್ನಗೊಳಿಸಿ ಮೆರವಣಿಗೆ, ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ಸಂಸದೆ!

ಸಿಎಂ ಮಮತಾ ಬ್ಯಾನರ್ಜಿ ಬಿಗಿ ಹಿಡಿತದಲ್ಲಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಬಾವುಟ ಹಾರಿಸಲು ಶತ ಪ್ರಯತ್ನ ನಡೆಯುತ್ತಿದೆ. ಆದರೆ ಬಿಜೆಪಿ ಪ್ರಯತ್ನದ ನಡುವೆ ಕೆಲ ಘಟನೆಗಳು ಪಕ್ಷಕ್ಕೆ ಮತ್ತಷ್ಟು ಹಿನ್ನೆಡೆ ತರುತ್ತಿದೆ. ಕಳೆದ ವಿಧಾನಸಭೆಯಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಬಿಜೆಪಿ, ಲೋಕಸಭೆಯಲ್ಲಿ 2019ರ ದಾಖಲೆ ಪುಡಿ ಮಾಡಲು ತಯಾರಿ ನಡೆಸುತ್ತಿದೆ.