ತೆಲುಗು ದೇಶಂ ಪಕ್ಷದಿಂದ ಮಂಡಿಸಲಾಗಿರುವ ಅವಿಶ್ವಾಸ ಗೊತ್ತುವಳಿ ಸಭಾತ್ಯಾಗ ಮಾಡಿದ ಬಿಜೆಡಿಯ 19 ಸದಸ್ಯರು

ನವದೆಹಲಿ: ತೆಲುಗು ಸೇಶಂ ಪಕ್ಷಮಂಡಿಸಿರುವ ಅವಿಶ್ವಾಸ ಗೊತ್ತುವಳಿ ನಿರ್ಣಯದ ಮೇಲೆ ಸಂಸತ್ತಿನಲ್ಲಿ ಚರ್ಚೆ ಆರಂಭವಾಗಿದೆ.

ಆದರೆ ಈ ಅಗ್ನಿಪರೀಕ್ಷೆಯಲ್ಲಿ ಗೆಲ್ಲುವ ವಿಶ್ವಾಸದಲ್ಲಿರುವ ಬಿಜೆಪಿಗೆ ಅದರ ಮಿತ್ರ ಪಕ್ಷ ಶಿವಸೇನೆ ಶಾಕ್ ನೀಡಿದೆ.

ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆಯಲ್ಲಿ ಭಾಗಿಯಾಗದಿರಲು ನಿರ್ಧರಿಸಿರುವ ಶಿವಸೇನೆ ಕಲಾಪದಿಂದ ದೂರವುಳಿಯಲು ನಿರ್ಧರಿಸಿದೆ.

ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಬಳಿಕ ಶಿವಸೇನೆ ಮತ್ತು ಬಿಜೆಪಿ ನಡುವಿನ ಸಂಬಂಧ ಹಳಸಿದೆ. ಮೋದಿ ಸರ್ಕಾರದ ನೀತಿಗಳನ್ನು ಕಟುವಾಗಿ ಟೀಕಿಸುತ್ತಿರುವ ಶಿವಸೇನೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಲ್ಲವೆಂದು ಈಗಾಗಲೆ ಹೇಳಿದೆ. 

ಈ ನಡುವೆ, ಚರ್ಚೆಗೆ ಕಡಿಮೆ ಸಮಯ ನೀಡಿದ್ದನ್ನು ವಿರೋಧಿಸಿ ಬಿಜು ಜನತಾದಳದ 19 ಸಂಸದರು ಸಭಾತ್ಯಾಗ ಮಾಡಿದ್ದಾರೆ.

ಸಂಸತ್ತಿನ ಹಾಲಿ ಸದಸ್ಯಬಲ 533 ಆಗಿದ್ದು ಎನ್ ಡಿಎ 312, ಯುಪಿಎ 148 ಹಾಗೂ ಇತರರು 73 ಸ್ಥಾನಗಳನ್ನು ಹೊಂದಿದ್ದಾರೆ.